ಸರಕಾರಿ ನೌಕರರೇ ‘ಸರಕಾರ’

Contributed bychandruhiremath06@gmail.com|Vijaya Karnataka
Subscribe

ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರು ಸರಕಾರಿ ನೌಕರರಿಗೆ ಪಂಚಸೂತ್ರ ತತ್ವದಂತೆ ಕೆಲಸ ಮಾಡಲು ಕರೆ ನೀಡಿದರು. ನೌಕರರು ಸರಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿದ್ದಾರೆ. ಅವರ ಸೇವಾ ಮನೋಭಾವ ಶ್ಲಾಘನೀಯ. ಈ ಸಂದರ್ಭದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಯಿತು.

government employees day government employees are everywhere

ಚಿತ್ರ:

**

ಸರಕಾರಿ ನೌಕರರು ಪಂಚಸೂತ್ರ ತತ್ವದಿಂದ ಕೆಲಸ ಮಾಡಲು ಪ್ರಿಯಾಂಕ್ ಕರೆ | ಸರಕಾರಿ ನೌಕರರ ದಿನಾಚರಣೆ, ಸರ್ವೋತ್ತಮ ಪ್ರಶಸ್ತಿ ಪ್ರದಾನ(ಕಿಕ್ಕರ್ )

ಸರಕಾರಿ ನೌಕರರೇ ‘ಸರಕಾರ’

ವಿಕ ಸುದ್ದಿಲೋಕ ಕಲಬುರಗಿ

ಸರಕಾರಿ ನೌಕರರೇ ಸರಕಾರವಿದ್ದಂತೆ. ಸಾರ್ವಜನಿಕರಿಗೆ ಹಾಗೂ ಸರಕಾರಕ್ಕೆ ನೌಕಕರು ಸೇತುವೆಯಾಗಿದ್ದಾರೆ. ಸರಕಾರದ ಯೋಜನೆಗಳನ್ನು ಕಟ್ಟ ಕಡೆಯ ಜನರಿಗೆ ತಲುಪಿಸುವ ಕೆಲಸ ನೌಕರರು ಮಾಡುತ್ತಿದ್ದಾರೆ. ಹಾಗಾಗಿ ಪಂಚಸೂತ್ರಗಳನ್ನು ಅಳವಡಿಸಿಕೊಂಡು ಕೆಲಸ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ನಗರದ ಡಾ.ಎಸ್ .ಎಂ.ಪಂಡಿತ ರಂಗಮಂದಿರದಲ್ಲಿರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾಘಟಕದಿಂದ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ದಿನಾಚರಣೆ ಪ್ರಯುಕ್ತ 2023, 2024, 2025ನೇ ಸಾಲಿನ ರಾಜ್ಯ ಸರಕಾರಿ ಅಧಿಕಾರಿ-ನೌಕರರಿಗೆ ‘ಸರ್ವೋತ್ತಮ ಸೇವಾ’ ಪ್ರಶಸ್ತಿ ಪ್ರದಾನ ಮತ್ತು 371ಜೆ ನಿಯಮಾವಳಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸರಕಾರ ನೀತಿ, ನಿಯಮಗಳನಗನ್ನು ರೂಪಿಸುತ್ತದೆ. ಆದರೆ, ಅದರ ಪರಿಣಾಮಕಾರಿ ಅನುಷ್ಠಾನದ ಜವಾಬ್ದಾರಿ ನೌಕರರದಾಗಿರುತ್ತದೆ ಎಂದರು.

ಜನಪ್ರತಿನಿಧಿಗಳು ಮತ್ತು ನೌಕರರು ಸಾರ್ವಜನಿಕರ ಸೇವಕರೇ ಆಗಿದ್ದಾರೆ. ಹಾಗಾಗಿ ಸ್ಪಂದನೆ, ಸಮಯಪ್ರಜ್ಞೆ, ಸಮನ್ವಯತೆ, ಹೊಣೆಗಾರಿಕೆ ಹಾಗೂ ಸಮರ್ಪಣಾ ಮನೋಭಾವ ಎಂಬ ಪಂಚಸೂತ್ರ ಗುಣಗಳನ್ನು ನೌಕರರು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಸರಕಾರಿ ಕಚೇರಿಗೆ ಜನರು ಪದೇ ಪದೆ ಅಲೆದಾಡದಂತೆ ಕೆಲಸ ಮಾಡಿಕೊಡಬೇಕು. ಕೆಲಸ ಆಗುವುದಿದ್ದರೆ ಆಗುತ್ತದೆ ಎಂದು ಹೇಳಿ, ಇಲ್ಲದಿದ್ದರೆ ಇಲ್ಲಎಂದು ನೇರವಾಗಿ ವಾಸ್ತವ ಹೇಳಿ ಎಂದರು.

**ಸರಕಾರಿ ಕೆಲಸ ದೇವರ ಕೆಲಸ: ನೌಕರರು ಕೆಲಸ ಮಾಡಿದ ಪರಿಣಾಮ ಅತಿವೃಷ್ಟಿಯಿಂದ ಜಿಲ್ಲೆಯ 3.50ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದರಿಂದ ಅನ್ನದಾತನಿಗೆ ಸರಕಾರದಿಂದ ಪರಿಹಾರ ನೀಡಲು ಸಾಧ್ಯವಾಗಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ನಿಖರ ದತ್ತಾಂಶದಿಂದ ಬಡ, ಮಧ್ಯದವರಿಗೆ ಕಲ್ಯಾಣ ಯೋಜನೆ ರೂಪಿಸಲು ಸಾಧ್ಯವಾಗಿದೆ ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಅರುಣಕುಮಾರ ಪಾಟೀಲ್ , ಪ್ರವೀಣ ಪಾಟೀಲ ಹರವಾಳ, ಮಜರ್ ಆಲಂ ಖಾನ್ , ಡಿಸಿ ಬಿ.ಫೌಜಿಯಾ ತರನ್ನುಮ…, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಸಿಇಒ ಭಂವಾರಸಿಂಗ್ ಮೀನಾ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ರಾಯಪ್ಪ ಹುಣಸಗಿ, ಡಾ.ಶರಣಬಸಪ್ಪ ಕ್ಯಾತನಾಳ, ಆನಂದಶೀಲ, ಶ್ರೀಮಂತ ಪಟ್ಟೇದಾರ, ಧರ್ಮರಾಯ ಜವಳಿ, ಚಂದ್ರಕಾಂತ ಏರಿ, ಎಂ.ಬಿ.ಪಾಟೀಲ…, ಸುರೇಶ ವಗ್ಗೆ, ಶಿವಶಂಕರಯ್ಯ ಮಠಪತಿ, ಸಿದ್ದಲಿಂಗಯ್ಯ ಮಠಪತಿ, ದಾನಪ್ಪಗೌಡ ಹಳಿಮನಿ, ನಿಜಲಿಂಗಪ್ಪ ಕೊರಳ್ಳಿ, ನಿಜಲಿಂಗಪ್ಪ ಮಾನ್ವಿ, ಸಂತೋಷ ಸಲಗರ ಸೇರಿ ಅನೇಕರಿದ್ದರು. ಮಹೇಶ ಹೂಗಾರ ನಿರೂಪಿಸಿದರು.

*ಕೋಟ್ *

ಜಿಲ್ಲಾಸರಕಾರಿ ನೌಕರರ ಭವನ ನಿರ್ಮಾಣಕ್ಕಾಗಿ ನಿವೇಶನ ಪಡೆಯಲು ಸುಮಾರು ರೂ 2.50 ಕೋಟಿ ಶುಲ್ಕ ವಿಧಿಸಲಾಗಿದೆ. ಆದರೆ, ಅಷ್ಟೊಂದು ಹಣ ನೀಡಲು ನೌಕಕರ ಸಂಘಕ್ಕೆ ಕಷ್ಟವಾಗುತ್ತದೆ. ಹಾಗಾಗಿ ಈ ವಿಚಾರವನ್ನು ಸಚಿವ ಸಂಪುಟದಲ್ಲಿಪ್ರಸ್ತಾಪಿಸಿ ಸಂಪೂರ್ಣ ವಿನಾಯಿತಿ ನೀಡಬೇಕು.

-ಬಸವರಾಜ ಬಳೂಂಡಗಿ, ಜಿಲ್ಲಾಧ್ಯಕ್ಷ ರಾಜ್ಯ ಸರಕಾರಿ ನೌಕರರ ಸಂಘ

***

*ಬಾಕ್ಸ್ *

ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ

2023, 2024 ಹಾಗೂ 2025ನೇ ಸಾಲಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದ ಸುಮಾರು 30 ನೌಕರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 2023ನೇ ಸಾಲಿಗೆ ಶಶಿಧರ ಬಾಳೆ, ಗಾಯತ್ರಿ, ವಿದ್ಯಾಧರ, ಲಲಿತಾ, ಜ್ಯೋತಿ, ಚಾಮರಾಜ ದೊಡ್ಡಮನಿ, ಡಾ.ಶಿವಶರಣಪ್ಪ ಉಕ್ಕಲಿ, ನಾಗುಬಾಯಿ ಸೂರ್ಯವಂಶಿ, ಶಿವಪುತ್ರ ಹಾಗೂ ಮೊಹ್ಮದ್ ರಫೀಕ್ , 2024ನೇ ಸಾಲಿಗೆ ಡಾ.ರವಿಕಾಂತಿ ಎಸ್ .ಕ್ಯಾತನಾಳ್ ,ಡಾ.ವೈಜನಾಥ ಮಮ್ಮಣಿ, ಡಾ.ಶಾಂತಾಬಾಯಿ ಬಿರಾದಾರ, ಸಂಗೀತಾ, ಸುಧಾ ಮದನಕರ್ , ರಾಜಶೇಖರ ಉದನೂರ, ವಿಜಯಕುಮಾರ ಸೋಮನೂರ, ಬಿ.ಪಿ.ಕಾಳಿಂಗ, ಸುನೀಲಕುಮಾರ ಹಾಗೂ ಗೀತಾಬಾಯಿ ಬಾಬುರಾವ, 2025ನೇ ಸಾಲಿಗೆ ಡಾ.ಶಂಕರ ಎಸ್ .ಕಣ್ಣಿ, ಮಲ್ಲಿಕಾರ್ಜುನ, ರಾಜಕುಮಾರ ರಾಠೋಡ, ಶಿವಶಂಕ್ರಯ್ಯ, ಲಕ್ಷ್ಮಿ, ರವಿಶಂಕರ, ಡಾ.ವಿಜಯಕುಮಾರ, ದಮಯಂತಿ, ಗಂಗಾಬಾಯಿ ಹಾಗೂ ಬಸವ್ವ ಅವರಿಗೆ ಪ್ರಶಸ್ತಿ ಹಾಗೂ ತಲಾ 25 ಸಾವಿರ ರೂ.ಬಹುಮಾನ ನೀಡಲಾಯಿತು.

**ನೌಕರರ ಬೇಡಿಕೆಗಳು**

* ಸರಕಾರಿ ಶಿಕ್ಷಕರ ಭವನಕ್ಕಾಗಿ ನಿವೇಶನ ಮತ್ತು ಕಟ್ಟಡ ನಿರ್ಮಾಣ ಮಾಡಲು ಅನುದಾನ ಒದಸಬೇಕು

*ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾಶಾಖೆಯವರಿಗೆ ಸಿಟಿಎಸ್ ಸಂಖ್ಯೆ 1306ರಲ್ಲಿಗುತ್ತಿಗೆ ಮೇಲೆ ನೀಡಿರುವ ನಿವೇಶನದ ಗುತ್ತಿಗೆ ಅವಧಿ ವಿಸ್ತರಿಸಲು ವಿಧಿಸಿರುವ ಮೊತ್ತವನ್ನು ಸಂಪೂರ್ಣ ವಿನಾಯಿತಿಗೊಳಿಸಬೇಕು

*ಸರಕಾರಿ ನೌಕರರಿಗೆ ವಸತಿ ಗೃಹ ನಿರ್ಮಾಣ ಮಾಡಲು ನೀಲ ನಕ್ಷೆ ತಯಾರು ಮಾಡಿ ಕೆಲಸ ಆರಂಭಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು

*ಡಿಡಿಪಿಐ ಕಚೇರಿಗೆ ಸ್ವಂತ ಕಟ್ಟಡ ಇಲ್ಲದೆ, ಬಿ.ಎಡ್ ಕಾಲೇಜ್ ವಸತಿ ನಿಲಯದಲ್ಲಿದೆ. ಅಪರ ಆಯುಕ್ತರ ಕಚೇರಿ ಹಿಂಭಾಗದಲ್ಲಿರುವ ಜಾಗದಲ್ಲಿ‘ಶಿಕ್ಷಣ ಸೌಧ’ ನಿರ್ಮಿಸಿ ಅದರಲ್ಲಿಡಿಡಿಪಿಐ ಕಚೇರಿ, ಉತ್ತರ ಮತ್ತು ದಕ್ಷಿಣ ತಾಲೂಕು ಕ್ಷೇತ್ರ ಶಿಕ್ಷಣಾಧಿಧಿಕಾರಿ ಕಚೇರಿಗಳನ್ನು ಪ್ರಾರಂಭಿಸಬೇಕು

*ಕಮಲಾಪುರ, ಕಾಳಗಿ, ಶಹಬಾದ್ , ಯಡ್ರಾಮಿಯಲ್ಲಿಕ್ಷೇತ್ರ ಶಿಕ್ಷಣಾಧಿಧಿಕಾರಿ ಕಚೇರಿ ಪ್ರಾರಂಭಿಸಲು ಕ್ರಮ ವಹಿಸಬೇಕು

**

ಬಡ್ತಿ ವಿಚಾರದಲ್ಲಿಈ ಭಾಗದ ನೌಕರರಿಗೆ ಅನ್ಯಾಯವಾಗುತ್ತಿದೆ. ಸರಕಾರ ಅದನ್ನು ಪರಿಗಣಿಸಿ ಬಡ್ತಿಯಲ್ಲಿಅನ್ಯಾಯವಾಗದಂತೆ ನ್ಯಾಯ ಒದಗಿಸುವ ಕೆಲಸ ಸರಕಾರ ಮಾಡಬೇಕು. ನಕಲಿ ಪ್ರಮಾಣ ಪತ್ರ ಪಡೆಯಲು ಬೇರೆ ಜಿಲ್ಲೆಯವರು ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ತಡೆಯಲು ಅಧಿಕಾರಿಗಳಿಂದ ಸಾಧ್ಯವಿದೆ. ಆ ಕೆಲಸ ಅಧಿಕಾರಿಗಳು ಮಾಡಬೇಕು.

-ಡಾ.ರಝಾಕ್ ಉಸ್ತಾದ್ , ರಾಜ್ಯ ಉಪಾಧ್ಯಕ್ಷರು

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ, ರಾಯಚೂರು

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ