ವಿಕ ಸುದ್ದಿಲೋಕ ಚಾಮರಾಜನಗರ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಜಿಲ್ಲಾಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಏಕತಾ ಓಟ ಗಮನ ಸೆಳೆಯಿತು.
ನಗರದ ಸರಕಾರಿ ಪೇಟೆ ಪ್ರೈಮರಿ ಶಾಲಾವಣದಲ್ಲಿಶುಕ್ರವಾರ ಚಾಲನೆಗೊಂಡ ಏಕತಾ ಓಟವು , ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗಕ್ಕೆ ತೆರಳಿ ಮುಕ್ತಾಯವಾಯಿತು.
ಏಕತಾ ಓಟಕ್ಕೆ ಚಾಲನೆ ನೀಡಿದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ‘‘ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆ ಬಲಪಡಿಸುವ ಸಲುವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಿದ್ದೇವೆ,’’ ಎಂದರು.
‘‘ಸ್ವಾತಂತ್ರ್ಯ ನಂತರ ಭಾರತ ವನ್ನು ಒಗ್ಗೂಡಿಸಿದ ಶ್ರೇಯಸ್ಸು ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಸಲ್ಲುತ್ತದೆ. ಅವರು ಭಾರತ ದೇಶ ಒಂದು ಏಕತಾ ದೇಶವಾಗಿರಲು ಕಾರಣಕರ್ತರಾದರು,’’ ಎಂದು ಬಣ್ಣಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿಭಾಗವಹಿಸಿದ್ದ ಪ್ರತಿಯೊಬ್ಬರೂ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು.
ಏಕತಾ ಓಟದಲ್ಲಿಡಿವೈಎಸ್ಪಿ ಸ್ನೇಹಾರಾಜ್ , ಡಿಆರ್ ಡಿವೈಎಸ್ಪಿ ಸೋಮಣ್ಣ, ಸೆನ್ ಡಿವೈಎಸ್ಪಿ ಪವನ್ ಕುಮಾರ್ , ಇನ್ಸ್ ಪೆಕ್ಟರ್ ಗಳಾದ ಜಗದೀಶ್ , ನವೀನ್ , ಸಾಗರ್ , ಶೇಷಾದ್ರಿ, ಜೆಎಸ್ ಎಸ್ ಕಾಲೇಜಿನ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
==
ಫೋಟೋ ಉತ್ತುವಳ್ಳಿ ಮಹೇಶ್

