ಬೂತ್ ಮಟ್ಟದಲ್ಲಿಪಕ್ಷ ಸಂಘಟಿಸಿ

Contributed byyadawad108@gmail.com|Vijaya Karnataka
Subscribe

ತೇರದಾಳದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು. ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಮತ್ತಷ್ಟು ಬಲಿಷ್ಠಗೊಳಿಸುವ ಬಗ್ಗೆ ಚರ್ಚಿಸಲಾಯಿತು. ದೇಶದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷ ಎಂದು ಸುರೇಶ ಅಕ್ಕಿವಾಟ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ನಂತರ ಪಕ್ಷದ ಸಾಮರ್ಥ್ಯ ಹೆಚ್ಚಿದೆ ಎಂದರು. ಬಿಎಲ್‌2 ಅವರ ಜವಾಬ್ದಾರಿ ಮಹತ್ವದ್ದು ಎಂದು ಮಹಾವೀರ ಕೊಕಟನೂರ ತಿಳಿಸಿದರು. ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

bjp organization at booth level a promise

ತೇರದಾಳದಲ್ಲಿಬಿಜೆಪಿ ಕಾರ್ಯಕರ್ತರ ಸಭೆ

ಬೂತ್ ಮಟ್ಟದಲ್ಲಿಪಕ್ಷ ಸಂಘಟಿಸಿ

ವಿಕ ಸುದ್ದಿಲೋಕ ತೇರದಾಳ

‘‘ದೇಶದಲ್ಲಿಅತೀ ದೊಡ್ಡ ಪಕ್ಷ ಎಂದು ಇತಿಹಾಸ ಬರೆದಿರುವ ಬಿಜೆಪಿ ಕಾರ್ಯಕರ್ತರು ನಾವು ಎಂದು ಹೇಳಲು ಹೆಮ್ಮೆ ಪಡಿ. ಬೂತ್ ಮಟ್ಟದಲ್ಲಿಪಕ್ಷ ಸಂಘಟನೆ ಮಾಡುವ ಮೂಲಕ ಮತ್ತಷ್ಟು ಬಲಿಷ್ಠಗೊಳಿಸಬೇಕು,’’ ಎಂದು ಪಕ್ಷದ ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಅಕ್ಕಿವಾಟ ಹೇಳಿದರು.

ಪಟ್ಟಣದ ಪಕ್ಷದ ಕಚೇರಿಯಲ್ಲಿಹಮ್ಮಿಕೊಂಡಿದ್ದ ಸಂಘಟನೆ ಸಭೆಯಲ್ಲಿಮಾತನಾಡಿದ ಅವರು, ‘‘ದೇಶದಲ್ಲಿನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಪಕ್ಷದ ಸಾಮರ್ಥ್ಯ ಬಹಳಷ್ಟು ಬೆಳೆದಿದೆ. ಈ ಬಗ್ಗೆ ತಿಳಿದುಕೊಳ್ಳಬೇಕು,’’ ಎಂದರು.

ನಗರ ಘಟಕದ ಅಧ್ಯಕ್ಷ ಮಹಾವೀರ ಕೊಕಟನೂರ ಮಾತನಾಡಿ, ‘‘ಬೂತ್ ಮಟ್ಟದಲ್ಲಿಬಿಎಲ್ 2 ಅವರ ಜವಾಬ್ದಾರಿ ಬಹಳಷ್ಟು ಇರುತ್ತದೆ. ಆದ್ದರಿಂದ ಕಾರ ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು,’’ ಎಂದರು.

ಮುಖಂಡ ಪ್ರವೀಣ ನಾಡಗೌಡ ಮಾತನಾಡಿದರು. ಮತಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ವಿಠ್ಠಲ ತಟ್ರಿ, ನಗರ ಘಟಕದ ಮಾಜಿ ಅಧ್ಯಕ್ಷ ಪ್ರಭಾರ ಬಾಗಿ, ರಾಮಣ್ಣ ಹಿಡಕಲ್ , ಅಪ್ಪು ಮಂಗಸೂಳಿ, ನಿಂಗಪ್ಪ ಮಾಲಗಾಂವಿ, ವರ್ಧಮಾನ ಕಡಹಟ್ಟಿ, ರಮೇಶ ಧರೆನ್ನವರ, ಪ್ರಕಾಶ ಕುಳ್ಳಿ, ಬಾಳು ದೇಶಪಾಂಡೆ ಮತ್ತಿತರರಿದ್ದರು.

ಫೋಟೊ ಫೈಲ್ ನೇಮ್ ಟಿಡಿಎಲ್ -30-2ಎ

ಎ)

ತೇರದಾಳ ಬಿಜೆಪಿ ಕಚೇರಿಯಲ್ಲಿಕಾರ್ಯಕರ್ತರ ಸಂಘಟನೆ ಸಭೆ ಜರುಗಿತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ