ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ
ವಿಕ ಸುದ್ದಿಲೋಕ ಬಸವನಬಾಗೇವಾಡಿ
‘‘ಕೇವಲ ಭಾರತ ಮಾತ್ರವಲ್ಲದೆ ಇಡೀ ಜಗತ್ತಿನಲ್ಲೇ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ,’’ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಸಂಯೋಜಕ ಡಾ.ಕುಶಾಲ ಬರಗೂರ ಹೇಳಿದರು.
ಇಲ್ಲಿನ ಬಿಎಲ್ ಡಿಇ ಬಸವೇಶ್ವರ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿಶುಕ್ರವಾರ ಪುಸ್ತಕ ಪ್ರಾಧಿಕಾರ ಹಾಗೂ ವಿದ್ಯಾಲಯ ಸಹಯೋಗದಲ್ಲಿನಡೆದ ನನ್ನ ಮೆಚ್ಚಿನ ಪುಸ್ತಕ ಓದು ಮತ್ತು ಅವಲೋಕನ ಉಪನ್ಯಾಸ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
‘‘ಯುವ ಪೀಳಿಗೆಗೆ ಪುಸ್ತಕ ಓದುವುದನ್ನು ರೂಢಿ ಮಾಡಿಸಬೇಕಿದೆ. ಈ ಕೆಲಸವನ್ನು ಪ್ರಾಧಿಕಾರ ಮಾಡುತ್ತಿದೆ. ಪಠ್ಯ ಕೇಂದ್ರಿತ ಕಾರ್ಯಕ್ರಮಗಳನ್ನು ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಕನ್ನಡ ಪುಸ್ತಕ ಪ್ರಾಧಿಕಾರ ನಡೆಸಿಕೊಂಡು ಹೊರಟಿದೆ. ಇಂದಿನ ಕಾಲಘಟ್ಟದಲ್ಲಿತತ್ವ ಹಾಗೂ ಆದರ್ಶಗಳು ಉಳಿಯಬೇಕು. ಪಠ್ಯ ಪುಸ್ತಕವನ್ನು ಅರ್ಥಮಾಡಿಕೊಂಡು ಓದಿದರೆ ತಲೆಯಲ್ಲಿಅಚ್ಚಾಗಿರಬೇಕು. ಆ ರೀತಿ ಓದಬೇಕು,’’ಎಂದರು.
‘‘ಅಂಗಳದಲ್ಲಿತಿಂಗಳ ಪುಸ್ತಕ ಕಾರ್ಯಕ್ರಮ ಬೆಂಗಳೂರಿನಲ್ಲಿನಡೆದಿದೆ. ಈ ಕಾರ್ಯಕ್ರಮವನ್ನು ಪ್ರತಿ ಜಿಲ್ಲೆ, ತಾಲೂಕುಗಳಿಗೂ ವಿಸ್ತರಿಸಲು ಯೋಚಿಸಿದ್ದೇವೆ. ಮಕ್ಕಳು ಬರೆಯುವ ಸಾಹಿತ್ಯವನ್ನು ಗ್ರಂಥ ರೂಪದಲ್ಲಿಉಚಿತವಾಗಿ ಪ್ರಕಟಿಸಿ ಕೊಡುತ್ತೇವೆ. ವಿದ್ಯಾರ್ಥಿಗಳಲ್ಲಿಓದಿನ ಕಡೆಗೆ ಗಮನ ನೀಡುವಂತೆ ಮಾಡುವ ಜವಬ್ದಾರಿ ಬಹಳಷ್ಟಿದೆ,’’ಎಂದರು.
ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಮಾತನಾಡಿ,‘‘ಈಗಿನ ವಿದ್ಯಾರ್ಥಿಗಳಿಗೆ ಪುಸ್ತಕದ ಕೊರತೆ ಇಲ್ಲ. ಬರೆಯಲು ಟಿಪ್ಪಣಿ ಪುಸ್ತಕ ಸರಳವಾಗಿ ಸಿಗುತ್ತವೆ. ಹಿಂದೆ ರದ್ದಿಯಲ್ಲಿಸಿಗುವ ಪುಸ್ತಕಗಳನ್ನೇ ಓದಿ ಅದೆಷ್ಟೋ ಮಂದಿ ಸಾಹಿತಿಗಳಾಗಿದ್ದಾರೆ. ನೌಕರರದಾಗಿದ್ದಾರೆ. ಇಂದಿನ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ,’’ಎಂದರು.
ಸಾಹಿತಿ ಶಂಕರ ಬೈಚಬಾಳ ಉಪನ್ಯಾಸ ನೀಡಿದರು. ಕವಿ ಕೆ.ಎಸ್ .ಬಾಗೇವಾಡಿ, ಡಾ. ಎ.ವಿ.ಸೂರ್ಯವಂಶಿ, ಕಾವೇರಿ ಅಡಗಿಮನಿ, ಯಮುನಾ ಹಾದಿಮನಿ, ಋುತುಜಾ ಪವಾರ, ಲಕ್ಷಿತ್ರ್ಮ ಮಿಣಜಗಿ, ಅಶ್ವಿನಿ ಕವಲಗಿ, ಸುನಿತಾ ಕುಳಗೇರಿ, ಅಂಬಿಕಾ ಬಡಿಗೇರ, ರೇಖಾ ಅಂಬಲಿ, ಪೂರ್ಣಿಮಾ ಅರಸನಾಳ, ಸಿ.ಪಿ.ಧಡೇಕರ, ಡಾ.ಬಸವರಾಜ ಸಾಲವಾಡಗಿ, ಮಂಜುನಾಥ ಯಾದವ ಇದ್ದರು.
31ಬಿಬಿಡಿ1 ಫೋಟೊ (ಬರಗೂರ)
ಬಸವನಬಾಗೇವಾಡಿಯ ಬಿಎಲ್ ಡಿಇ ಬಸವೇಶ್ವರ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿನಡೆದ ನನ್ನ ಮೆಚ್ಚಿನ ಪುಸ್ತಕ ಓದು ಮತ್ತು ಅವಲೋಕನ ಉಪನ್ಯಾಸ ಕಾರ್ಯಕ್ರಮದಲ್ಲಿಡಾ. ಕುಶಾಲ ಬರಗೂರ ಮಾತನಾಡಿದರು.

