ಧಾರವಾಡ : ಧಾರವಾಡ ಸಾಯಿ ಪಿಯು ಕಾಲೇಜಿಲ್ಲಿಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾಗಿರಿಯ ಕರೋಕೆ ಸಹಯೋಗದಲ್ಲಿಕನ್ನಡ ಗೀತೆಗಳ ಸ್ಪರ್ಧೆಯನ್ನು ನ. 8 ಹಾಗೂ 9ರಂದು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಮೈನುದ್ದಿನ ಕಿರವಾಡಿ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸ್ಪರ್ಧೆಯಲ್ಲಿಭಾಗವಿಸಿದ ಪ್ರಥಮ ಸ್ಥಾನ ಪಡೆದವರಿಗೆ ಕನ್ನಡ ಗಾನ ಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಗುವುದು. ಸ್ಪರ್ಧಾಗಳು ಹೆಸರು ನೋಂದಣಿಗೆ ಮೊ, 8123727214, 7975277992, ಸಂಪರ್ಕಿಸಬಹುದು ಎಂದರು. ಪ್ರೀತಿ ದೊಡ್ಡಮನಿ ಸೇರಿದಂತೆ ಮತ್ತಿತರರು ಇದ್ದರು.

