ನಂದಿ ಗ್ರಾಮದ ಸರಕಾರಿ ಜಾಗ ಉಳಿಸಲು ಮನವಿ

Contributed bysidramappasn@gmail.com|Vijaya Karnataka
Subscribe

ತರೀಕೆರೆ ತಾಲೂಕಿನ ನಂದಿ ಗ್ರಾಮದಲ್ಲಿ ಕುಸುಮ್-ಸಿ ಯೋಜನೆಗೆ ಮೀಸಲಾಗಿದ್ದ ಸರಕಾರಿ ಜಾಗವನ್ನು ಕೆಲವರು ರಾತ್ರೋರಾತ್ರಿ ಉಳುಮೆ ಮಾಡುತ್ತಿದ್ದಾರೆ. ಈ ಜಾಗವನ್ನು ಉಳಿಸಿ ಸರಕಾರದ ವಶಕ್ಕೆ ಪಡೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಭಾರತೀಯ ಕಿಸಾನ್‌ ಸಂಘದ ವತಿಯಿಂದ ತಹಸೀಲ್ದಾರ್‌ ಕಚೇರಿಗೆ ತೆರಳಿ ಶಿರಸ್ತೇದಾರ್‌ ನಟರಾಜ್‌ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ 'ವಿಜಯ ಕರ್ನಾಟಕ' ವರದಿ ಪ್ರಕಟಿಸಿತ್ತು.

campaign to preserve government land in nandi village

*ಫಾಲೋಅಪ್ ವರದಿ*

ವಿಕ ಸುದ್ದಿಲೋಕ ತರೀಕೆರೆ

‘ ಕುಸುಮ್ ಯೋಜನೆ ಜಾಗ ಗುಳುಂ’ ಶೀರ್ಷಿಕೆಯಡಿ ಅ.31ರಂದು ‘ವಿಜಯ ಕರ್ನಾಟಕ ’ ಪ್ರಕಟಿಸಿದ ವಿಶೇಷ ವರದಿ ಹಿನ್ನೆಲೆಯಲ್ಲಿಎಚ್ಚೆತ್ತ ಗ್ರಾಮಸ್ಥರು, ಕುಸುಮ್ -ಸಿ ಯೋಜನೆಗೆ ಮೀಸಲಿಟ್ಟ ಭೂಮಿಯನ್ನು ಉಳಿಸಿ ಸರಕಾರದ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ನಂದಿ ಗ್ರಾಮದ ಸ.ನಂ. 140, 141, 139ರಲ್ಲಿರುವ ಸರಕಾರಿ ಜಾಗದಲ್ಲಿಕಳೆದ ಒಂದು ವಾರದಿಂದ ಕೆಲವರು ರಾತ್ರೋರಾತ್ರಿ ಉಳುಮೆ ಮಾಡುತ್ತಿದ್ದಾರೆ. ಕುಸುಮ್ -ಸಿ ಯೋಜನೆಗೆ ಮೀಸಲಿಟ್ಟ ಈ ಜಾಗವನ್ನು ಸರಕಾರ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರದೇಶ ಸಮಿತಿ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿ, ಶಿರಸ್ತೇದಾರ್ ನಟರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಚಂದಪ್ಪ, ಕಾರ್ಯದರ್ಶಿ ಬಸವರಾಜಪ್ಪ, ಪದಾಧಿಕಾರಿಗಳಾದ ಶ್ರೀಧರ್ , ನವೀನ್ ಕುಮಾರ್ , ಹರೀಶ್ , ನಂದೀಶ್ , ದಿಲೀಪ್ ಹಾಗೂ ಇತರರಿದ್ದರು.

31ತರೀಕೆರೆ1 :

ತರೀಕೆರೆ ತಾಲೂಕಿನ ನಂದಿ ಗ್ರಾಮದಲ್ಲಿರುವ ಸರಕಾರಿ ಜಾಗ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಶಿರಸ್ತೇದಾರ್ ನಟರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ