‘ಶೈಕ್ಷಣಿಕ, ಆರ್ಥಿಕ ಪ್ರಗತಿ ಸಾಧಿಸಿ’
ಸಂತ ಸೇವಾಲಾಲ್ ಶಿಲಾಮೂರ್ತಿ ಸ್ಥಾಪನೆ
ಹಿರೇಮಠದ ಓಂಕಾರ ಸ್ವಾಮೀಜಿ ಸಲಹೆ
ವಿಕ ಸುದ್ದಿಲೋಕ ಹರಪನಹಳ್ಳಿ ‘‘ವಿಶ್ವವ್ಯಾಪ್ತಿಯಲ್ಲಿಸಾಹಿತ್ಯ ಹಾಗೂ ಸಂಸ್ಕಾರವನ್ನು ಬೆಳೆಸಿದ ಕೀರ್ತಿ ಬಂಜಾರ ಸಮುದಾಯಕ್ಕೆ ಸಲ್ಲುತ್ತದೆ’ ಎಂದು
ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಸ್ವಾಮೀಜಿ ಹೇಳಿದರು.
ತಾಲೂಕಿನ ಬೇವಿನಹಳ್ಳಿ ಸಣ್ಣ ತಾಂಡಾದಲ್ಲಿಶುಕ್ರವಾರ ನಡೆದ ಶ್ರೀ ಮಾರಿಯಮ್ಮ ದೇವಿ ಹಾಗೂ ಸಂತ ಸೇವಾಲಾಲ್ ಶಿಲಾಮೂರ್ತಿ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ,
ದೇವಸ್ಥಾನ ಉದ್ಘಾಟನೆ ಮತ್ತು ಗೋಪುರ ಕಳಸರೋಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಕ್ತಿ, ಭಾವದಿಂದ ನಡೆದುಕೊಳ್ಳುವ ಬಂಜಾರರ ಪರಂಪರೆ ಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಪೂರ್ವಿಕರು ಹಾಕಿ ಕೊಟ್ಟ ಕಾಯಕ,
ಸಹಬಾಳ್ವೆ, ಸಂಸ್ಕಾರನ್ನು ಮೈಗೂಡಿಸಿಕೊಂಡು ಪ್ರೀತಿಗೆ ಪಾತ್ರರಾಗಿದ್ದಾರೆ.
ಲಂಬಾಣಿ ಸಮುದಾಯ ಕಟ್ಟಿಗೆ, ಉಪ್ಪು ಮಾರಾಟ ಮಾಡಿ ಜೀವನ ನಡೆಸಿದ್ದಾರೆ. ಶೈಕ್ಷಣಿಕವಾಗಿ ಪ್ರಗತಿಹೊಂದಿ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.
ಕೆಬಿ ತಾಂಡಾ ಶಕ್ತಿ ಪೀಠದ ಶಿವಪ್ರಕಾಶ ಮಹಾರಾಜ್ ಮಾತನಾಡಿ, ’ಧರ್ಮ ಎಂದರೆ ಕೇವಲ ಜಾತಿ, ಜನಾಂಗದ ಸೂಚ್ಯಕವಲ್ಲ. ಸಂತ ಸೇವಾಲಾಲ್ ನುಡಿಯಂತೆ ಹಸಿದವರಿಗೆ
ಅನ್ನ ನೀಡುವುದೇ ಧರ್ಮವಾಗಿದೆ ಎಂದರು.
ಮಾಜಿ ಶಾಸಕ ಎಸ್ .ವಿ ರಾಮಚಂದ್ರ ಮಾತನಾಡಿ, ಲಂಬಾಣಿ ಸಮಾಜದವರು ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎಂದರು.
ಮುಖಂಡ ಮಹಾಂತೇಶ ನಾಯ್ಕ, ಪಾಟೀಲ್ ಕೆಂಚನಗೌಡ, ಕೊಟ್ರಯ್ಯ ಸ್ವಾಮಿ, ಡಿಲ್ಯ ನಾಯ್ಕ, ಎಲ್ .ಯಶೋಧರ ನಾಯ್ಕ ಮಾತನಾಡಿದರು.
ಚಂದ್ರ ನಾಯಕ. ಕುಬೇಂದ್ರ ನಾಯ್ಕ, ಸಿ.ಎಲ್ .ಚಂದ್ರ ನಾಯ್ಕ, ಉಮಾ ಶಂಕರ್ , ವೆಂಕಟೇಶ್ ನಾಯ್ಕ, ಎಂ.ಜ್ಯೋತಿ, ಕಾರಭಾರಿ ರಾಜನಾಯ್ಕ, ಹನುಮಂತ ನಾಯ್ಕ,
ನಾಗರಾಜ ನಾಯ್ಕ ಇದ್ದರು.
31,ಹೆಚ್ .ಆರ್ .ಪಿ.ಪೋಟೋ,03- ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ಸಣ್ಣ ತಾಂಡಾದಲ್ಲಿಶುಕ್ರವಾರ ನಡೆದ ಶ್ರೀಮಾರಿಯಮ್ಮ ದೇವಿ ಹಾಗೂ ಸಂತ ಸೇವಾಲಾಲ್ ಶಿಲಾಮೂರ್ತಿ ಸ್ಥಾಪನೆ, ಪ್ರಾಣ ಪ್ರತಿಷ್ಠಾಪನೆ, ದೇವಸ್ಥಾನ ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಸ್ವಾಮೀಜಿ ಉದ್ಘಾಟಿಸಿದರು.

