ಪತ್ರಕರ್ತ ಚನ್ನಮಾದೇಗೌಡ ಸೇರಿ 33 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

Contributed bysantosh.swamy@timesgroup.com|Vijaya Karnataka
Subscribe

ಮಂಡ್ಯ ಜಿಲ್ಲಾಡಳಿತವು 2025-26ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ 33 ಸಾಧಕರನ್ನು ಆಯ್ಕೆ ಮಾಡಿದೆ. ಪತ್ರಕರ್ತ ಚನ್ನಮಾದೇಗೌಡ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಪ್ರಶಸ್ತಿ ನೀಡಲಾಗುವುದು. ನಗರದ ಸರ್‌ ಎಂ.ವಿ. ಕ್ರೀಡಾಂಗಣದಲ್ಲಿ ನ.1ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದು ಜಿಲ್ಲೆಯ ಸಾಧಕರನ್ನು ಗುರುತಿಸುವ ಮಹತ್ವದ ಕಾರ್ಯಕ್ರಮವಾಗಿದೆ.

channel madagowda awarded kannada rajyotsava award

ವಿಕ ಸುದ್ದಿಲೋಕ ಮಂಡ್ಯ

ಕನ್ನಡ ರಾಜ್ಯೋತ್ಸವ ಅಂಗವಾಗಿ ಮಂಡ್ಯ ಜಿಲ್ಲಾಡಳಿತ ನೀಡುವ 2025-26ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ಜಿಲ್ಲೆಯ ನಾನಾ ಕ್ಷೇತ್ರಗಳ 33 ಸಾಧಕರು ಆಯ್ಕೆಯಾಗಿದ್ದಾರೆ.

ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿನ.1ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ. (ನ್ಯಾಯಾಂಗ ಕ್ಷೇತ್ರ), ನಾಗಮಂಗಲ ತಾಲೂಕು ಕಾರಭೈಲು ಗ್ರಾಮದ ಮರಿಯಪ್ಪ(ಮೂಡಲಪಾಯ ಯಕ್ಷಗಾನ), ಮದ್ದೂರಿನ ಎಂ.ಆರ್ .ಕುಪ್ಪಸ್ವಾಮಿ (ರಂಗಭೂಮಿ), ಮಂಡ್ಯದ ಹೊಸಹಳ್ಳಿಯ ಇಕ್ಕಲಕ್ಕಿ ರಾಮಲಿಂಗೇಗೌಡ(ಸಹಕಾರ ಕ್ಷೇತ್ರ), ಸಂತೆಕಸಲಗೆರೆ ಬಸವರಾಜು (ಜಾನಪದ ಕ್ಷೇತ್ರ, ನಾಟಕ), ತಗ್ಗಹಳ್ಳಿಯ ಬಿಳೀಗೌಡ (ಸಾವಯವ ಕೃಷಿ), ಹಲಗೂರು ಆಸ್ಪತ್ರೆಯ ದೇವರಾಜು (ಸಮಾಜ ಸೇವೆ), ಹೊಸಹೊಳಲು ಗ್ರಾಮದ ಎಚ್ .ಪಿ. ಅಶೋಕ್ ಕುಮಾರ್ (ಡೋಲು ವಾದಕ), ಪತ್ರಕರ್ತ ಸುದೇಶ್ ಪಾಲ್ (ಪತ್ರಿಕೋದ್ಯಮ), ಮುಟ್ಟನಹಳ್ಳಿಯ ರಾಜೇಂದ್ರ ಎಂ.ಟಿ. (ಕಾನೂನು ಕ್ಷೇತ್ರ), ನಂಬಿನಾಯಕಹಳ್ಳಿಯ ಎಂ.ಕೃಷ್ಣೇಗೌಡ (ಕೋಲಾಟ), ಕಣಿವೆಕೊಪ್ಪಲು ಗ್ರಾಮದ ಲವಕುಮಾರ (ಪರಿಸರ), ಮಂಡ್ಯ ಕೊಪ್ಪಲು ಗ್ರಾಮದ ಎಂ.ಕೆ. ಮಂಜುನಾಥ್ (ಸಮಾಜ ಸೇವೆ).

ನಾರಾಯಣಪುರ ಗ್ರಾಮದ ನರಸಿಂಹೇಗೌಡ (ಸಾಹಿತ್ಯ), ಗೌಡಹಳ್ಳಿ ಸಂಗೀತ ಜಿ.ಆರ್ . (ಸುಗಮ ಸಂಗೀತ), ಕೃಷ್ಣರಾಜಪೇಟೆಯ ಅ.ಮ.ಶ್ಯಾಮೇಶ್ (ಸಾಹಿತ್ಯ), ವಕೀಲ ಸಿ.ಎಲ….ಶಿವಕುಮಾರ್ (ಕಾನೂನು ಕ್ಷೇತ್ರ), ಲಿಂಗಾಪುರದ ಸತೀಶ್ ಎಲ….ಆರ್ . (ರಂಗಭೂಮಿ), ನಾಗಮಂಗಲದ ಎನ್ .ಆರ್ . ಚಂದ್ರಶೇಖರ್ (ಸಮಾಜ ಸೇವೆ), ಮಂಡ್ಯ ವಿ.ವಿ. ನಗರದ ಡಾ.ಛಾಯಾ ಆರ್ .ಪಿ (ಜಾನಪದ ಕ್ಷೇತ್ರ-ಸಾಹಿತ್ಯ), ಗುತ್ತಲು ಕಾಲೊನಿಯ ಶೇಖ್ ಉಬೇದುಲ್ಲಾ (ಸಮಾಜ ಸೇವೆ), ಮಂಡ್ಯದ ಪತ್ರಕರ್ತ ಸುನೀಲ್ ಕುಮಾರ್ (ಪತ್ರಿಕೋದ್ಯಮ).

ಮಲ್ಲನಾಯಕನಕಟ್ಟೆಯ ಮಂಜುಳಾ ರಮೇಶ್ (ಸಮಾಜ ಸೇವೆ), ಸೊಳ್ಳೆಪುರದ ಪ್ರಕಾಶ್ ಎಸ್ .ಸಿ. (ಕೃಷಿ), ಮಂಡ್ಯದ ಪತ್ರಕರ್ತ ಬಿ.ಜೆ. ಸೋಮಶೇಖರ್ (ಪತ್ರಿಕೋದ್ಯಮ), ಮದ್ದೂರಿನ ಆನಂದ ಬಿ. (ಸಮಾಜ ಸೇವೆ), ದಮ್ಮಸಂದ್ರದ ಮನೋಡ್ ಡಿ.ಯು. (ಕ್ರೀಡಾ ಕ್ಷೇತ್ರ), ಮಂಡ್ಯದ ಎಂ.ಎಲ…. ತುಳಸೀಧರ್ (ಸಮಾಜ ಸೇವೆ), ಸಂತೆಬಾಚಹಳ್ಳಿಯ ಗೆಳೆಯರ ಬಳಗ (ಸಾಮಾಜಿಕ ಸೇವೆ), ತಾರಾ ಡಯಾಗ್ನಾಸ್ಟಿಕ್ ಸೆಂಟರ್ ನ ಡಾ.ಚಂದ್ರಶೇಖರ್ ಕೆ. (ವೈದ್ಯಕೀಯ), ಚಾಕೇನಹಳ್ಳಿಯ ತಿಮ್ಮರಾಯಿಗೌಡ (ರಂಗಭೂಮಿ), ಪಾಂಡವಪುರದ ಪತ್ರಕರ್ತ ಚನ್ನಮಾದೇಗೌಡ (ಪತ್ರಿಕೋದ್ಯಮ), ಚಾಮಲಾಪುರದ ನಿಶ್ಚಿತ್ ಗೌಡ ಸಿ. (ಕ್ರೀಡೆ) ಆಯ್ಕೆಯಾಗಿದ್ದಾರೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ