ಅರವಿಂದ್ ನಮ್ಮ ಕುಡ್ಲ
ವಿಕ ಸುದ್ದಿಲೋಕ ಮಂಗಳೂರು
ಅಶೋಕ ನಗರದ ಕರ್ನಾಟಕ ಆಯುರ್ವೇದ ಮೆಡಿಕಲ… ಕಾಲೇಜು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ ಗುರುವಾರ ವಿಶ್ವ ಸಂಧಿವಾತ ದಿನಾಚರಣೆಯ ಪೂರ್ವಸಂಧ್ಯೆಯಲ್ಲಿಸಂಧಿವಾತ ಜಾಗೃತಿ ಹಾಗೂ ವೈದ್ಯಕೀಯ ಉಚಿತ ಶಿಬಿರ ನಡೆಯಿತು.
ಕಾಲೇಜಿನ ಪ್ರಿನ್ಸಿಪಾಲ್ ಡಾ. ಸಜಿತ್ ಮಂಗಲಶೇರಿ ಶಿಬಿರ ಉದ್ಘಾಟಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ಉದಯ… ಡಿ.ಕೆ. ಉಪಸ್ಥಿತರಿದ್ದರು. ಕಾಯಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಕೆ. ರವೀಂದ್ರ ಭಟ್ ಸ್ವಾಗತಿಸಿದರು. ಕಾಯಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ವಹೀದಾ ಭಾನು ಕಾರ್ಯಕ್ರಮದ ಪರಿಚಯ ಶಿಬಿರದಲ್ಲಿಡಾ. ವಹೀದಾ ಭಾನು ಮತ್ತು ಡಾ. ರವೀಂದ್ರ ಭಚ್ ಸಹ-ಮಾರ್ಗದರ್ಶಕರಾಗಿ ಸಲಹೆ ಕಾರ್ಯದಲ್ಲಿಭಾಗವಹಿಸಿದರು. ಉಚಿತ ಆಯುರ್ವೇದ ಔಷಧಗಳನ್ನು ಹಂಚಲಾಯಿತು. ಕಾಯಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕೃತಿ ಎನ್ .ಕೆ ವಂದಿಸಿದರು. ಉಪ ವೈದ್ಯಕೀಯ ಅಧೀಕ್ಷಕರಾದ ಡಾ.ಅರ್ಚನಾ ಪಿ., ಇಂಟರ್ನ್ ಡಾ. ಸಂಜನಾ ಪ್ರಾರ್ಥಿಸಿದರು.
ಚಿತ್ರ: 30ಎಂ-ಎಸ್ ಇಎಸ್

