ವಿಕ ಸುದ್ದಿಲೋಕ ಮಳವಳ್ಳಿ
ಮಾಮರ ಸೌಹಾರ್ದ ಸಹಕಾರಿ ಸಂಘವು ಸಹಕಾರ ತತ್ತ$್ವದ ಅಶಯ ಅಳವಡಿಸಿಕೊಂಡು ಜನಸಾಮಾನ್ಯರ ಅರ್ಥಿಕ ಪ್ರಗತಿಗೆ ಸೇವೆ ನೀಡುವ ಮೂಲಕ ಹೆಮ್ಮರವಾಗಿ ಬೆಳೆಯಲಿ ಎಂದು ಸುತ್ತೂರು ವೀರಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾಳಮ್ಮ ದೇವಸ್ಥಾನದ ರಸ್ತೆಯಲ್ಲಿರುವ ಖುಬಾ ಕಟ್ಟಡದಲ್ಲಿಅಯೋಜಿಸಿದ್ದ ಮಾಮರ ಸೌಹಾರ್ದ ಸಹಕಾರಿ ಸಂಘದ ಕಚೇರಿಗೆ ಚಾಲನೆ ನೀಡಿ ಮಾತನಾಡಿ, ಜನಸಾಮಾನ್ಯರ ಅರ್ಥಿಕ ಪ್ರಗತಿಗೆ ಸಹಕಾರ ಸಂಘಗಳ ಪಾತ್ರ ಅಪಾರ ಎಂದರು.
ಇದೇ ಸಂದರ್ಭದಲ್ಲಿಖುಬಾ ಮಳಿಗೆಗೆ ಪ್ರಥಮವಾಗಿ ಅಗಮಿಸಿದ ಶ್ರೀಗಳನ್ನು ಅಂಗಡಿ ಮಾಲೀಕರು ಗೌರವಿಸಿದರು. ಕುಂದೂರು ರಸಸಿದ್ದೇಶ್ವರ ಮಠದ ಶ್ರೀ ನಂಜುಂಡ ಸ್ವಾಮೀಜಿ, ರಾಗಿಬೊಮ್ಮನಹಳ್ಳಿ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಡಿ.ಹಲಸಹಳ್ಳಿ ಗವಿಮಠದ ಶ್ರೀ ಷಡಕ್ಷರಿ ಸ್ವಾಮೀಜಿ, ನಾಡಗೌಡರ ಕುಟುಂಬದ ರತ್ನಮ್ಮ ಜಿ.ಮಹದೇವಪ್ಪ, ಸಹಕಾರ ಸಂಘದ ಅಧ್ಯಕ್ಷ ಎಂ.ಶಿವಕುಮಾರ್ , ಉಪಾಧ್ಯಕ್ಷ ಗುರುಮೂರ್ತಿ, ವಕೀಲ ಎಂ.ಎಸ್ . ಶ್ರೀಕಂಠಸ್ವಾಮಿ, ನಿರ್ದೇಶಕರು, ಸಿಬ್ಬಂದಿ, ಸದಸ್ಯರು, ಸಮುದಾಯದ ಮುಖಂಡರು ಇದ್ದರು.
ಚಿತ್ರ-31-2
ಮಾಮರ ಸೌಹಾರ್ದ ಸಹಕಾರಿ ಸಂಘದ ಕಚೇರಿಗೆ ಆಗಮಿಸಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಗೌರವಿಸಲಾಯಿತು.

