ವಿಕ ಸುದ್ದಿಲೋಕ ಧಾರವಾಡ
ನಗರದ ಯಾಲಕ್ಕಿಶೆಟ್ಟರ ಕಾಲೊನಿಯ ಶ್ರೀ ಕಾನಡಾ ವಿಠ್ಠಲ ರುಕ್ಷಮಿಣಿ ಮಂದಿರ ಸಮಿತಿ ವತಿಯಿಂದ ನ. 2ರಂದು ಮಧ್ಯಾಹ್ನ 2ಕ್ಕೆ ಪಾಂಡುರಂಗ ಜ್ಯೋತಿಯೊಂದಿಗೆ ಪಾದಯಾತ್ರೆ ನಡೆಯಲಿದೆ ಎಂದು ಪಾಂಡುರಂಗನ ಭಕ್ತರಾದ ಸುನೀತಾ ದತ್ತವಾಡ ಹೇಳಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿಮಾತನಾಡಿದ ಅವರು ‘‘ ಧಾರವಾಡ ಶಂಕರಾಚಾರ್ಯ ಮಠದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ಯಾಲಕ್ಕಿ ಶೆಟ್ಟರ ಕಾಲೊನಿ, ಕಾನಡಾ ವಿಠ್ಠಲ ಮಂದಿರ, ಸಿಎಂಡಿಆರ್ ಕಚೇರಿ, ಅಂಬೇಡ್ಕರ್ ನಗರ, ಯಾಲಕ್ಕಿಶೆಟ್ಟರ್ ಕಾಲೊನಿ ಮಾರ್ಗವಾಗಿ ಸಂಚರಿಸಲಿದೆ. ಹಿಂಗುಲಾಂಬಿಕಾ ಮಹಿಳಾ ಮಂಡಳದ ಅಧ್ಯಕ್ಷೆ ಗೀತಾ ಹಂಚಾಟೆ, ಭಾಗ್ಯಶ್ರೀ ಮಧುಸೂದನ ಪಿಸೆ, ವಿಜಯಾ ನಾಯಕ, ಮೃಣಾಲ ಜೋಶಿ ಅವರು ಪಾಂಡುರಂಗನ ಪವಿತ್ರ ಜ್ಯೋತಿ ಬೆಳಗಿಸುವರು. ಕಾರ್ಯಕ್ರಮದ ಹಿನ್ನೆಲೆಯಲ್ಲಿಪ್ರಸಾದ ವ್ಯವಸ್ಥೆ ಇರುತ್ತದೆ. ಸಾಯಂಕಾಲ ಪ್ರವಚನ ವಿಠ್ಠಲ ರುಕ್ಮಿಣಿ ಬಗ್ಗೆ ಕೀರ್ತನೆ ನಡೆಯಲಿದೆ’’ ಎಂದು ತಿಳಿಸಿದರು.
ಮಹಿಳೆಯರೆಲ್ಲರೂ ದಿಂಡಿ ಉತ್ಸವದಲ್ಲಿಭಾಗಿಯಾಗಲಿದ್ದಾರೆ. ಸಾರ್ವಜನಿಕರು ಯಾಲಕ್ಕಿ ಶೆಟ್ಟರ ಕಾಲೊನಿಯಲ್ಲಿನ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಬಂದು ದೇವರ ದರ್ಶನ ಪಡೆಯಬಹುದು ಎಂದು ತಿಳಿಸಿದರು. ಕೋಮಲ ವಿಜಯ ಭಿಸೆ, ನಮ್ರತಾ ಕುಮಾರ್ , ಮಾರುತಿ ಭಿಸೆ ಇದ್ದರು.

