ಬಂಗಾರಪ್ಪ ನೀಡಿದ ಯೋಜನೆಗಳು ಸದಾ ಜೀವಂತ
ವಿಕ ಸುದ್ದಿಲೋಕ ಸೊರಬ
ಮಾಜಿ ಮುಖ್ಯಮಂತ್ರಿ ಎಸ್ .ಬಂಗಾರಪ್ಪ ಅವರು ರಾಜ್ಯಕ್ಕೆ ಅವರು ನೀಡಿದ ಕೊಡುಗೆ ಸದಾ ಜೀವಂತ ಎಂದು ವಿಧಾನಸಭೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಕೊಳ್ಳೆಗಾಲ ಶಾಸಕ ಎ.ಆರ್ .ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಬಂಗಾರಧಾಮಕ್ಕೆ ಗುರುವಾರ ಭೇಟಿ ನೀಡಿ ಬಂಗಾರಪ್ಪ ಸಮಾಧಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ,
ಮಾಜಿ ಮುಖ್ಯಮಂತ್ರಿ ಎಸ್ .ಬಂಗಾರಪ್ಪನವರು ತಮ್ಮ ಅಧಿಕಾರವಧಿಯಲ್ಲಿಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಲ್ಲದೆ ಇಂದಿಗೂ ಅವು ಜನಮಾನಸದಲ್ಲಿಉಳಿದಿವೆ. ಬಂಗಾರಪ್ಪನವರು ಉತ್ತಮ ಕ್ರೀಡಾಪಟು ಆಗಿರುವ ಜತೆಗೆ ಸದೃಢ ಆರೋಗ್ಯ ಹೊಂದಿ ರಾಜಕಾರಣಿಗಳಿಗೆ ಮಾದರಿಯಾಗಿದ್ದರು ಎಂದರು.
ಈ ಸಂದರ್ಭ ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ತಾ.ಪಂ. ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್ , ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ ಮತ್ತಿತರರು ಹಾಜರಿದ್ದರು.
30ಸೊರಬಪಿ1:
ಸೊರಬ ಬಂಗಾರಧಾಮಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಆರ್ .ಕೃಷ್ಣಮೂರ್ತಿ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.

