ಬೆಂಗಳೂರು: ಸುಬ್ರಯೆನ್ (61ಕ್ಕೆ 5)ಅವರ ದಾಳಿಗೆ ತತ್ತರಿಸಿದ ಭಾರತ ‘ಎ’ ತಂಡ ಎರಡು ಚತುರ್ದಿನ ಪಂದ್ಯಗಳ ಮೊದಲ ಹಣಾಹಣಿಯಲ್ಲಿದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ಇನಿಂಗ್ಸ್ ಹಿನ್ನಡೆ ಅನುಭವಿಸಿದೆ. ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೊದಲನೆಯ ಕ್ರೀಡಾಂಗಣದಲ್ಲಿನಡೆಯುತ್ತಿರುವ ಪಂದ್ಯದ 2ನೇ ದಿನವಾದ ಶುಕ್ರವಾರ 9 ವಿಕೆಟ್ ಗೆ 299 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ 91.2 ಓವರ್ ಗಳಲ್ಲಿ309 ರನ್ ಗಳಿಗೆ ಇನಿಂಗ್ಸ್ ಪೂರ್ಣಗೊಳಿಸಿತು. ಇದಕ್ಕೆ ಪ್ರತಿಯಾಗಿ ಇನಿಂಗ್ಸ್ ಆರಂಭಿಸಿದ ಭಾರತ ‘ಎ’ ತಂಡ, 58 ಓವರ್ ಗಳಲ್ಲಿ234 ರನ್ ಗಳಿಗೆ ಗಂಟುಧಿಮೂಟೆ ಕಟ್ಟಿತು. ಆಯುಷ್ ಮ್ಹಾತ್ರೆ (65) ಹೊರತುಪಡಿಸಿ ಉಳಿದವರು ನಿರುತ್ತರಗೊಂಡರು. ಅದರಲ್ಲೂಪಂದ್ಯದ ಆಕರ್ಷಣೆಧಿಯಾಗಿದ್ದ ಪಂತ್ (17) ನಿರಾಸೆ ಮೂಡಿಸಿದರು. ನಂತರ 75 ರನ್ ಗಳ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ ದಿನದಾಟದ ಮುಕ್ತಾಯಕ್ಕೆ 12 ಓವರ್ ಗಳಲ್ಲಿವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ. ಸಂಕ್ಷಿಪ್ತ ಸ್ಕೋರ್ : ದಕ್ಷಿಣ ಆಫ್ರಿಕಾ ‘ಎ’: 309 ಮತ್ತು 2ನೇ ಇನಿಂಗ್ಸ್ ವಿಕೆಟ್ ಇಲ್ಲದೆ 30; ಭಾರತ ‘ಎ’: ಮೊದಲ ಇನಿಂಗ್ಸ್ 234.

