ವಿಕ ಸುದ್ದಿಲೋಕ ಕಟಪಾಡಿ
ಒತ್ತಾಯಪೂರ್ವಕ ಕಲಿಕೆಯಿಂದ ಲಲಿತಕಲೆಗಳು ಯಾರಿಗೂ ಒಲಿಯುವುದಿಲ್ಲ. ಕಲಾ ಕ್ಷೇತ್ರದಲ್ಲಿಸಾಧನೆ ಮಾಡಲು ಆಸಕ್ತಿ ಹಾಗೂ ಸತತ ಸಾಧನೆಯೊಂದಿಗೆ ದೈವಾನುಗ್ರಹವೂ ಬೇಕು. ಸಾಕಷ್ಟು ಪ್ರತಿಭಾಪೂರ್ಣ ಸಾಧಕರನ್ನು ಹೊಂದಿರುವ ಜಿಎಸ್ ಬಿ ಸಮಾಜ ದೈವದತ್ತ ಪ್ರತಿಭಾವಂತರನ್ನು ಹೊಂದಿರುವ ಸಮಾಜವಾಗಿದೆ ಎಂದು ಕಾಶೀ ಮಠದ ಶ್ರೀಮದ್ ಸಂಯಮೀಂದ್ರತೀರ್ಥ ಶ್ರೀಪಾದರು ಹೇಳಿದರು.
ಕಾಪು ಶ್ರೀ ವೆಂಕಟರಮಣ ದೇವಳದಲ್ಲಿದೇವಳದ ಮಹೋತ್ಸವ ಪ್ರಯುಕ್ತ ಶುಕ್ರವಾರ ಜರುಗಿದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯ ಜನ್ಮಶತಾಬ್ದಿ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಶತ ನಮನ ಶತ ಸ್ಮರಣ ಶತ ಕಲಾವಿದ ಕಲಾರಾಧನಾ’ ವಸ್ತು ಕಲಾ ಪ್ರದರ್ಶನ ಉದ್ಘಾಟಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭ ದೇವಸ್ಥಾನದ ಎರಡನೇ ಹಂತದ ಜೀರ್ಣೋದ್ಧಾರ ಕಾಮಗಾರಿಗೆ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು. ದೇವಸ್ಥಾನದ ಅರ್ಚಕ ವೇ.ಮೂ. ಕಮಲಾಕ್ಷ ಭಟ್ ಮತ್ತು ವೈದಿಕ ವೃಂದದವರು ಧಾರ್ಮಿಕ ಅನುಷ್ಠಾನಗಳನ್ನು ನೆರವೇರಿಸಿದರು. ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ದೇಗುಲದ ಎಂಜಿನಿಯರ್ ವೆಂಕಟೇಶ್ ಪೈ ಮಂಗಳೂರು ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಪ್ರಸಾದ್ ಗೋಕುಲ್ ದಾಸ್ ಶೆಣೈ, ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಆನಂದರಾಯ ಶೆಣೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ಆನಂದ್ರಾಯ ಶೆಣೈ, ಮೊಕ್ತೇಸರರಾದ ಸದಾಶಿವ ರಾಧಾಕೃಷ್ಣ ಕಾಮತ್ , ರಾಜೇಶ್ ಮಾಧವರಾಯ ಶೆಣೈ, ರಾಮ ಶಶಿಧರ ನಾಯಕ್ , ಶ್ರೀಕಾಂತ ಲಕ್ಷ್ಮೀನಾರಾಯಣ ಭಟ್ , ಆಡಳಿತ ಮಂಡಳಿ ಸದಸ್ಯರಾದ ಚಂದ್ರಕಾಂತ್ ಕಾಮತ್ , ಮೋಹನದಾಸ್ ಕಿಣಿ, ಕೃಷ್ಣಾನಂದ ನಾಯಕ್ , ರಾಜೇಶ್ ಶೆಣೈ ಮಜೂರು, ಸುನಿಲ್ ಪೈ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಕೆ.ಲಕ್ಷ್ಮೀನಾರಾಯಣ ಪುರುಷೋತ್ತಮ ನಾಯಕ್ , ಹಿರಿಯರಾದ ರಮೇಶ್ ಪೈ ಹಾಗೂ ಪೇಟೆಯ ಹತ್ತು ಸಮಸ್ತರು, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
ದೇವಳದಲ್ಲಿಜಿಎಸ್ ಬಿ ಸಮಾಜದ ನಾನಾ ಕಲಾ ಕ್ಷೇತ್ರದ ಕಲಾವಿದರಿಂದ ವಸ್ತು, ಕಲಾ ಪ್ರದರ್ಶನ ಜರುಗಿತು. ಚಿತ್ರಕಲೆಯ ನಾನಾ ಪ್ರಕಾರ, ಕಸೂತಿ, ಕರಕುಶಲ ಕಲೆ, ಪ್ರಾಚೀನ ವಸ್ತು, ನಾಣ್ಯ, ಅಂಚೆ ಸಂಗ್ರಹ, ಶಿಲ್ಪಶಾಸ್ತ್ರ, ತಾಂಜೂರ್ ಕಲೆ, ಮರಳು ಶಿಲ್ಪ, ವಸ್ತ್ರ ಆಭರಣ ವಿನ್ಯಾಸ, ಮಂಡಲ ಆರ್ಟ್ , ನಾನಾ ವಿನ್ಯಾಸದ ಹೂವಿನ ಮಾಲೆ, ರಂಗೋಲಿ, ಫೋಟೋಗ್ರಾಫಿ, ಸಾಹಿತ್ಯ ಕ್ಷೇತ್ರ ಹಾಗೂ ಇನ್ನಿತರ ಹಲವಾರು ಕಲಾ ವಿನ್ಯಾಸಗಳು ಪ್ರದರ್ಶನಗೊಂಡವು.
ಬಾಕ್ಸ್
ಶ್ರೀ ದೇವರ ಮಹೋತ್ಸವಕ್ಕೆ ಚಾಲನೆ
ದೇವಳದ ಶ್ರೀ ದೇವರ ಮಹೋತ್ಸವ ಪ್ರಯುಕ್ತ ಜರುಗಿದ ಅಹೋರಾತ್ರಿ ಏಕಾಹ ಭಜನಾ ಮಂಗಲಕ್ಕೆ ಶ್ರೀಮದ್ ಸಂಯಮೀಂದ್ರತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಮಹೋತ್ಸವದ ಅಂಗವಾಗಿ ನ.1ರಂದು ಬೆಳಗ್ಗೆ ಮಂಗಲ, ಸಂಜೆ ಅವಭೃತ ಉತ್ಸವ, ನ.2ರಂದು ಕಾರ್ತಿಕ ಏಕಾದಶಿ ಭಜನೆ, ನ.3ರಂದು ಉತ್ಥಾನ ದ್ವಾದಶಿ ತುಳಸಿ ಪೂಜೆ, ರಾತ್ರಿ ಶ್ರೀದೇವರ ಮೃಗ ಬೇಟೆ ಉತ್ಸವ, ನ.4ರಂದು ಬೆಳಗ್ಗೆ ಶ್ರೀದೇವರ ವನ ಸವಾರಿ, ಪಂಚಾಮೃತ, ಗಂಗಾ ಭಾಗೀರಥಿ ಅಭಿಷೇಕ, ವನ ಭೋಜನ, ರಾತ್ರಿ ಲಕ್ಷ ದೀಪೋತ್ಸವ, ಪೇಟೆ ಸವಾರಿ, ಕಟ್ಟೆಪೂಜೆ, ತೆಪ್ಪೋತ್ಸವ, ವಸಂತೋತ್ಸವ ಜರುಗಲಿದೆ.
ಫೋಟೋ ಕ್ಯಾಪ್ಷನ್
31 ಎಚ್ ಎ ವೆಂಕ : ಶತ ಕಲಾವಿದ ಕಲಾರಾಧನಾ ವಸ್ತು ಕಲಾ ಪದರ್ಶನ ಉದ್ಘಾಟನೆ
31ಎಚ್ ಎ ವೆಂಕ2 : ದೇವಸ್ಥಾನದ ಎರಡನೇ ಹಂತದ ಜೀರ್ಣೋದ್ಧಾರ ಕಾಮಗಾರಿಗೆ ಶಿಲಾನ್ಯಾಸ
(ವಿಸೂ : ಜಾಹಿರಾತು ಪಾರ್ಟಿ ವರದಿ. ದಯವಿಟ್ಟು ಆಧ್ಯತೆಯೊಂದಿಗೆ ಪ್ರಕಟಿಸಿ)

