ವಿಕ ಸುದ್ದಿಲೋಕ, ಉಪ್ಪಿನಂಗಡಿ
ಸಾರ್ವಜನಿಕ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿಅ.30ರಂದು ಸ್ವರಾಜ್ ಮೈದಾನದಲ್ಲಿನಡೆದ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿಉಪ್ಪಿನಂಗಡಿ ಇಂದ್ರಪ್ರಸ್ಥ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಹಸನ್ ವದೂದ್ ಎಚ್ . ಅವರು ಎತ್ತರ ಜಿಗಿತ ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ
ಅವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಿನಾಥ್ , ವಿದ್ಯಾ, ಶ್ರೀರಂಜಿನಿ ತರಬೇತಿ ನೀಡಿದ್ದಾರೆ. ಅಹಸನ್ ವದೂದ್ ಕೊಡಿಪ್ಪಾಡಿ ನಿವಾಸಿ ಹಿದಾಯತುಲ್ಲಾಹಾಗೂ ತಸ್ನೀಮಾ ದಂಪತಿಯ ಪುತ್ರ. ವಿದ್ಯಾರ್ಥಿಗೆ ಕಾಲೇಜಿನ ಪ್ರಿನ್ಸಿಪಾಲ್ ಎಚ್ .ಕೆ. ಪ್ರಕಾಶ್ ಅಭಿನಂದನೆ ಸಲ್ಲಿಸಿದ್ದಾರೆ.
ಫೊಟೋ- 31ಯುಪಿಪಿಐ- ಅಹಸನ್ ವದೂದ್ .

