ವಿಕ ಸುದ್ದಿಲೋಕ ಬೆಳಗಾವಿ ಬೆಳಗಾವಿ ಜಿಲ್ಲಾವಿಶ್ವಕರ್ಮ ವಿದ್ಯಾವರ್ಧಕ ಸಂಘದಿಂದ ನಿರ್ಮಿಸಲಾಗಿರುವ ಸುವರ್ಣ ಮಹೋತ್ಸವ ಸಭಾಭವನ ಉದ್ಘಾಟನೆ ನ.3 ರಂದು ನಗರದ ಕಾಳಿ ಅಂಬ್ರಾಯಿಯಲ್ಲಿಜರುಗಲಿದ್ದು, ಈ ಪ್ರಯುಕ್ತ ನ.2ರಿಂದಲೇ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನ. 2ರಂದು ಸಂಜೆ 6ಕ್ಕೆ ಹೋಮ, ಪೂಜೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪಂ. ಶಂಕರಾಚಾರ್ಯ ಗುರುನಾಥಚಾರ್ಯ ಕಡ್ಲಾಸ್ಕರ ಮತ್ತು ಗುರುನಾಥಾಚಾರ್ಯ ಶಂಕರಾಚಾರ್ಯ ಕಡ್ಲಾಸ್ಕರ್ ನಡೆಸಿಕೊಡುವರು. ಶಹಾಪುರ ಕಾಳಿಕಾ ಮಹಿಳಾ ಮಂಡಳದಿಂದ ದೇವಿಸ್ತುತಿ, ಶ್ರೀಕಾಂತ ಪೋತದಾರ ಅವರು ಭಕ್ತಿ ಗೀತೆ ಪ್ರಸ್ತುತಪಡಿಸುವರು. ನ.3ರಂದು ಬೆಳಗ್ಗೆ 10 ಗಂಟೆಗೆ ಸುವರ್ಣ ಮಹೋತ್ಸವ ಸಭಾಭವನ ಉದ್ಘಾಟನೆ ಮತ್ತು ದಾನಿಗಳ ಸನ್ಮಾನ ಸಮಾರಂಭ ನಡೆಯಲಿದೆ. ನವಲಗುಂದ ಅಜಾತ ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ ಮತ್ತು ಚನ್ನಮ್ಮನ ಕಿತ್ತೂರು ವಿಶ್ವಕರ್ಮ ಏಕದಂಡಗಿಮಠದ ಸರಸ್ವತಿ ಪೀಠಾಧ್ಯಕ್ಷ ಪ್ರಮೋದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಳಗಾವಿ ಜಿಲ್ಲಾವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಬಡಿಗೇರ ಅಧ್ಯಕ್ಷತೆ ವಹಿಸುವರು. ಸಂಘದ ಗೌರವಾಧ್ಯಕ್ಷ ರಾಜೀವ ಪಂಡಿತ, ವಿದ್ವಾನ್ ಶಂಕರಚಾರ್ಯ ಕಡ್ಲಾಸ್ಕರ್ , ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪಿ.ಬಿ. ಬಡಿಗೇರ, ಉದಯ ಅಮ್ಮಣಗಿ, ಶ್ಯಾಮಸುಂದರ ಪತ್ತಾರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಬಡಿಗೇರ ಪ್ರಕಟಣೆಯಲ್ಲಿತಿಳಿಸಿದ್ದಾರೆ.

