31 ಎಎಲ್ಡಿ 2 ಪ್ರಿಯಾಂಕ್ ಖರ್ಗೆ ಸಚಿವರು.
31 ಎಎಲ್ಡಿ 3 ಬಿ.ಆರ್ .ಪಾಟೀಲ್ , ಶಾಸಕರು.
**
ಶಾಸಕ ಬಿ.ಆರ್ .ಪಾಟೀಲ್ ಗೆ ರೈತರಿಂದ ಸನ್ಮಾನ ಸಮಾರಂಭ(ಕಿಕ್ಕರ್ )
ಆಳಂದಗೆ ಇಂದು ಸಚಿವ ಪ್ರಿಯಾಂಕ್ ಖರ್ಗೆ
ಆಳಂದ : ಜಿಲ್ಲೆಯಲ್ಲಿಯೇ ಆಳಂದ ತಾಲೂಕಿಗೆ ಹೆಚ್ಚಿನ ಬೆಳೆವಿಮೆ ಮಂಜೂರಾಗಿದ್ದು, ಅದನ್ನು ಬಿಡುಗಡೆ ಮಾಡಿ ರೈತರ ಖಾತೆಗಳಿಗೆ ಜಮಾ ಮಾಡಿಸಲು ಕಾರಣೀಕರ್ತರಾದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ಹಾಗೂ ಐಟಿ,ಬಿಟಿ ಮತ್ತು ಕಲಬುರಗಿ ಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕರ್ನಾಟಕ ರಾಜ್ಯ ನೀತಿ ಹಾಗೂ ಯೋಜನಾ ಆಯೋಗ ಉಪಾಧ್ಯಕ್ಷ, ಶಾಸಕ ಬಿ.ಆರ್ .ಪಾಟೀಲ್ ಅವರನ್ನು ತಾಲೂಕಿನ ರೈತರ ವತಿಯಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪಿಎಲ್ಡಿ ಬಾಂಕ್ ಮಾಜಿ ಅಧ್ಯಕ್ಷ ಶರಣಬಸಪ್ಪ ವಾಗೆ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದಲ್ಲಿರುವ ವೀರಶೈವ ಲಿಂಗಾಯತ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ರೈತರು ಈ ಸಮಾರಂಭದಲ್ಲಿಭಾಗವಹಿಸಲಿದ್ದಾರೆಂದು ಹೇಳಿಕೆಯಲ್ಲಿತಿಳಿಸಿದ್ದಾರೆ.

