ಪ್ರೀತಿ ಸಹಬಾಳ್ವೆಯಿಂದ ಜೀವನ ನಡೆಸಿ

Contributed bymohankumard.reddy555@gmail.com|Vijaya Karnataka
Subscribe

ಗುಡಿಬಂಡೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ವಿಚಾರಧಾರೆಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಜಾತಿ, ಧರ್ಮಗಳ ಭೇದ ಮರೆತು ಮಾನವೀಯತೆಯಿಂದ ಬಾಳಬೇಕು ಎಂದು ಪ್ರಿನ್ಸಿಪಾಲ್‌ ಆಫ್ಜಲ್‌ ಬಿಜಲಿ ಹೇಳಿದರು. ಗಾಂಧೀಜಿಯವರ ಶಾಂತಿ, ಸೌಹಾರ್ದತೆ ವಿಶ್ವಕ್ಕೆ ಮಾದರಿ ಎಂದರು. ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಭಾರತದ ಸ್ವಾಭಿಮಾನ ಹೆಚ್ಚಿಸಿದರು ಎಂದು ತಿಳಿಸಿದರು.

lecture on the philosophical thoughts of gandhi and lal bahadur shastri

ವಿಕ ಸುದ್ದಿಲೋಕ ಗುಡಿಬಂಡೆ

ಜಾತಿ ಧರ್ಮಗಳ ನಡುವೆ ಇರುವ ಭೇದ ಭಾವಗಳನ್ನು ತೊರೆದು ಸಾಮಾಜಿಕ ಚಿಂತನೆಗಳನ್ನು ಇಟ್ಟುಕೊಂಡು ಸಮಾಜದಲ್ಲಿನಾವು ಇತರರ ಜತೆಯಲ್ಲಿಮಾನವೀಯತೆ ಹಾಗೂ ಮನುಷ್ಯತ್ವದಿಂದ ಜೀವನ ನಡೆಸಬೇಕು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಆಫ್ಜಲ್ ಬಿಜಲಿ ಅಭಿಪ್ರಾಯಪಟ್ಟರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಚಿಕ್ಕಬಳ್ಳಾಪುರ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಗುಡಿಬಂಡೆ ಸಂಯುಕ್ತ ಆಶ್ರಯದಲ್ಲಿ‘ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ವಿಚಾರಧಾರೆಗಳ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿಯವರ ಶಾಂತಿ, ಸೌಹಾರ್ದತೆ, ಸ್ನೇಹ ಮನೋಭಾವನೆ ಇಂದು ವಿಶ್ವಕ್ಕೆ ಮಾದರಿಯಾಗಬೇಕಿದೆ ಎಂದರು.

ಜಗತ್ತಿನಲ್ಲಿಶಾಂತಿ ನೆಲೆಗೊಳ್ಳಬೇಕು, ದ್ವೇಷ, ಅಸೂಯೆ ಜಾತಿ-ಜಾತಿಗಳ ಮಧ್ಯೆ ಭಿನ್ನಾಭಿಪ್ರಾಯ ದೂರವಾಗಬೇಕು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತದ ಸ್ವಾಭಿಮಾನ, ಘನತೆ ಗೌರವಗಳನ್ನು ಹೆಚ್ಚಿಸಿದರು. ‘‘ಜೈ ಜವಾನ್ ಜೈ ಕಿಸಾನ್ ’’ ಎಂಬ ಘೋಷಣೆ ಮೊಳಗಿಸಿದರು. ಅವರ ಸರಳ, ದಿಟ್ಟ ನಡವಳಿಕೆ ನಮಗೆಲ್ಲರಿಗೂ ಆದರ್ಶಪ್ರಾಯವಾಗಬೇಕು ಎಂದು ತಿಳಿಸಿದರು.

ಸಂಚಾಲಕ ಪಾತಮುಕ್ತಕಹಳ್ಳಿ ಚಲಪತಿಗೌಡ ಮಾತನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳೆದು ಬಂದ ರೀತಿ, ಹಿನ್ನೆಲೆ ಬಗ್ಗೆ ತಿಳಿಸುತ್ತಾ ನಾನಾ ಪ್ರಕಾರದ ಸಾಹಿತ್ಯದ ಕೃಷಿಯಲ್ಲಿತೊಡಗಿರುವಂತಹ ಲೇಖಕರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿವಾರ್ಷಿಕವಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುತ್ತಿದೆ. ಆ ಮೂಲಕ ಸಾಹಿತಿಗಳಿಗೆ ಇನ್ನೂ ಹೆಚ್ಚು ಕೃತಿಗಳನ್ನು ರಚಿಸಲು ಉತ್ಸಾಹ ತುಂಬುವಂತಹ ಕಾರ್ಯಗಳಲ್ಲದೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ‘ಚಕೋರ ಸಾಹಿತ್ಯ ವಿಚಾರ ವೇದಿಕೆ’ ಮುಖಾಂತರ ಮೌಲ್ಯಯುತ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ ಎಂದರು.

ಫಯಾಜ್ ಅಹಮದ್ ಮಾತನಾಡಿ, ಗಾಂಧೀಜಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ದೇಶದ ಉದ್ದಗಲಕ್ಕೂ ಸಂಚರಿಸಿ ಜನರನ್ನ ಸಂಘಟಿಸಿ ನಾನಾ ರೀತಿಯ ಉಪವಾಸ ಸತ್ಯಾಗ್ರಹ, ಉಪನ್ಯಾಸ ಹಾಗೂ ಹೋರಾಟಗಳ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಇಡೀ ಜೀವನವನ್ನೇ ಮುಡಿಪಾಗಿಟ್ಟದ್ದಿದ್ದರು, ಅನೇಕ ಬಾರಿ ಬ್ರಿಟಿಷರ ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಹೋರಾಡಿ ಸೆರೆಮನೆ ವಾಸ ಅನುಭವಿಸಿ ಎಂದರು.

ಸತ್ಯ ಶಾಂತಿ ಅಹಿಂಸೆ ಇವುಗಳನ್ನು ಸ್ವಾತಂತ್ರ್ಯ ಗಳಿಸಲು ಅಸ್ತ್ರಗಳನ್ನಾಗಿಸಿಕೊಂಡರು. ಶ್ರೀಮಂತ ಕುಟುಂಬದಲ್ಲಿಜನಿಸಿದ್ದರೂ ಭಾರತದ ಜನರ ಬಡತನ, ಅಸ್ಪೃಶ್ಯತೆ, ಜಾತಿ ತಾರತಮ್ಯ ಮುಂತಾದ ವಿಚಾರಗಳಿಂದ ಬೇಸರಗೊಂಡು ಅವುಗಳ ನಿವಾರಣೆಗಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಯೋಜಿಸಿದರು ಎಂದು ತಿಳಿಸಿದರು.

ಜನರಲ್ಲಿಜಾಗೃತಿ ಮೂಡಿಸಲು ಹರಿಜನ ಪತ್ರಿಕೆಯನ್ನು ಹೊರಡಿಸಿದರು. ಹಾಗೆಯೇ ಸರಳ ಸಜ್ಜನಿಕೆಗೆ ಹೆಸರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತದ ಜನರ ಬಡತನ ಹಾಗೂ ಹಸಿವಿನ ಸಂಕಷ್ಟದಿಂದ ದೂರ ಮಾಡಲು ವಾರಕ್ಕೆ ಒಮ್ಮೆ ಸ್ವತಃ ತಾವೇ ಉಪವಾಸ ಮಾಡಿ ಎಂದು ದೇಶದ ಜನತೆಗೆ ಕರೆ ನೀಡಿದರು.

ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ರವೀಂದ್ರ ಮಾತನಾಡಿದರು.

ಕಾರ್ಯಕ್ರಮದಲ್ಲಿಕಸಾಪ ನಿಕಟ ಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಸ್ವ ರಚಿತ ಕವನ ವಾಚಿಸಿ ವಿದ್ಯಾರ್ಥಿಗಳು ಸಹ ಕವನಗಳನ್ನು ರಚಿಸುವಂತೆ ಪ್ರೇರೆಪಣೆ ನೀಡಿದರು. ಅಮರಾವತಿ ಹಾಡುಗಳನ್ನ ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಇದೇ ವೇಳೆ ಉಪನ್ಯಾಸಕರಾದ ಸೋಮಶೇಖರ್ , ರೆಡ್ಡಮ್ಮ, ನರೇಶ್ , ಮೋಹನ್ ಕುಮಾರ್ . ಡಿ, ಅನಿಲ್ ಕುಮಾರ್ , ಅನಂತ್ , ಚೈತ್ರ, ಸುಮಾ, ವೀಣಾ ಕುಮಾರಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

30 ಎಂಬಿಜಿ 02

ಗುಡಿಬಂಡೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ‘ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ’ ಅವರ ವಿಚಾರಧಾರೆಗಳ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ