ರಾಷ್ಟ್ರೀಯ ಐಕ್ಯತಾ ದಿನಾಚರಣೆ | ಉಪ ಲೋಕಾಯುಕ್ತ ಬಿ.ವೀರಪ್ಪ ಅಧಿಭಿಧಿಮತ
‘ನಿಧಿಸ್ವಾರ್ಥ ದೇಧಿಶಾಧಿಭಿಧಿಮಾನ ಬೆಧಿಳೆಧಿಸಿಧಿಕೊಧಿಳ್ಳಿ’
ವಿಕ ಸುದ್ದಿಲೋಕ ಕೊಪ್ಪಳ
‘ಧಿ‘ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತಮ್ಮ ಜೀವನದುದ್ದಕ್ಕೂ ರಾಷ್ಟ್ರದ ಏಕತೆಗಾಗಿ ಶ್ರಮಿಸಿದ್ದರು,’ಧಿ’ ಎಂದು ಉಪ ಲೋಕಾಯುಕ್ತ ಬಿ. ವೀರಪ್ಪ ಹೇಳಿದರು.
ನಗರದ ಜಿಲ್ಲಾಕ್ರೀಡಾಂಗಣದಲ್ಲಿಜಿಲ್ಲಾಪೊಲೀಸ್ ಇಧಿಲಾಧಿಖೆಯಿಂದ ರಾಷ್ಟ್ರೀಯ ಐಕ್ಯತಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಐಕ್ಯತೆಗಾಗಿ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
‘ಧಿ‘ಸ್ವಾತಂತ್ರತ್ರ್ಯ ಪೂರ್ವದಲ್ಲಿಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿ ಹಲವು ನಾಯಕರು ಬಹಳಷ್ಟು ಶ್ರಮ ಪಟ್ಟಿದ್ದಾರೆ. ರಾಷ್ಟ್ರೀಯ ಐಕ್ಯತೆ ಅವರ ರಕ್ತದಲ್ಲಿತ್ತು. ಐಕ್ಯತೆ ಬೆಳೆಸಬೇಕಾದರೆ ನಮ್ಮಲ್ಲಿನಿಸ್ವಾರ್ಥ ದೇಶಭಕ್ತಿ ಇರಬೇಕು. ಭಾರತ ಹಲವಾರು ಧರ್ಮಗಳ ಸಮ್ಮಿಲನವಾಗಿದೆ. ಐಕ್ಯತೆಗಾಗಿ ನಾವೂ ದಿನದ 24 ತಾಸು ಶ್ರಮಿಸಬೇಕಿದೆ,’ಧಿ’ ಎಂದರು.
‘ಧಿ‘ಐಕ್ಯತೆ ಜತೆಗೆ ಈ ದೇಶದ ದೊಡ್ಡ ಪಿಡುಗು ಭ್ರಷ್ಟಾಚಾರವಾಗಿದೆ. ಅದರ ನಿರ್ಮೂಲನೆಗೆ ನಾವೆಲ್ಲರೂ ಶ್ರಮಿಸಬೇಕಿದೆ. ನಮ್ಮ ಮಕ್ಕಳಿಗೆ ದೇಶಭಕ್ತಿ, ದೇಶಾಭಿಮಾನ ಹಾಗೂ ಐಕ್ಯತೆಯಿಂದ ಬಾಳುವಂತೆ ತಿಳಿಸಧಿಬೇಧಿಕುಧಿ,’ಧಿ’ ಎಂದರು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್ . ಅರಸಿದ್ದಿ, ಕರ್ನಾಟಕ ಲೋಕಾಯುಕ್ತದ ವಿಚಾರಣೆ ಅಪರ ನಿಬಂಧಕರಾದ ಡಾ. ಕಸನಪ್ಪ ನಾಯ್ಕ, ರಮಾಕಾಂತ್ ಚವ್ಹಾಣ ಹಾಗೂ ಅರವಿಂದ ಎನ್ .ವಿ., ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್ . ದರಗದ, ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸತೀಶ್ ಎಸ್ . ಚಿಟಗುಬ್ಬಿ, ಎಡಿಸಿ ಸಿದ್ರಾಮೇಶ್ವರ, ಎಎಸ್ಪಿ ಆರ್ .ಹೇಮಂತಕುಮಾರ್ , ಎಸಿ ಮಹೇಶ ಮಾಲಗಿತ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠಲ ಜಾಬಗೌಡರ ಸೇರಿ ಇತರೆ ಅಧಿಕಾರಿಗಳು ಹಾಗೂ ಜಿಲ್ಲಾಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಫೋಟೋ
31ಕೆಪಿಎಲ್ ಫೋಟೋ02
ಕೊಪ್ಪಳ ನಗರದ ಜಿಲ್ಲಾಕ್ರೀಡಾಂಗಣದಲ್ಲಿರಾಷ್ಟ್ರೀಯ ಐಕ್ಯತಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಐಕ್ಯತೆಗಾಗಿ ಓಟ ಕಾರ್ಯಕ್ರಮಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ಚಾಲನೆ ನೀಡಿದರು.

