ಅಹವಾಲು ಸ್ವೀಕರಿಸಿದ ಎಆರ್ ಕೆ

Contributed bypuru.dpete1987@gmail.com|Vijaya Karnataka
Subscribe

ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಪ್ರವಾಸಿ ಮಂದಿರದಲ್ಲಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ವಿವಿಧ ಗ್ರಾಮಗಳ ಜನರು ಸಮುದಾಯ ಭವನ, ರಸ್ತೆ, ದೇವಸ್ಥಾನ, ಶಾಲಾ ಅಭಿವೃದ್ಧಿ, ಕೊಳವೆ ಬಾವಿ, ಉದ್ಯೋಗ, ನಿಗಮ ಸಾಲ ಸೇರಿದಂತೆ ನಾನಾ ಸೌಲಭ್ಯಗಳಿಗಾಗಿ 20ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದರು. ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.

ar krishnamurthy receives petitions to address community issues

ಅಹವಾಲು ಸ್ವೀಕರಿಸಿದ ಎಆರ್ ಕೆ

ವಿಕ ಸುದ್ದಿಲೋಕ ಸಂತೇಮರಹಳ್ಳಿ

ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಪ್ರವಾಸಿ ಮಂದಿರದಲ್ಲಿಶುಕ್ರವಾರ ಶಾಸಕ ಎ.ಆರ್ .ಕೃಷ್ಣಮೂರ್ತಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಸಂತೇಮರಹಳ್ಳಿ ಹೋಬಳಿ ಹಾಗೂ ಯಳಂದೂರು ತಾಲೂಕಿನ ವ್ಯಾಪ್ತಿಗೆ ಒಳಪಡುವ ಹೊಂಗನೂರು, ಬಾಗಳಿ, ಹೆಗ್ಗವಾಡಿ, ಕಸ್ತೂರು, ಜನ್ನೂರು, ಜನ್ನೂರು ಹೊಸೂರು, ಕೆಸ್ತೂರು, ಉಮ್ಮತ್ತೂರು, ಮಸಣಾಪುರ, ಚಾಟೀಪುರ, ಗೌಡಹಳ್ಳಿ, ಹೊನ್ನೂರು ಬಿಚ್ಚಹಳ್ಳಿ, ದುಗ್ಗಹಟ್ಟಿ, ಕಂದಹಳ್ಳಿ, ಮೆಲ್ಲಹಳ್ಳಿ ಸೇರಿದಂತೆ ನಾನಾ ಗ್ರಾಮಗಳಿಂದ ಸಾರ್ವಜನಿಕರು ಸಮುದಾಯ ಭವನ, ರಸ್ತೆ, ದೇವಸ್ಥಾನ, ಶಾಲಾ ಅಭಿವೃದ್ಧಿ, ಕೊಳವೆ ಬಾವಿ, ಉದ್ಯೋಗ ವಾಹನ, ನಿಗಮ ಸಾಲ ಸೇರಿದಂತೆ ನಾನಾ ಸೌಲಭ್ಯಗಳ ಸಂಬಂಧವಾಗಿ 20 ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದರು.

ಅಹವಾಲು ಸ್ವೀಕರಿಸಿ ಮಾತನಾಡಿ, ‘‘ಕ್ಷೇತ್ರದ ಜನತೆ ಈ ವಿಧಾನಸಭಾ ಚುನಾವಣೆಯಲ್ಲಿಅಧಿಕ ಮತಗಳನ್ನು ನೀಡಿ ಅಭೂತ ಪೂರ್ವ ಮತಗಳಿಂದ ಜಯಗಳಿಸಿದ್ದೀರಿ. ಇದರಿಂದ ನಾನು ಕ್ಷೇತ್ರದ ಶಾಸಕನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಕ್ಷೇತ್ರದ ಮತದಾರರ ಋುಣ ತೀರಿಸಲು ಪ್ರಮಾಣಿಕವಾಗಿ ಕೆಲಸ ಮಾಡುವ ನಿಟ್ಟಿನಲ್ಲಿಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು,’’ ಎಂದು ತಿಳಿಸಿದರು.

‘‘ಸಾರ್ವಜನಿಕರು ನೀಡಿರುವ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾವಣೆ ಮಾಡುವ ಮೂಲಕ ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ,’’ ಎಂದು ತಿಳಿಸಿದರು.

ರಾಜ್ಯ ಹಿಂದುಳಿದ ವರ್ಗದ ಕಾರ ್ಯದರ್ಶಿ ವಿನುತ್ , ಜಿಲ್ಲಾಗ್ಯಾರಂಟಿ ಅಧ್ಯಕ್ಷ ಎಚ್ .ವಿ.ಚಂದ್ರು, ಕೊಳ್ಳೇಗಾಲ ನಗರಸಭಾ ಅಧ್ಯಕ್ಷೆ ರೇಖಾ ರಮೇಶ್ , ಸದಸ್ಯರು, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಅಧ್ಯಕ್ಷ ಬಡಗಲಮೋಳೆ, ಯಳಂದೂರು ತಾಲೂಕು ಗ್ಯಾರಂಟಿ ಅಧ್ಯಕ್ಷ ಪ್ರಭುಪ್ರಸಾದ್ , ಜಿ.ಪಂ.ಮಾಜಿ ಉಪಾಧ್ಯಕ್ಷ ಯೋಗೀಶ್ , ತಾ.ಪಂ.ಮಾಜಿ ಸದಸ್ಯ ಸಿ.ಮಹದೇವ್ , ಮುಖಂಡರಾದ ಸಂತೇಮರಹಳ್ಳಿ ಪಶಿ, ಉಮ್ಮತ್ತೂರು ಶಿವಣ್ಣ, ಹೊನ್ನೂರು ರಾಘವೇಂದ್ರ, ದುಗ್ಗಹಟ್ಟಿ ಮಾದೇಶ್ , ಕಂದಹಳ್ಳಿ ಬಸವಣ್ಣ, ರವಿ, ಹೊನ್ನೂರು ರೂಪೇಶ್ , ಬಾಲರಾಜು, ಅಲ್ಕೆರೆ ಅಗ್ರಹಾರ ರೇವಣ್ಣ, ಕಂದಹಳ್ಳಿ ನಂಜುಂಡಸ್ವಾಮಿ ಇತರರು ಹಾಜರಿದ್ದರು.

ಸಿಎಚ್ ಎನ್ 31ಎಸ್ ಎಂಆರ್ 1

ಸಂತೇಮರಹಳ್ಳಿ ಪ್ರವಾಸಿ ಮಂದಿರದಲ್ಲಿಶುಕ್ರವಾರ ಶಾಸಕ ಎ.ಆರ್ .ಕೃಷ್ಣಮೂರ್ತಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ