ಶಬರಿಮಲೆ : ಶಬರಿಮಲೆ ಮಂಡಲ ಕಾಲದ ಯಾತ್ರೆ ಕೈಧಿಗೊಧಿಳ್ಳುವ ಭಧಿಕ್ತಧಿರಿಗೆ ನ.1ರಿಂದ ಆನ್ ಲೈನ್ ಬುಕ್ಕಿಂಗ್ ಪ್ರಾರಂಭವಾಗಲಿದೆ. ಒಂದು ದಿನದಲ್ಲಿ70 ಸಾವಿರ ಭಕ್ತರಿಗೆ ಆನ್ ಲೈನ್ ಬುಕ್ಕಿಂಗ್ ಹಾಗೂ 20 ಸಾವಿರ ಭಕ್ತರಿಗೆ ಸ್ಪಾಟ್ ಬುಕ್ಕಿಂಗ್ ಮೂಲಕ ಅಯ್ಯಪ್ಪ ದರ್ಶನಕ್ಕೆ ಅವಕಾಶ ನೀಡಲಾಗುವುದು.
ಪಂಪಾದಲ್ಲಿಏಕ ಕಾಲದಲ್ಲಿ10 ಸಾವಿರ ಭಕ್ತರಿಗೆ ವಿಶ್ರಾಂತಿಗೆ ಸ್ಥಳಾವಕಾಶ ಕಲ್ಪಿಸಬಹುದಾದ 10 ಜರ್ಮನ್ ಟೆಂಟ್ ಹಾಗೂ ಅರವಣ ಬಫರ್ ಸ್ಟಾಕ್ ಆಗಿ 50 ಲಕ್ಷ ಟಿನ್ ಗಳನ್ನು ಸಿದ್ಧಪಡಿಸಲು ಶಬರಿಮಲೆ ಪರಿಶೀಲನಾ ಸಭೆಯಲ್ಲಿತೀರ್ಮಾನಿಸಲಾಗಿದೆ.
ದೇವಸ್ವಂ ಸಚಿವ ವಿ.ಎನ್ .ವಾಸವನ್ ಅಧ್ಯಕ್ಷತೆಯಲ್ಲಿನಡೆದ ಸಭೆಯಲ್ಲಿದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್ .ಪ್ರಶಾಂತ್ , ನಾನಾ ಇಲಾಖೆಗಳ ಉನ್ನತ ಅಧಿಕಾರಿಗಳು, ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲಾಧಿಕಾರಿಗಳು, ಇತರರು ಭಾಗವಹಿಸಿದ್ದರು.
ಮಂಡಲ ಉಧಿತ್ಸಧಿವಧಿಕ್ಕಾಧಿಗಿ ನ.16ರಂದು ಸಂಜೆ 5ಕ್ಕೆ ಶಬರಿಮಲೆ ತೆರೆಯಲಿದೆ. ಮಂಡಲ ಪೂಜೆ ಮುಗಿಸಿ ಡಿ.27ರಂದು ರಾತ್ರಿ ದೇಗುಲ ಮುಚ್ಚಲಾಗುವುದು. ಮತ್ತೆ ಮಕರ ಜ್ಯೋತಿ ಉಧಿತ್ಸಧಿವಧಿಕ್ಕಾಗಿ ಡಿ.30ರಂದು ದೇಗುಲ ತೆರೆಯಲಿದೆ. 2026ರ ಜ.14ರಂದು ಮಕರ ಜ್ಯೋತಿ ಮಹೋತ್ಸವ, ಮಕರ ಮಾಸದ ಪೂಜೆ ಮುಗಿಸಿ ಜ.20ರಂದು ದೇಗುಲ ಮುಚ್ಚಲಾಗುವುದು.

