ವಿಕ ಸುದ್ದಿಲೋಕ ಚಾಮರಾಜನಗರ ಹೊಸ ಮಂದಿರಗಳನ್ನು ನಿರ್ಮಾಣ ಮಾಡುವುದಕ್ಕಿಂತಲೂ ಶಿಥಿಲಾವಸ್ಥೆ ಯಲ್ಲಿರುವ ಹಳೇ ದೇವಾಲಯಗಳನ್ನು ಗುರುತಿಸಿ ಅವುಗಳನ್ನು ಜೀರ್ಣೋದ್ಧಾರ ಮಾಡಲು ಪ್ರಾಮುಖ್ಯತೆ ನೀಡುವುದು ಅವಶ್ಯಕ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ತಾಲೂಕಿನ ಮಲೆಯೂರು ಗ್ರಾಮದಲ್ಲಿಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ , ಪ್ರಾಚ್ಯ ವಸ್ತು ಸಂಗ್ರಹಾಲಯ, ಪರಂಪರೆ ಇಲಾಖೆ, ಧಾರ್ಮಿಕದತ್ತಿ ಇಲಾಖೆ, ಭಕ್ತಾದಿಗಳ ಸಹಕಾರದೊಂದಿಗೆ ಜೀರ್ಣೋದ್ಧಾರ ಗೊಂಡಿರುವ ಪ್ರಾಚೀನ ಶಿಲಾಬಸದಿ ಭಗವಾನ್ 1008 ಆದಿನಾಥತೀರ್ಥಂಕರರ ಶಿಲಾಜಿನಬಿಂಬ ಪುನರ್ ಪ್ರತಿಷ್ಠಾಪನೆ ಹಾಗೂ ಧಾಮ ಸಂಪ್ರೋಕ್ಷಣೆ, ಪಂಚಕಲ್ಯಾಣ ಪೂರ್ವಕ ಮೂರು ದಿನಗಳ ಪೂಜಾ ಕಾರ ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ‘‘ಸಾವಿರಾರು ವರ್ಷಗಳ ಹಿಂದೆ ರಾಜ ಮಹಾರಾಜರೋ, ಚಕ್ರವರ್ತಿಗಳೋ, ದೇವಾಲಯ ನಿರ್ಮಾಣ ಮಾಡಿರುತ್ತಾರೆ. ಕಾಲ ಕಳೆದಂತೆ ಅವು ಶಿಥಿಲಾವಸ್ಥೆ ತಲುಪುತ್ತವೆ. ಅದು ಶಿವ ದೇವಾಲಯವಾಗಲೀ, ವಿಷ್ಣು ದೇವಾಲಯವೇ ಆಗಲೀ, ನಾವು ನೋಡುವುದಿಲ್ಲ. ಅದರ ಯಥಾಸ್ಥಿತಿ ಕಾಪಾಡಿಕೊಂಡು ಅದನ್ನು ಜೀರ್ಣೋದ್ಧಾರ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ,’’ ಎಂದರು. ‘‘ಗ್ರಾಮದಲ್ಲಿಎಲ್ಲರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಂಡಿರುವ ಪ್ರಾಚೀನ ಜೈನ ಬಸದಿಯನ್ನು ತುಂಬಾ ಸುಂದರವಾಗಿ ನಿರ್ಮಾಣಮಾಡಲಾಗಿದೆ. ಆದಿನಾಥ ಜೈನಸೇವಾ ಟ್ರಸ್ಟ್ ಪದಾಧಿಕಾರಿಗಳು ದೇವಾಲಯದ ಸಮಗ್ರ ನಿರ್ವಹಣೆಗೆ ಹೆಚ್ಚು ಒತ್ತು ನೀಡಬೇಕು,’’ ಎಂದು ಸಲಹೆ ನೀಡಿದರು. ಮಂಡ್ಯ ಜಿಲ್ಲೆಆರತಿಪುರ ಜೈನಮಠದ ಸಿದ್ದಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘‘ಎಲ್ಲಪ್ರಾಣಿಪಕ್ಷಿಗಳÜು ಹುಟ್ಟುತ್ತವೆ. ಸಾಯುತ್ತವೆ. ಅದರೆ, ಅವುಗಳಲ್ಲಿಮನುಷ್ಯನಲ್ಲಿರುವಷ್ಟು ಸ್ವಾರ್ಥ ಲಾಲಸೆ ಇರುವುದಿಲ್ಲ. ಜಗತ್ತಿನ ಎಲ್ಲಜೀವರಾಶಿಗಳಿಂದ ಮನುಷ್ಯ ಜನ್ಮ ಶ್ರೇಷ್ಠ. ಮನುಷ್ಯ ಬದುಕಿರುವಾಗ ನಾಲ್ಕು ಜನರಿಗೆ ಉಪಯೋಗವಾಗುವ ಕೈಂಕರ್ಯ ಮಾಡಬೇಕು. ಪರೋಪಕಾರಂ ಇದಂ ಶರೀರ ಎಂಬ ಹಿರಿಯರ ವಾಣಿಯನ್ನು ಜೀವನ ದುದ್ದಕ್ಕೂ ಪಾಲನೆ ಮಾಡಬೇಕು,’’ ಎಂದರು. ಮಲೆಯೂರು ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿದರು. ಶ್ರವಣಬೆಳಗೊಳ ಜೈನ ಮಠದ ಮದಭಿನವ ಚಾರುಕೀರ್ತಿ ಭಟ್ಟಾರಕಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆ ಕಾರ ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರಹೆಗಡೆ, 108 ಪುಣ್ಯಸಾಗರ ಮುನಿ ಮಹಾರಾಜರನ್ನು ಪೂರ್ಣಕುಂಭ, ಛತ್ರಿಚಾಮರಗಳ ಸಮೇತ ಮಂಗಳವಾದ್ಯಗಳ ನಿನಾದೊಂದಿಗೆ ಜೀರ್ಣೋದ್ಧಾರಗೊಂಡಿರುವ ನೂತನ ಆದಿನಾಥ ತೀರ್ಥಂಕರರ ಬಸದಿಗೆ ಬರಮಾಡಿಕೊಳ್ಳಲಾಯಿತು. ರಾಷ್ಟ್ರೀಯ ಜೈನ್ ಮಿಲನ್ ಅಧ್ಯಕ್ಷ ಡಿ.ಸುರೇಂದ್ರಕುಮಾರ್ , ವೀರೇಂದ್ರಹೆಗಡೆ ಪುತ್ರಿ ಶ್ರದ್ದಾ ಅಮಿತ್ , ಮಾಜಿ ಶಾಸಕ ಸಿ.ಎಸ್ .ನಿರಂಜನಕುಮಾರ್ , ಭಗವಾನ್ 1008 ಆದಿನಾಥ ತೀರ್ಥಂಕರ ದಿಗಂಬರ ಜೈನಸೇವಾ ಟ್ರಸ್ಟ್ ಅಧ್ಯಕ್ಷ ವಸುಪಾಲ್ , ಧರ್ಮಸ್ಥಳ ಧರ್ಮೊತ್ಥಾನ ಟ್ರಸ್ಟ್ ನ ನೇಮಿರಾಜ್ ಹಾಗೂ ಪದಾಧಿಕಾರಿಗಳು, ಪಂಚಕಲ್ಯಾಣ ಮಹೋತ್ಸವ ಸಮಿತಿ ಹಾಗೂ ಮಲೆಯೂರು ಗ್ರಾಮಸ್ಥರು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಿಬ್ಬಂದಿಗಳು, ಸ್ವಸಹಾಯಸಂಘಗಳ ಸದಸ್ಯರು ಸೇರಿದಂತೆ ಇತರರು ಇದ್ದರು.

