ಸರಕಾರದ ಹಣ ಖರ್ಚಿನಲ್ಲಿಎಚ್ಚರಿಕೆ ಅಗತ್ಯ
ವಿಕ ಸುದ್ದಿಲೋಕ ವಿಜಯನಗರ (ಹೊಸಪೇಟೆ)
‘‘ಸರಕಾರದ ಹಣವನ್ನು ಸ್ವಂತ ಹಣಕ್ಕಿಂತ ಹೆಚ್ಚು ಎಚ್ಚರಿಕೆ ವಹಿಸಿ ಖರ್ಚು ಮಾಡಬೇಕು. ಹಣಕಾಸಿನ ವಿಷಯದಲ್ಲಿಉಲ್ಲಂಘನೆ ಮಾಡುವುದು ಭವಿಷ್ಯದಲ್ಲಿಸಮಸ್ಯೆಗಳನ್ನು ತರಬಹುದು’’ ಎಂದು ಕನ್ನಡ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಸಿ.ವಿನೋದ ಕುಮಾರ್ ಹೇಳಿದರು.
ಕನ್ನಡ ವಿವಿಯ ಕ್ರಿಯಾಶಕ್ತಿ ಕಟ್ಟಡದ ಸಿಂಡಿಕೇಟ್ ಹಾಲನಲ್ಲಿಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿಮಾತನಾಡಿದರು.
ವಿವಿಯ ಸಿಬ್ಬಂದಿ ಕೆಲಸದ ನಿರ್ವಹಣೆಯಲ್ಲಿಸಹಕಾರ ನೀಡಿದ್ದರು. ಹಸಿರು ತುಂಬಿದ ವಿವಿಯ ಆವರಣ ಅದ್ಬುತವಾಗಿದೆ. ಈ ಪರಿಸರ ಮನಸ್ಸಿಗೆ
ಶಾಂತತೆಯನ್ನು ನೀಡುತ್ತದೆ ಎಂದರು.
ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆವಹಿಸಿ ಮಾತನಾಡಿ, ಹಣಕಾಸು ಅಧಿಕಾರಿ ವಿನೋದ್ ಕುಮಾರ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದರು.
ಅವರು ವಿವಿಗೆ ಒಳ್ಳೆಯ ಅಧಿಕಾರಿ ಆಗಿದ್ದರು. ಭವಿಷ್ಯದಲ್ಲಿಅವರು ಇನ್ನು ಉತ್ತಮ ಜವಾಬ್ದಾರಿಗಳನ್ನು ನಿಭಾಯಿಸಲಿ ಎಂದು ಹಾರೈಸಿದರು.
ಹಣಕಾಸು ಅಧಿಕಾರಿ ವಿನೋದ್ ಕುಮಾರ್ ಮತ್ತು ವಾಹನ ಚಾಲಕ ಎಂ.ಯು. ಎರಿಸ್ವಾಮಿ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಪ್ರಭಾರ ಕುಲಸಚಿವ ಗುರುಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.
--
ಪ್ರತಿಜ್ಞಾ ವಿಧಿ ಸ್ವೀಕಾರ
ಕನ್ನಡ ವಿಶ್ವವಿದ್ಯಾಲಯದಲ್ಲಿಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಮತ್ತು ಏಕತಾ ದಿವಸ ನಿಮಿತ್ತ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಕುಲಸಚಿವ(ಪ್ರಭಾರ) ಗುರುಬಸಪ್ಪ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
--
ಫೋಟೊ:
ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಹಾಗೂ ಪ್ರಮುಖರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕನ್ನಡ ವಿವಿಯ ಕ್ರಿಯಾಶಕ್ತಿ ಕಟ್ಟಡದ ಸಿಂಡಿಕೇಟ್ ಹಾಲನಲ್ಲಿಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿದರು.

