ತಿರುವನಂತಪುರಂ: ಶಬರಿಮಲೆ ಚಿನ್ನದ ಲೂಟಿ ಪ್ರಕರಣದ ಮೂರನೇ ಆರೋಪಿ, ತಿರುವಿದಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಕಾರ ್ಯನಿರ್ವಾಹಕ ಅಧಿಕಾರಿ ಡಿ.ಸುಧೀಶ್ ಕುಮಾರ್ ಅವರನ್ನು ಎಸ್ ಐಟಿ ವಿಚಾರಣೆ ನಡೆಸುತ್ತಿದೆ.
ತಿರುವನಂತಪುರದ ಇಂಜಕ್ಕಲ್ ಕ್ರೈಂ ಬ್ರ್ಯಾಂಚ್ ಪ್ರಧಾನ ಕಚೇರಿಯಲ್ಲಿಶುಕ್ರವಾರ ಸಂಜೆ 4ಕ್ಕೆ ಆರಂಭವಾದ ವಿಚಾರಣೆ ರಾತ್ರಿ ತನಕ ಮುಂದುವರಿದಿದೆ.
2019ರಲ್ಲಿಟಿಡಿಬಿ ಕಾರ ್ಯನಿರ್ವಾಹಕ ಅಧಿಕಾರಿಯಾಗಿದ್ದ ಈತ ಶಬರಿಮಲೆ ದೇಗುಲದ ದ್ವಾರಪಾಲಕ ಶಿಲ್ಪದಲ್ಲಿದ್ದ ಚಿನ್ನದ ಪದರವನ್ನು ದಾಖಲೆಗಳಲ್ಲಿ‘ತಾಮ್ರದ ಪದರ’ ಎಂದು ಬರೆದಿದ್ದ. ಟಿಡಿಬಿ ಆಯುಕ್ತರಿಗೆ ಬರೆದ ಪತ್ರದಲ್ಲೂಚಿನ್ನದ ಪದರವನ್ನು ‘ತಾಮ್ರದ ಪದರ’ ಎಂದೇ ಉಲ್ಲೇಖಿಸಿದ್ದ. ಯುಬಿ ಗ್ರೂಪ್ ದೇಗುಲಕ್ಕೆ ಚಿನ್ನ ಹೊದಿಸಿರುವುದು ತಿಳಿದಿದ್ದರೂ, ದಾಖಲೆಗಳಲ್ಲಿಉದ್ದೇಶ ಪೂರ್ವಕವಾಗಿ ತಾಮ್ರ ಎಂದು ತಪ್ಪಾಗಿ ನಮೂದಿಸಿ ಚಿನ್ನ ಕಳವಿಗೆ ದಾರಿ ಮಾಡಿಕೊಟ್ಟಿದ್ದ ಎಂದು ಎಸ್ ಐಟಿ ಶಂಕಿಸಿದೆ.
ಚಿನ್ನ ಹಸ್ತಾಂತರದ ಮಹಜರು ವೇಳೆ ತಿರುವಾಭರಣ ಆಯುಕ್ತರು, ಶಬರಿಮಲೆ ಕಾರ ್ಯನಿರ್ವಾಹಕ ಎಂಜಿನಿಯರ್ ಮತ್ತು ದೇವಸ್ವಂ ಚಿನಿವಾರರು ಸ್ಥಳದಲ್ಲಿರದಿದ್ದರೂ ದಾಖಲೆಯಲ್ಲಿಅವರ ಹೆಸರುಗಳನ್ನು ನಮೂದಿಸಿದ್ದ. ದ್ವಾರಪಾಲಕ ಶಿಲ್ಪಗಳ ಚಿನ್ನ ಕಳವು ಪ್ರಕರಣದಲ್ಲಿಈತನ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ. ಪ್ರಕರಣದ ಒಂದನೇ ಆರೋಪಿ ಪೋಟ್ಟಿಯನ್ನು ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಧಿಹಧಿತ್ವಧಿದ ದಾಖಲೆಗಳು ಎಸ್ ಐಟಿ ವಶಕ್ಕೆ: ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿವಿಶೇಷ ತನಿಖಾ ತಂಡ (ಎಸ್ ಐಟಿ) ದೇವಸ್ವಂ ಮಂಡಳಿಯ ಪ್ರಧಾನ ಕಚೇರಿಯಿಂದ ಚಿನ್ನ ಲೇಪನಕ್ಕೆ ಸಂಬಂಧಿಸಿದ ಮಧಿಹಧಿತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
1998-99ರ ಅವಧಿಯಲ್ಲಿವಿಜಯ್ ಮಲ್ಯ ಶಬರಿಮಲೆ ದೇಗುಲದ ಚಿನ್ನ ಲೇಪನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸುವಂತೆ ಎಸ್ ಐಟಿ ಪದೇಪದೆ ವಿನಂತಿಸಿದರೂ ದಾಖಲೆಗಳನ್ನು ಹಸ್ತಾಂತರಿಸಲು ಅಧಿಕಾರಿಗಳು ಸಿದ್ಧರಿರಲಿಲ್ಲ. ದಾಖಲೆಗಳನ್ನು ಒದಗಿಸದ ದೇವಸ್ವಂ ಮಂಡಳಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಇದರೊಂದಿಗೆ ತನಿಖಾ ತಂಡವು ನೇರವಾಗಿ ಪರಿಶೀಲನೆ ನಡೆಸಲು ಮುಂದಾಗಿದೆ. ದೇವಸ್ವಂ ಅಧಿಕಾರಿಗಳನ್ನು ಸಾಕ್ಷಿಗಳಾಗಿಸಿ ದಾಖಲೆ ಕೊಠಡಿಗಳಲ್ಲಿನಡೆಸಿದ ಶೋಧದಲ್ಲಿಮುಖ್ಯ ಎಂಜಿನಿಯರ್ ಕಚೇರಿಯಿಂದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
1999ರಲ್ಲಿದೇಗುಲಕ್ಕೆ ಲೇಪಿಸಿದ ಚಿನ್ನದ ಪ್ರಮಾಣ ಹಾಗೂ ಪ್ರಸ್ತುತ ಎಷ್ಟು ಚಿನ್ನ ಕಾಣೆಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ದಾಖಲೆಗಳು ನಿರ್ಣಾಯಕವಾಗಿವೆ. ದೇವಸ್ವಂ ಲೋಕೋಪಯೋಗಿ ವಿಭಾಗದ ಉಸ್ತುವಾರಿಯಲ್ಲಿದೇಗುಲಕ್ಕೆ ಚಿನ್ನ ಲೇಪಿಸಲಾಗಿದ್ದು, ದ್ವಾರಪಾಲಕ ಶಿಲ್ಪದ ಪದರಗಳ ಮೇಲಿನ ಚಿನ್ನ ಲೇಪನದ ಕೆಲವೊಂದು ದಾಖಲೆಗಳನ್ನು ದೇವಸ್ವಂ ವಿಜಿಲೆನ್ಸ್ ಈ ಮೊದಲೇ ಎಸ್ ಐಟಿಗೆ ಹಸ್ತಾಂತರಿಸಿದೆ.

