ಒಂದೇ ಕುಟುಂಬ ಆತ್ಮಹತ್ಯೆ ಪ್ರಕರಣ, ಆಸ್ಪತ್ರೆಗೆ ಸಚಿವ ಮುನಿಯಪ್ಪ ಭೇಟಿ
ವಿಕ ಸುದ್ದಿಲೋಕ ಬೆಂಗಳೂರು ಗ್ರಾಮಾಂತರ
ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಪ್ರಕರಣದಲ್ಲಿಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಜಿಲ್ಲಾಉಸ್ತುವಾರಿ ಸಚಿವ ಕೆ.ಎಚ್ . ಮುನಿಯಪ್ಪ ಶುಕ್ರವಾರ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿ ಗ್ರಾಮದಲ್ಲಿಗುರುವಾರ ರಾತ್ರಿ ಸಾಲಬಾಧೆ ತಾಳದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಅದರಲ್ಲಿಕುಮಾರಪ್ಪ (45) ಮತ್ತು ಅರುಣ್ (30) ಮೃತಪಟ್ಟಿದ್ದಾರೆ. ರಮಾ (60) ಮತ್ತು ಅಕ್ಷಯ್ (25)ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಚಿವ ಕೆ.ಎಚ್ . ಮುನಿಯಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಕುಟುಂಬದವರಿಗೆ ಧೈರ್ಯ ಹೇಳಿದ ಸಚಿವರು, ಸರಕಾರದಿಂದ ಎಲ್ಲರೀತಿಯ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಕೋಟ್ .....
ಅಧಿಕಾರಿಗಳಿಗೆ ಈ ಘಟನೆಯ ಸಂಪೂರ್ಣ ವರದಿ ಸಲ್ಲಿಸಲು, ಕುಟುಂಬಕ್ಕೆ ತುರ್ತು ಆರ್ಥಿಕ ನೆರವು ಒದಗಿಸಲು ಸೂಚನೆ ನೀಡಲಾಗಿದೆ. ಸಾಲದ ಒತ್ತಡದಿಂದ ಯಾರೂ ಇಂತಹ ನಿರ್ಧಾರ ತೆಗೆದುಕೊಳ್ಳದಂತೆ ಜನರಿಗೆ ಜಾಗೃತಿ ಮೂಡಿಸುವುದು ಸರಕಾರದ ಜವಾಬ್ದಾರಿ.
-ಕೆ.ಎಚ್ .ಮುನಿಯಪ್ಪ, ಜಿಲ್ಲಾಉಸ್ತುವಾರಿ ಸಚಿವ
ಫೋಟೋ: 31ವಿಕೆ11: ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿರುವವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಸಚಿವ ಕೆ.ಎಚ್ , ಮುನಿಯಪ್ಪ ಭೇಟಿ ನೀಡಿದ್ದರು.

