ಶಿಲ್ಪಾ ಅಧ್ಯಕ್ಷತೆಯಲ್ಲಿಕೌನ್ಸಿಲ್ ಸಾಮಾನ್ಯ ಸಭೆ | ಬೀದಿಯೊಂದರಲ್ಲಿ50 ನಾಯಿಗಳು | ವಿಧಿಲೇಧಿವಾಧಿರಿಧಿಯಾಧಿಗದ ಕಧಿಸ ಕಿಧಿಡಿ(ಧಿಕಿಧಿಕ್ಕರ್ )
ನಾಯಿಗಳ ಹಾವಳಿಗೆ ಬ್ರೇಕ್ ಹಾಕಿ
-----
ವಿಕ ಸುದ್ದಿಲೋಕ ಚಳ್ಳಕೆರೆ
ನಗರದ ಒಂದೊಂದು ಬೀದಿಯಲ್ಲಿ50 ಬೀದಿ ನಾಯಿಗಳಿದ್ದು, ಕಳೆದ ಎಂಟು ತಿಂಗಳಿಂದ ನಾಯಿಗಳನ್ನು ಸೆರೆ ಹಿಡಿಯುವಂತೆ ತಿಳಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ನಾಯಿಗಳ ಹಾವಳಿಗೆ ಬ್ರೇಕ್ ಹಾಕಿ ಎಂದು ನಗರಸಭೆಯ ಸದಸ್ಯರು ಆಗ್ರಹಿಸಿದರು.
ನಗರಸಭೆ ಸಭಾಂಗಣದಲ್ಲಿಶುಕ್ರವಾರ ಶಿಲ್ಪಾ ಅಧ್ಯಕ್ಷತೆಯಲ್ಲಿನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿಬೀದಿ ನಾಯಿಗಳ ಹಾವಳಿ, ಕಸದ ರಾಶಿ, ಸ್ಮಶಾನಗಳ ಮೂಲ ಸೌಲಭ್ಯ ಬಗ್ಗೆ ಸಭೆಯಲ್ಲಿಚಧಿರ್ಚಿಧಿಸಧಿಲಾಧಿಯಿತು.
ಸದಸ್ಯ ಸಿ.ಎಂ.ವಿಶುಕುಮಾರ್ ಮಾತನಾಡಿ, ಬೀದಿಯೊಂದರಲ್ಲಿ50 ನಾಯಿಗಳು ಕಾಣಿಸಿಕೊಳ್ಳುತ್ತಿದ್ದು, ಸೆರೆ ಹಿಡಿಯುವಂತೆ 8 ತಿಂಗಳಿಂದ ಹೇಳುತ್ತಾ ಬರುತ್ತಿದ್ದೇವೆ ಎಂದಾಗ ಪೌರಾಯುಕ್ತ ಜಗರೆಡ್ಡಿ ಟೆಂಡರ್ ಕರೆಯಲಾಗಿತ್ತು. ಸಿಂಗಲ್ ಟೆಂಡರ್ ಬಂದ ಹಿನ್ನೆಲೆಯಲ್ಲಿ, ರದ್ದುಗೊಳಿಸಲಾಗಿತ್ತು. ಮತ್ತೆ ಮರು ಟೆಂಡರ್ ಕರೆದು ನಾಯಿಗಳನ್ನು ಹಿಡಿಯುವ ಕೆಲಸ ಮಾಡಲಾಗುವುದು ಎಂದರು.
ಸದಸ್ಯ ವಿ.ವೈ.ಪ್ರಮೋದ್ ಮಾತನಾಡಿ, ನಮ್ಮ ವಾರ್ಡ್ ನಲ್ಲಿಬೀದಿನಾಯಿ ಕಚ್ಚಿದ್ದು, ತುರ್ತು ಇರುವುದರಿಂದ ಹಳೆ ಟೆಂಡರ್ ಗೆ ಡಿಸಿ ಬಳಿ ಒಪ್ಪಿಗೆ ಪಡೆದು ನಾಯಿ ಹಿಡಿಯಿರಿ ಎಂದರೆ, ಸದಸ್ಯ ಸಿ. ಶ್ರೀನಿವಾಸ್ ಪ್ರತಿಕ್ರಿಯಿಸಿ ಸಿಂಗಲ್ ಟೆಂಡರ್ ರದ್ದುಪಡಿಸುವುದು ಬಿಟ್ಟು, ತುರ್ತು ಕೆಲಸವಿರುವುದರಿಂದ ಡಿಸಿ ಬಳಿ ಅನುಮತಿ ಪಡೆಯಿರಿ, 31 ಸದಸ್ಯರು ಒಪ್ಪಿಗೆ ನೀಡಿದ್ದೇವೆ. ಡಿಸಿ ಸುಪ್ರೀಂ ಆದರೆ, ಕೌನ್ಸಿಲ್ ಬಾಡಿಗೆ ಬೆಲೆಯೇ ಇಲ್ಲವೇ ಎಂದು ಪ್ರಶ್ನೆ ಮಾಡಿದಾಗ ಎಇಇ ವಿನಯ್ ಇಂದಿನಿಂದ ಪ್ರಕ್ರಿಯೆ ಆರಂಭಿಸುವುದಾಗಿ ತಿಳಿಸಿದರು.
=ಧಿ=ಧಿ=ಧಿ=ಧಿ=
‘ಪೌರಾಯುಕ್ತರೇ ವಾರ್ಡ್ ಸುತ್ತಿಧಿ’
ಎಸ್ .ಜಯಣ್ಣ ಮಾತನಾಡಿ, ನಗರಸಭೆಯಲ್ಲಿ5 ಜನ ಆರೋಗ್ಯ ನಿರೀಕ್ಷರಿದ್ದರೂ ಮುಖ್ಯ ರಸ್ತೆಯೇ ಸ್ವಚ್ಛವಾಗಿರಲ್ಲ. ನಮ್ಮ ಅವಧಿ ಮುಗಿದಿತು. ಪೌರಾಯುಕ್ತ ಸ್ವಾಮಿಗಳೇ ವಾರ್ಡ್ ಗಳನ್ನು ಸುತ್ತು ಹಾಕಿ, ಆಗ ನಗರದ ಸಮಸ್ಯೆ, ಕಸದ ಬಗ್ಗೆ ತಿಳಿಯುವುದು. ಹಿಂದೆ ಹನುಮಂತರಾಯ ಅವರು ವಾರ್ಡ್ ಸುತ್ತು ಹೊಡೆಯುತ್ತಿದ್ದರು ಎಂದರು.
ಸದಸ್ಯೆ ಜಯಲಕ್ಷಿತ್ರ್ಮೕ ಮಾತನಾಡಿ, ಎಲ್ಲೆಂದರಲ್ಲಿಕಸದ ರಾಶಿ ಕಾಣುತ್ತಿದ್ದು, ವಿಲೇವಾರಿ ಮಾಡುತ್ತಿಲ್ಲಎಂದು ಕಿಡಿಕಾರಿದರೆ, ಸದಸ್ಯ ಶ್ರೀನಿವಾಸ್ ಮುಖ್ಯ ರಸ್ತೆಯಲ್ಲೇ ಕಸ ಸುರಿಯುವ ಅಂಗಡಿಯವರಿಗೆ 5 ಸಾವಿರ ದಂಡ ಹಾಕಿ ಮತ್ತು ಕಸ ಗಾಡಿಗಳ ಚಾಲಕರಿಗೆ ಡ್ರೈವಿಂಗ್ ಲೈಸನ್ಸ್ ಇಲ್ಲ, ಕೆಲವರು ಕುಡಿದು ವಾಹನ ಚಾಲನೆ ಮಾಡುವುದರಿಂದ ಚಿಕ್ಕ ಗಲ್ಲಿಗಳಲ್ಲಿಮಕ್ಕಳ ಮೇಲೆ ವಾಹನ ನುಗ್ಗಿ ಅಪಘಾತವಾದರೇ ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
=ಧಿ=ಧಿ=ಧಿ=ಧಿ=
ಸ್ಮಶಾನ ಸ್ವಚ್ಛತೆಗೆ ಆಧಿಗ್ರಹ
ಸದಸ್ಯ ಎಸ್ .ಜಯಣ್ಣ ನಗರಸಭೆ ಮರ್ಯಾದೆ ಹೋಗುವ ಮುನ್ನ ಕಸ ಗಾಡಿ ಡ್ರೈವರ್ ಗಳಿಗೆ ಲೈಧಿಸೆನ್ಸ್ ಮಾಡಿಸಿ ಕೊಡಿ ಎಂದು ಎಚ್ಚರಿಸಿದರು. ವಿ.ವೈ.ಪ್ರಮೋದ್ ಮಾತನಾಡಿ, ನಗರದಲ್ಲಿಸ್ಮಶಾನಗಳಿಗೆ ಜಾಗ ಸಿಗುತ್ತಿಲ್ಲ, ಸಾರ್ವಜನಿಕ ಸ್ಮಶಾನ ತುಂಬಿಕೊಂಡಿರುವುದರಿಂದ ಬರ್ನಿಂಗ್ ಯಂತ್ರ ವ್ಯವಸ್ಥೆ ಮಾಡಿ ಎಂದರೆ, ಸದಸ್ಯ ಶ್ರೀನಿವಾಸ್ ಸ್ಮಶಾನಗಳ ಸ್ವಚ್ಛತೆಗೊಳಿಸಿ ಎಂಬ ಆಗ್ರಹಕ್ಕೆ ಎಇಇ ವಿನಯ್ ಸ್ವಚ್ಛಗೊಳಿಸಲಾಗುವುದು ಎಂಬ ಭರವಸೆ ನೀಡಿದರು.
---
ಬಾಧಿಕ್ಸ್
ಹಧಿಲವು ಕಾಧಿಮಧಿಗಾಧಿರಿಗೆ ಅಧಿನುಧಿಮೋಧಿದಧಿನೆ
ಸಭೆಯಲ್ಲಿನಗರಸಭೆ ಇ-ಆಫೀಸ್ ಅನುಷ್ಠಾನಗೊಳಿಸಲು ಯುಪಿಎಸ್ , ಲಾನ್ ಕೇಬಲ್ ಮತ್ತು ಇತರೆ ಸಾಮಗ್ರಿಗಳ ಖರೀದಿ, ಐ ಲವ್ ಚಳ್ಳಕೆರೆ ನಾಮಫಲಕ್ಕೆ ಎಸ್ ಎಸ್ ಗ್ರಿಲ್ ಅಳವಡಿಕೆ, ಕಚೇರಿಗೆ ವಾಹನಗಳ ಸೇವೆ ಸೇರಿದಂತೆ ಸಿಸಿ ಚರಂಡಿ, ಇಂಟರ್ ಲಾಕಿಂಗ್ ಫೇವರ್ಸ್ ಅಳವಡಿಕೆ, ಡೆಕ್ ಸ್ಲಾಬ್ ನಿರ್ಮಾಣ, ರಸ್ತೆಗಳಿಗೆ ನಾಯಕರ ಹೆಸರು ಮತ್ತು ಮಹನೀಯ ಹೆಸರಿನಲ್ಲಿವೃತ್ತ ನಿರ್ಮಾಣಕ್ಕೆ ಸಭೆಗೆ ಅನುಮೋದನೆ ನೀಡಿತು.
-----
31ಸಿಎಲ್ ಕೆ 1
ಚಳ್ಳಕೆರೆ ನಗರಸಭೆಯಲ್ಲಿಶುಕ್ರವಾರ ನಡೆದ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿಪೌರಾಯುಕ್ತ ಜಗರೆಡ್ಡಿ ಮಾಹಿತಿ ನೀಡುತ್ತಿರುವುದು.

