ಬೆಸ್ಕಾಂ ಕಚೇರಿ ಎದುರು ಪ್ರಧಿತಿಧಿಭಧಿಟನೆ
ವಿಕ ಸುದ್ದಿಲೋಕ ನಾಯಕನಹಟ್ಟಿ
ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ತಳಕು ಗ್ರಾಮದ ಬೆಸ್ಕಾಂ ಕಚೇರಿ ಎದುರು ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ ನಡೆಸಿತು.
ತಳಕು ಹೋಬಳಿ ವ್ಯಾಪ್ತಿಯಲ್ಲಿಪದೇ ಪದೇ ಟಿಧಿಸಿಧಿಗಳು ಸುಡುತ್ತಿವೆ. ಇದಕ್ಕೆ ವಿದ್ಯುತ್ ಲೈನ್ ಗಳ ಮೇಲೆ ಗಿಡ, ಬಳ್ಳಿ ಮತ್ತು ಮರದ ರೆಂಬೆಗಳು ದೊಡ್ಡ ಪ್ರಮಾಣದಲ್ಲಿಬೆಳೆದಿರುವುದು ಪ್ರಮುಖ ಕಾರಣವಾಗಿದೆ. ಸುಟ್ಟಿರುವ ಟಿಸಿಗಳನ್ನು ಬದಲಾಯಿಸಲು ಇಲ್ಲಿವ್ಯವಸ್ಥೆಗಳಿಲ್ಲ. ಜತೆಗೆ ದಾಸ್ತಾನು ಮಳಿಗೆ ತಳಕು ಉಪವಿಭಾಗದಲ್ಲಿಲ್ಲ. ಹೀಗಾಗಿ ವಾರಗಟ್ಟಲೆ ವಿದ್ಯುತ್ ಪರಿವರ್ತಕಕ್ಕೆ ಕಾಯಬೇಕಾದ ಅನಿವಾರ್ಯತೆ ಇದೆ. ಎಇಇ ಕಚೇರಿ ವ್ಯಾಪ್ತಿಯಲ್ಲಿಗೋದಾಮು ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಭಾಗದಲ್ಲಿರಾತ್ರಿ ಮತ್ತು ಹಗಲು ದೀಪಗಳು ಬೇಕಾಬಿಟ್ಟಿಯಾಗಿ ಉರಿಯುತ್ತಿವೆ. ಇದರ ಬಗ್ಗೆ ಬೆಸ್ಕಾಂ ಸಿಬ್ಬಂದಿಯಾಗಲೀ, ಗ್ರಾಪಂ ಸಿಬ್ಬಂದಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೆಸ್ಕಾಂ ಹೊರೆಯಾಗುತ್ತಿದೆ. ಈ ನಷ್ಟವನ್ನು ಗ್ರಾಹಕರು ಭರಿಸಬೇಕಾದ ಅನಿವಾವಾರ್ಯತೆ ಇದೆ. ಹಿರಿಯೂರು ಮತ್ತು ಚಳ್ಳಕೆರೆ ನಡುವೆ ಮತ್ತೊಂದು ವಿದ್ಯುತ್ ಉಪವಿಭಾಗವನ್ನು ಆರಂಭಿಸಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಎಇಇ ಮಮತ, ಈಗಾಗಲೇ ಜಂಗಲ್ ಕಟಿಂಗಿಗೆ ಕ್ರಮ ಧಿಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಇತರೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ರೈತ ಸಂಘದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ,ಟಿ.ಗಂಗಾಧರ್ , ಪ್ರಶಾಂತ್ ,ಹಿರೇಹಳ್ಳಿ ತಿಪ್ಪೇಸ್ವಾಮಿ,ಮಲ್ಲಿಕಾರ್ಜುನ,ತಿಪ್ಪೇಸ್ವಾಮಿ,ಡಿ.ಚಂದ್ರಶೇಖರ ನಾಯ್ಕ, ಮತ್ತಿತರರಿದ್ದರು.
ಫೋಟೋ: 31 ಎನ್ ಕೆ ಹೆಚ್ 1
ತಳಕು ಗ್ರಾಮದಲ್ಲಿರೈತ ಸಂಘ ಮತ್ತು ಹಸಿರು ಸೇನೆ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

