ಹೂವಿನ ಬೆಲೆ ಕುಸಿತ, ಬೆಳೆಗಾರರು ಕಂಗಾಲು

Contributed byadarshkodi15@gmail.com|Vijaya Karnataka
Subscribe

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಹೂವಿನ ಬೆಲೆ ಕುಸಿತದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಗಣೇಶ ಹಬ್ಬಕ್ಕೆ ಬೆಳೆದಿದ್ದ ಹೂವುಗಳಿಗೆ ಈಗ ದೀಪಾವಳಿಯವರೆಗೂ ಬೇಡಿಕೆ ಇಲ್ಲವಾಗಿದೆ. ಮಾರುಕಟ್ಟೆಯಲ್ಲಿ ಕೆಜಿಗೆ 40-50 ರೂಪಾಯಿ ಮಾತ್ರ ಸಿಗುತ್ತಿದ್ದು, ಹೂವು ಬೆಳೆಯಲು ಮಾಡಿದ ಖರ್ಚು ಕೂಡ ವಾಪಸ್ ಬರುವುದು ಅನುಮಾನವಾಗಿದೆ. ಕೆಲವು ಕಡೆ ಹೂವುಗಳನ್ನು ಎಸೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

flower prices fall farmers distressed

ವಿಕ ಸುದ್ದಿಲೋಕ ಬೆಂಗಳೂರು ಗ್ರಾಮಾಂತರ ಹೂವು ಬೆಲೆ ಏಕಾಏಕಿ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿಬಹುತೇಕ ಹೂಗಳು ಪ್ರತಿ ಕೆಜಿ 40 ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದೆ. ಕನಿಷ್ಠ ಬೆಲೆ ಮಾತ್ರ ದೊರೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲೂಕಿನಲ್ಲಿಹೆಚ್ಚಿನ ಪ್ರಮಾಣದಲ್ಲಿಹೂವು ಬೆಳೆಯಲಾಗುತ್ತದೆ. ಈ ಬಾರಿ ಗಣೇಶ ಹಬ್ಬದ ವೇಳೆ ಹೆಚ್ಚಾಗಿ ಬೆಳೆಗಾರರು ಹೂವು ಬೆಳೆಯನ್ನು ಬೆಳೆಯಲು ಮುಂದಾಗಿದ್ದರು. ಇದರಿಂದ ಇದೀಗ ಉತ್ತಮ ಫಸಲು ಕೂಡ ಬರುತ್ತಿದೆ. ಆದರೆ, ಸದ್ಯ ದೀಪಾವಳಿವರೆಗೂ ಯಾವುದೇ ಹಬ್ಬದ ಇಲ್ಲದಿರುವುದರಿಂದ, ಬೇಡಿಕೆ ಕುಸಿತವಾಗಿದೆ. ಮಾರುಕಟ್ಟೆಯಲ್ಲಿಬಹುತೇಕ ಹೂಗಳು ಪ್ರತಿ ಕೆಜಿಗೆ 50 ರೂಪಾಯಿ ಒಳಗೆ ಮಾರಾಟವಾಗುತ್ತಿದೆ. ಇದಲ್ಲದೆ, ನೂರು ರೂಪಾಯಿಗೆ ಮೂರು ಮಾರು ಹೂವು ಮಾರಾಟ ಮಾಡುತ್ತಿದ್ದು, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿನ ಗುಣಮಟ್ಟದ ಹೂವು ದೊರೆಯುತ್ತಿದೆ. ಎಷ್ಟಿದೆ ಬೆಲೆ?: ದಸರಾ ಸಮಯದಲ್ಲಿಹೂವಿಗೆ ಉತ್ತಮ ಬೆಲೆ ಸಿಕ್ಕಿತ್ತು. ಆದರೆ, ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಲೆ ಕಡಿಮೆ ಇದ್ದರೂ ಸಹ, ಸಮಾಧಾನಪಡುವಂತಿತ್ತು. ಈಗ ರೈತರಿಗೆ ಪ್ರತಿ ಕೆಜಿ ಹೂವಿಗೆ 10ರಿಂದ 20ರೂಪಾಯಿ ಮಾತ್ರ ಸಿಗುತ್ತಿದೆ. ಇದರಿಂದ ಬೆಳೆ ಬೆಳೆಯಲು ವೆಚ್ಚ ಮಾಡಿದಷ್ಟು ಬಂಡಾವಳ ಕೂಡ ಕೈಸೇರುವುದು ಅನುಮಾನ ಎಂಬಂತಾಗಿದೆ. ಇದರ ಜತೆಗೆ ಹೂಗಳನ್ನು ತಂದು ಕಟ್ಟಿ ಮಾರುವವರಿಗೂ ಹೆಚ್ಚೇನು ಲಾಭ ಸಿಗುತ್ತಿಲ್ಲ. ಉತ್ತಮವಾದ ಹೂಗಳು ಪ್ರತಿ ಕೆಜಿಗೆ 40 ರೂ.ಗೆ ಮಾರಾಟವಾಗುತ್ತಿದೆ. ಇನ್ನೂ ದೀಪಾವಳಿ ವೇಳೆಗೂ ಈ ಬಾರಿ ಹೆಚ್ಚು ಬೆಲೆ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಕಸಕ್ಕೆ ಸೇರಿದ ಹೂವು: ಹೂವಿಗೆ ಉತ್ತಮ ಬೆಲೆ ಇಲ್ಲದಿರುವುದರಿಂದ ಹಾಗೂ ಬೇಡಿಕೆ ಕಡಿಮೆ ಇರುವ ಕಾರಣ, ಎಸೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದೊಡ್ಡಬಳ್ಳಾಪುರ ಎಪಿಎಂಸಿ ಸೇರಿದಂತೆ ನಾನಾ ಕಡೆಗಳಲ್ಲಿಹೂಗಳನ್ನು ಎಸೆದಿರುವುದು ಇದಕ್ಕೆ ನಿದರ್ಶನ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ