ಪೌರ, ಸ್ವಚ್ಛತಾ ಕಾರ್ಮಿಕರಿಗೆ ನಿವೇಶನ ಭರವಸೆ

Contributed byahobalapathy.narayanappa@timesofindia.com|Vijaya Karnataka
Subscribe

ಚಿತ್ರದುರ್ಗದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಅವರು ಪೌರ ಮತ್ತು ಸ್ವಚ್ಛತಾ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ನಿವೇಶನ, ಖಾಯಂಗೊಳಿಸುವಿಕೆ, ವೇತನ, ಭತ್ಯೆ, ಸಮವಸ್ತ್ರ, ಸುರಕ್ಷಾ ಸಾಧನಗಳು, ವೈದ್ಯಕೀಯ ತಪಾಸಣೆ ಸೇರಿದಂತೆ ಹಲವು ಅಹವಾಲುಗಳನ್ನು ಸ್ವೀಕರಿಸಿದರು. ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಧ್ಯಕ್ಷರು ಭರವಸೆ ನೀಡಿದರು. ನಿವೇಶನ ಮಂಜೂರಾತಿ ಪ್ರಥಮ ಆದ್ಯತೆ ಎಂದು ತಿಳಿಸಿದರು.

new assurance for civic and sanitary workers regarding housing

ಸಂವಾದದಲ್ಲಿರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು (ಧಿಕಿಧಿಕ್ಕರ್ )

ಪೌರ, ಸ್ವಚ್ಛತಾ ಕಾರ್ಮಿಕರಿಗೆ ನಿವೇಶನ ಭರವಸೆ

ವಿಕ ಸುದ್ದಿಲೋಕ ಚಿತ್ರದುರ್ಗ

ನಗರದ ಜಿಪಂ ಸಭಾಂಗಣದಲ್ಲಿಶುಕ್ರವಾರ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು.ಪಿ ಅವರು, ನಡೆಸಿದ ಸಂವಾದದಲ್ಲಿಪೌರ ಹಾಗೂ ಸ್ವಚ್ಛತಾ ಕಾರ್ಮಿಕ ಸಂಕಷ್ಟಗಳ ಅನಾವರಣಗೊಂಡಿತು.

ನೌಕರಿ ಖಾಯಂಗೊಳಿಸುವಿಕೆ, ಕನಿಷ್ಠ ವೇತನ, ಇಎಸ್ ಐ, ಪಿಎಫ್ ಕಟಾವಣೆ, ವಾರ್ಷಿಕ ವೇತನ ಬಡ್ತಿ, ವಿಶೇಷ ಭತ್ಯೆ, ಸಮವಸ್ತ್ರ, ಸುರಕ್ಷಾ ಸಾಧನಗಳು, ಉಪಹಾರ, ವೈದ್ಯಕೀಯ ತಪಾಸಣೆ, ನಿವೇಶನ ಮಂಜೂರಾತಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಕುರಿತು ಆಯೋಗದ ಅಧ್ಯಕ್ಷ ಪಿ.ರಘು ಅವರಲ್ಲಿಪೌರ ಕಾರ್ಮಿಕರು ತಮ್ಮ ಅಳಲು ತೊಡಿಕೊಂಡರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಧ್ಯಕ್ಷರು, ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ಕುರಿತು ಅವರಿಂದಲೇ ಮಾಹಿತಿ ಪಡೆಯುವ ಸಲುವಾಗಿ ಸಂವಾದ ಏರ್ಪಡಿಸಲಾಗಿದ್ದು, ಇಲ್ಲಿಮಂಡಿಸಲಾಗುವ ಸಮಸ್ಯೆಗಳು, ಅಹವಾಲುಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ನಿವೇಶನ ಕೋರಿಕೆ:

ಪೌರ ಕಾರ್ಮಿಕರಿಗೆ ನಿವೇಶನ ಮಂಜೂರು ಮಾಡಿಲ್ಲ, 700 ಜನರಿಗೆ ಓರ್ವ ಪೌರ ಕಾರ್ಮಿಕರನ್ನು ನೇಮಕ ಮಾಡಬೇಕು ಎಂಬ ನಿಯಮವಿದೆ. ಹೀಗಾಗಿ ಚಿತ್ರದುರ್ಗ ನಗರಸಭೆಗೆ 350 ಪೌರ ಕಾರ್ಮಿಕರ ಅಗತ್ಯವಿದೆ. ಆದರೆ ಕೇವಲ 162 ಪೌರ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ನೇಮಕಾತಿ ಮಾಡಬೇಕು ಎಂದು ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ದುರಗೇಶಪ್ಪ ಅಧ್ಯಕ್ಷರಲ್ಲಿಕೋರಿದರು.

ಮಂಜೂರಾತಿ ಭರವಸೆ:

ಜಿಲ್ಲೆಯ ಎಲ್ಲಪೌರಕಾರ್ಮಿಕರಿಗೆ ನಿವೇಶನ ಮಂಜೂರಾತಿ ಮಾಡುವುದು ನನ್ನ ಪ್ರಥಮ ಆಧಿದ್ಯತೆಯಾಗಿದೆ. ಈಗಾಗಲೇ ಖಾಯಂಗೊಂಡ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಪೌರ ಕಾರ್ಮಿಕರು ಸಂವಾದಲ್ಲಿಹೇಳಿಕೊಂಡ ಎಲ್ಲಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಮುಕ್ತಿ ಹಾಡುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.

ಈ ವೇಳೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಮಹಾದೇವ ಸ್ವಾಮಿ, ಸಿಇಒ ಡಾ. ಆಕಾಶ್ .ಸಿ, ಉಪ ವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಶ್ , ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಸೇರಿದಂತೆ ಮತ್ತಿತರರಿದ್ದರು.

=ಧಿ=ಧಿ=ಧಿ=ಧಿ=

5 ವರ್ಷಗಳಿಂದ ಸಮವಸ್ತ್ರ ನೀಡಿಲ್ಲ

ಚಿತ್ರದುರ್ಗ ನಗರಸಭೆಯಲ್ಲಿ5 ವರ್ಷಗಳಿಂದ ಪೌರಕಾರ್ಮಿರಿಗೆ ಸಮವಸ್ತ್ರ ನೀಡಿಲ್ಲ. ಸುರಕ್ಷಾ ಪರಿಕರಗಳನ್ನು ಸಹ ಸಮರ್ಪಕವಾಗಿ ಕೊಡುವುದಿಲ್ಲ. ಸಭೆಗೆ ನಮ್ಮ ಹಣದಿಂದ ಕೊಂಡ ಸಮವಸ್ತ್ರ ಧರಿಸಿ ಬಂದಿದ್ದೇವೆ. ಇನ್ನು ಖಾಸಗಿ ಆಸ್ಪತ್ರೆಯಲ್ಲಿಪೌರ ಕಾರ್ಮಿಕರಿಗೆ ವೈದ್ಯಕೀಯ ತಪಾಸಣೆ ವರದಿಗಳನ್ನು ನೀಡುತ್ತಿಲ್ಲ. ಅಗತ್ಯ ಇರುವಷ್ಟು ಔಷಧಗಳನ್ನು ಕೊಡುವುದಿಲ್ಲಎಂದು ಪೌರ ಕಾರ್ಮಿಕರಾದ ರಾಜಪ್ಪ, ತನ್ವೀರ್ ಪಾಷ, ಕಾಮಾಕ್ಷಿ ಮನವಿ ಮಾಡಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಯೋಗದ ಅಧ್ಯಕ್ಷರು ಭರವಸೆ ನೀಡಿದರು.

=ಧಿ=ಧಿ=ಧಿ=ಧಿ=

ಪರಿಹಾರ ಧನ ಪಾವತಿಸಲು ಬೇಡಿಕೆ

ಚಿತ್ರದುರ್ಗ ನಗರಸಭೆಯಲ್ಲಿನೇರ ಪಾವತಿಯಡಿ ಕೆಲಸ ಮಾಡುತ್ತಿದ್ದ 3 ಸಫಾಯ ಕರ್ಮಚಾರಿಗಳು ಮರಣ ಹೊಂದಿದ್ದಾರೆ. ಅವರಿಗೆ ಪರಿಹಾರ ಧನ ನೀಡುವುದು ಬಾಕಿಯಿದೆ. ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಪೌರ ಕಾರ್ಮಿಕ ನವೀನ್ ಕುಮಾರ್ ಅಧ್ಯಕ್ಷರಲ್ಲಿಕೋರಿಕೊಂಡರು.

**

31ಸಿಟಿಡಿ42

ಚಿಧಿತ್ರಧಿದುರ್ಗ ನಗರದ ಜಿಪಂ ಸಭಾಂಗಣದಲ್ಲಿಶುಕ್ರವಾರ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು, ಪೌರಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ