‘ಉತ್ತಮ ಶಿಕ್ಷಣದಿಂದ ಭವಿಷ್ಯ’

Contributed bykariyappa.kudupali@gmail.com|Vijaya Karnataka
Subscribe

ರಟ್ಟೀಹಳ್ಳಿ ಪ್ರಿಯದರ್ಶಿನಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ 'ವಿಜಯ ಕರ್ನಾಟಕ' ಪತ್ರಿಕೆಯ 'ವಿಕ ಮನಿ' ವಿಶೇಷ ಸಂಚಿಕೆಯನ್ನು ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಅವರು ಉಚಿತವಾಗಿ ವಿತರಿಸಿದರು. ಉತ್ತಮ ಶಿಕ್ಷಣದೊಂದಿಗೆ ಆರ್ಥಿಕ ಜ್ಞಾನ ಪಡೆಯಲು ಇದು ಸಹಕಾರಿ ಎಂದರು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

future through quality education key article delivery to students

* ರಟ್ಟೀಹಳ್ಳಿ ಪ್ರಿಯದರ್ಶಿನಿ ಕಾಲೇಜಿನಲ್ಲಿವಿಕ ಮನಿ ಬಿಡುಗಡೆ

‘ಉತ್ತಮ ಶಿಕ್ಷಣದಿಂದ ಭವಿಷ್ಯ’

ವಿಕ ಸುದ್ದಿಲೋಕ ರಟ್ಟೀಹಳ್ಳಿ

ತಂದೆ, ತಾಯಿಗಳಿಗೆ ನಿರಾಸೆ ಮಾಡದೇ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ವಿಜಯ ಕರ್ನಾಟಕ ಪತ್ರಿಕೆ ಕೇವಲ ಸುದ್ದಿಗೆ ಮಾತ್ರ ಸೀಮಿತವಾಗದೇ ಹೊಸ ವಿಷಯಗಳನ್ನು ಹೊರ ತರುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಹೇಳಿದರು.

ರಟ್ಟೀಹಳ್ಳಿ ಪ್ರಿಯದರ್ಶಿನಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಕ ಮನಿ ಪತ್ರಿಕೆಯನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಅವರು, ‘‘ತಂತ್ರಜ್ಞಾನದ ಯುಗದಲ್ಲಿವಿದ್ಯಾರ್ಥಿಗಳು ಸಾಗಬೇಕಾಗಿದೆ. ಹಣಕಾಸು, ಆರ್ಥಿಕ ಬೆಳವಣಿಗೆಗಳ ಬಗ್ಗೆ ತಿಳಿಸುವ ಮತ್ತು ವಿದ್ಯಾರ್ಥಿಗಳನ್ನು ವಿವಿಧ ಬಗೆಯ ಉದ್ಯೋಗಗಳಿಗೆ ಸಜ್ಜುಗೊಳಿಸುವಲ್ಲಿಮತ್ತು ಅಗತ್ಯ ಆರ್ಥಿಕ ಮಾಹಿತಿ ಒದಗಿಸುವ ನಿಟ್ಟಿನಲ್ಲಿಪತ್ರಿಕೆ ಸಹಕಾರಿಯಾಗಿದೆ. ತಾವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಕ ಮನಿ ಪತ್ರಿಕೆ ಒದಗಿಸಿಕೊಟ್ಟಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ, ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ ಮತ್ತು ಪ್ರಾಚಾರ್ಯ ರಾಘವೇಂದ್ರ ಎ.ಜಿ. ಮಾತನಾಡಿ, ‘‘ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಜಯ ಕರ್ನಾಟಕ ಪತ್ರಿಕೆಯನ್ನು ದೇವರಾಜ ನಾಗಣ್ಣನವರ ಒದಗಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು’’ ಎಂದರು.

ಈ ಸಂದರ್ಭದಲ್ಲಿಜಿಲ್ಲಾಲೋಕಾಯುಕ್ತ ಸಬ್ ಇನ್ಸಪೆಕ್ಟರ್ ದಾದಾವಲಿ, ಪಿಯು ಕಾಲೇಜ್ ಪ್ರಾಚಾರ್ಯ ಎಚ್ .ಎಚ್ .ಬ್ಯಾಡಗೌಡ್ರ, ಡಾ.ಸಿ.ಎಸ್ .ಕಮ್ಮಾರ, ಸಿ.ಎನ್ .ಸೊರಟೂರು,ಶ್ಯಾಮಸುಂದರ ಎಸ್ ., ಎಚ್ .ಬಿ.ಕೆಂಚಳ್ಳಿ, ಬಿ.ಸಿ.ತಿಮ್ಮೇನಹಳ್ಳಿ,ಎಂ.ಆರ್ .ಅಂಚಿ, ಶಾಂತಮ್ಮ ವಿ.ಎಸ್ ., ರಮೇಶ ಕಮತಳ್ಳಿ, ಸುಷ್ಮಾ ಮಾಯಾಚಾರಿ,ಪರ್ವಿನ್ ದೊಡ್ಡಮನಿ, ಸಂಜನಾ ಸಾಳುಂಕಿ, ಅಕ್ಷತಾ, ಕೃಷ್ಣ ಸಣ್ಣಗುಬ್ಬಿ ಮತ್ತಿತರರು ಇದ್ದರು.

29.ರಟ್ಟೀಹಳ್ಳಿ.1

ರಟ್ಟೀಹಳ್ಳಿ ಪ್ರಿಯದರ್ಶಿನಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಕ ಮನಿ ಪತ್ರಿಕೆಯನ್ನು ಒದಗಿಸಿದ ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಅವರನ್ನು ಸನ್ಮಾನಿಸಲಾಯಿತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ