ಬಿಜೆಪಿಯಿಂದ ಡಿಸಿಎಂ ಆಮಿಷ ಬಂದಿತ್ತು

Contributed bymary.joseph@timesgroup.com|Vijaya Karnataka
Subscribe

ಬಿಜೆಪಿಯ ಹಿರಿಯ ನಾಯಕರೊಬ್ಬರು ಡಿಸಿಎಂ ಸ್ಥಾನದ ಆಮಿಷವೊಡ್ಡಿದ್ದರು. ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದರು. ಪಕ್ಷ ನಿಷ್ಠೆಯಿಂದ ಜೈಲನ್ನೇ ಆಯ್ಕೆ ಮಾಡಿಕೊಂಡೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ರಾಜಕೀಯ ಚಿತ್ರಣ ಬೇರೆಯಾಗುತ್ತಿತ್ತು ಎಂದರು.

cm amish resigns from bjp

ವಿಕ ಸುದ್ದಿಲೋಕ ಬೆಂಗಳೂರು ‘‘ಬಿಜೆಪಿಯ ಹಿರಿಯ ನಾಯಕರೊಬ್ಬರು ನನಗೆ ಉಪಮುಖ್ಯಮಂತ್ರಿ ಸ್ಥಾನದ ಆಮಿಷವೊಡ್ಡಿದ್ದರು. ಹಾಗೆಯೇ, ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದರು. ನಾನು ಪಕ್ಷ ನಿಷ್ಠ. ಹಾಗಾಗಿ, ಜೈಲನ್ನೇ ಆಯ್ಕೆ ಮಾಡಿಕೊಂಡೆ,’’ ಎಂದು ಉಪ ಮುಖ್ಯಮಂತ್ರಿ

ಡಿ.ಕೆ.ಶಿವಕುಮಾರ್ ತಿಳಿಸಿದರು. ನಗರದ ಎಫ್ ಕೆಸಿಸಿಐ ಸಭಾಂಗಣದಲ್ಲಿಬುಧವಾರ ನಡೆದ ಲೇಖಕ ಕೆ.ಎಂ.ರಘು ವಿರಚಿತ ‘ಎ ಸಿಂಬಲ್ ಆಫ್ ಲಾಯಲ್ಟಿ ಡಿ.ಕೆ.ಶಿವಕುಮಾರ್ ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ‘‘ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿರಾಜೀನಾಮೆ ನೀಡಿದ್ದ ಕಾಂಗ್ರೆಸ್ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿದಾಗ ಬಿಜೆಪಿಯ ಹಿರಿಯ ನಾಯಕರೊಬ್ಬರು ಆದಾಯ ತೆರಿಗೆ ಲೆಕ್ಕಪರಿಶೋಧಕರ ಮೂಲಕ ಡಿಸಿಎಂ ಸ್ಥಾನದ ಆಮಿಷ ಒಡ್ದಿದ್ದರು. ಒಪ್ಪದಿದ್ದರೆ, ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದರು. ಹಾಗೇನಾದರೂ ಡಿಸಿಎಂ ಸ್ಥಾನಕ್ಕೆ ಒಪ್ಪಿ ಹೋಗಿದ್ದರೆ, ಈಗ ರಾಜಕೀಯ ಚಿತ್ರಣವೇ ಬೇರೆ ಇರುತ್ತಿತ್ತು,’’ ಎಂದರು. ‘‘ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರ ಕುಟುಂಬದ ವಿರುದ್ಧ 30 ವರ್ಷಗಳ ರಾಜಕೀಯ ಮಾಡಿದ್ದೇನೆ. ಸಾಕಷ್ಟು ಆರೋಪ ಮಾಡಿದ್ದಲ್ಲದೆ, ಪ್ರಕರಣವನ್ನೂ ದಾಖಲಿಸಿದ್ದಾರೆ. ಆದರೂ, 2018ರಲ್ಲಿನನ್ನ ಮನಸ್ಸಿಗೆ ಒಪ್ಪಿಗೆ ಇತ್ತೋ ಇಲ್ಲವೋ ಪಕ್ಷದ ನಿಷ್ಠೆ ಮತ್ತು ನನ್ನ ನಾಯಕರ ಸೂಚನೆ ಮೇರೆಗೆ ಎಚ್ .ಡಿ. ಕುಮಾರಸ್ವಾಮಿ ಅವರ ಕೈ ಬಲಪಡಿಸಿ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚಿಸಲು ಶ್ರಮಿಸಿದೆ. ಕುಮಾರಸ್ವಾಮಿ ಕೈ ಹಿಡಿದು ಮೇಲೆತ್ತುವ ಸಂದರ್ಭವೂ ಬಂದಿತು. ಆದರೆ, ನಾನು ಜೈಲಿಗೆ ಹೋದಾಗ, ನಾವೇನು ದುಡ್ಡು ಹೊಡೆ ಎಂದು ಹೇಳಿದ್ದೆವಾ? ಎಂದು ಅವರೇ ಅಣಕಿಸಿದರು,’’ ಎಂದು ಸ್ಮರಿಸಿದರು.‘‘ಪ್ರತಿಯೊಬ್ಬರೂ ಯಾವಾಗಲೂ ಗೆಲುವು ಸಾಧಿಸಲಾಗದು. ಹೀಗಾಗಿ, ನಾನು ಸೋಲು ಮತ್ತು ನನ್ನ ವಿರುದ್ಧದ ಟೀಕೆಯನ್ನು ಸಮನಾಗಿ ಸ್ವೀಕರಿಸುತ್ತೇನೆ. ಹಳ್ಳಿಯಿಂದ ಬಂದ ನನ್ನನ್ನು ಇಷ್ಟು ದೊಡ್ಡ ನಾಯಕನನ್ನಾಗಿ ಮಾಡಿದ ನನ್ನ ಕ್ಷೇತ್ರದ ಮತ್ತು ರಾಜ್ಯದ ಜನರಿಗೆ ನಮಸ್ಕರಿಸುತ್ತೇನೆ. ಜೈಲಿನಲ್ಲಿದ್ದಾಗಲೂ ನನ್ನ ಜನರು ನನ್ನ ಕೈ ಬಿಡಲಿಲ್ಲ,’’ ಎಂದರು. ಆತ್ಮೀಯತೆ ಕುದುರಲ್ಲ: ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ‘‘ರಾಜಕಾರಣ, ರಾಜಕಾರಣಿ ಮತ್ತು ಸಾಹಿತಿಗಳಿಗೂ ಆಗಿ ಬರುವುದಿಲ್ಲ. ನಾವು ಹೃದಯಾತ್ಮಕಧಿವಾಗಿ ಸೇರಲ್ಲ. ರಾಜಕಾರಣಿಗಳು ಏನಾದ್ರೂ ಹೇಳಿದ್ರೆ, ಹೌದ್ರಿ ಹೌದ್ರಿ ಎಂದು ಸುಮ್ಮನಾಗುತ್ತೇವೆ. ಅವರೊಂದಿಗೆ ಅಂತರ ಇಟ್ಟುಧಿಕೊಂಡೇ ಮಾತನಾಡುತ್ತೇವೆ. ನಮಗೂ ರಾಜಕಾರಣಿಧಿಗಳಿಗೂ ಆತ್ಮೀಯತೆ ಕುದುರಲ್ಲ,’’ ಎಂದರು. ‘‘ಡಿ.ಕೆ.ಶಿವಕುಮಾರ್ ಅವರು ಸಾಹಿತಿಗಳ ಜತೆಗೂ ಆನಂದವಾಗಿ ಮಾತನಾಡುತ್ತಾರೆ. ನಾನು ರಾಜಕಾರಣಿಗಳ ಜತೆ ಬೆರೆಯುವುದಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ಅವರ ಜತೆಗೆ ಬೆರೆಯಲು ಇಷ್ಟವಾಗುತ್ತದೆ. ಲೇಖಕ ರಘು ಕೃತಿಯನ್ನು ಬಹಳ ಭಿನ್ನವಾಗಿ ಹೊರತಂದಿದ್ದಾರೆ,’’ ಎಂದು ಮೆಚ್ಚುಗೆ ಸೂಚಿಸಿದರು. ಮಾಜಿ ಸಂಸದ ವಿ.ಎಸ್ .ಉಗ್ರಪ್ಪ, ಸಾಹಿತಿಗಳಾದ ನಲ್ಲೂರು ಪ್ರಸಾದ್ , ಕೆ.ಷರೀಫಾ, ಕರೀಗೌಡ ಬೀಚನಹಳ್ಳಿ, ಪ್ರೊ.ಭಕ್ತರಹಳ್ಳಿ ಕಾಮರಾಜ್ , ಕೆಪಿಸಿಸಿ ಸದಸ್ಯ ವಿ.ಯೋಗೇಶ್ , ವೆಂಕಟಶಿವಾರೆಡ್ಡಿ, ಲೇಖಕ ಕೆ.ಎಂ.ರಘು ಇದ್ದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ