ಕೊಟ್ಟೂರಲ್ಲಿಏಕತಾ ದಿನಾಚರಣೆ
ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆ
ವಿಕ ಸುದ್ದಿಲೋಕ ಕೊಟ್ಟೂರು
ತಾಲೂಕು ಕಚೇರಿಯ ಗಾಂಧೀಜಿ ಸಭಾಂಗಣದಲ್ಲಿಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನಾಚರಣೆ ನಿಮಿತ್ತ ಏಕತಾ ದಿನವನ್ನಾಗಿ ಶುಕ್ರವಾರ ಆಚರಿಸಲಾಯಿತು.
ಪಟೇಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಗ್ರೇಡ್ 2 ತಹಸೀಲ್ದಾರ್ ಎಂ.ಪ್ರತಿಭಾ ಮಾತನಾಡಿ, ದೇಶದಲ್ಲಿಒಗ್ಗಟ್ಟು ಹಾಗೂ ಐಕ್ಯತೆ ರೂಪಿಸುವುದಕ್ಕಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಕೈಗೊಂಡ ಕ್ರಮಗಳಿಂದಾಗಿ ರಾಜ ಆಡಳಿತ ಪ್ರದೇಶಗಳೆಲ್ಲಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಲೀನವಾದವು. ದೇಶದ ಐಕ್ಯತೆ, ಭದ್ರತೆ, ಸಮಗ್ರತೆ ಕಾಪಾಡಲು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಪಟೇಲರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಕಾಪಾಡಿದ್ದರು. ಸ್ವತಂತ್ರ ಭಾರತದ ಮೊದಲ ಆಡಳಿತದಲ್ಲಿಗೃಹ ಸಚಿವರಾಗಿ ಅವರು ಮಾಡಿದ ಕಾರ್ಯದಿಂದ ದೇಶದಲ್ಲಿ
ಐಕ್ಯತೆ ಮೂಡಿದೆ. ಅವರ ಆಡಳಿತ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಕಚೇರಿ ಸಿಬ್ಬಂದಿಗಳಾದ ದೇವರಾಜ, ಮಂಜುನಾಥ, ದ್ಯಾಮವ್ವ ಇದ್ದರು.
ವಿಎನ್ ಆರ್ 31ಕೆಟಿಆರ್ 1: ಕೊಟ್ಟೂರಿನ ತಾಲೂಕು ಕಚೇರಿಯಲ್ಲಿಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮ ದಿನ ನಿಮಿತ್ತ ಏಕತಾ ದಿನ ಆಚರಣೆಯಲ್ಲಿಸಿಬ್ಬಂದಿ
ಪ್ರತಿಜ್ಞೆ ಮಾಡಿದರು.
ವಿಎನ್ ಆರ್ 31ಕೆಟಿಆರ್ 2: ಕೊಟ್ಟೂರಿನಲ್ಲಿಪೊಲೀಸ್ ಇಲಾಖೆಯಿಂದ ಏಕತಾ ದಿನದ ನಿಮಿತ್ತ ಸಿಪಿಐ ದುರುಗಪ್ಪ ನೇತೃತ್ವದಲ್ಲಿಸಿಬ್ಬಂದಿ, ಶಾಲೆ ಮಕ್ಕಳು
ಏಕತಾ ಓಟ ನಡೆಸಿದರು.

