ಗುಟ್ಕಾ ಹಾಕಿಕೊಂಡು ಬಂದವರಿಗೆ ಸನ್ಮಾನ!
ವಿಕ ಸುದ್ದಿಲೋಕ ಕೊಪ್ಪ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿತಂಬಾಕು ಸೇವಿಸಿ ಮಾಲಿನ್ಯ ಉಂಟು ಮಾಡುವವರಿಗೆ ಎಚ್ಚರಿಕೆಯಾಗಿ ಅಲ್ಲಲ್ಲಿವಿಭಿನ್ನವಾದ ನಾಮ ಫಲಕ ಬರೆಸಲಾಗಿದೆ.
ನಿತ್ಯದ ಪರಿಸ್ಥಿತಿಯಲ್ಲಿಸರಕಾರಿ ಸಾಮ್ಯದ ಆಸ್ಪತ್ರೆಯಲ್ಲಿಶುಚಿತ್ವ ಕಾಪಾಡಿಕೊಳ್ಳುವುದು ಸಾಮಾನ್ಯವಾದ ಕೆಲಸವಲ್ಲ. ಎಷ್ಟೇ ತಿಳಿವಳಿಕೆ ನೀಡಿದ್ದರೂ, ತಂಬಾಕು ಸೇವಿಸುವ ರೋಗಿಗಳು ಅಥವಾ ಅವರ ಸಂಬಂಧಿಕರು ಸಿಕ್ಕಸಿಕ್ಕ ಕಡೆ ಉಗಿದು ಗಲೀಜು ಮಾಡುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಸರಕಾರಿ ಸೊತ್ತು ನಮ್ಮ ಸೊತ್ತು ಎಂಬ ಸಾಮಾನ್ಯ ಪ್ರಜ್ಞೆಯ ಕೊರತೆ ಸಮಸ್ಯೆಗೆ ಮೂಲ ಕಾರಣವಾಗಿದೆ.
ಹಾಗಾಗಿ ‘‘ಇಲ್ಲಿಪಾನ್ ಮಸಾಲ, ಗುಟ್ಕಾ, ತಂಬಾಕು, ಕಡ್ಡಿಪುಡಿ, ಎಲೆ ಅಡಕೆ ಬಾಯಲ್ಲಿಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ಬಂದರೆ ಸನ್ಮಾನ ಮಾಡಲಾಗುವುದು’’ ಎಂದು ಬರೆಯಲಾಗಿದೆ. ಹಾಗೆಂದ ಮಾತ್ರಕ್ಕೆ ಅಂತಹವರು ಬೀಗಬೇಕಿಲ್ಲ. ಕೆಳಗೆ ‘‘100 ರೂ. ದಂಡ ವಿಧಿಸುವ ಎಚ್ಚರಿಕೆ’’ಯೂ ಇದೆ.
ಆಸ್ಪತ್ರೆ ಇತಿಹಾಸದಲ್ಲಿಪ್ರಪ್ರಥಮ ಬಾರಿಗೆ ಇಂತಹ ನಾಮ ಫಲಕ ಅಂಟಿಸಿದ್ದು, ಆಡಳಿತದ ನಿರ್ಧಾರಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಫೋಟೊ-30ಕೆಪಿಎಚ್ ಜೆಎಲ್ ಎನ್ ಡಿಆರ್ 2-
ಕೊಪ್ಪದ ಸಾರ್ವಜನಿಕ ಆಸ್ಪತ್ರೆಯಲ್ಲಿತಂಬಾಕು ಸೇವಿಸುವವರಿಗೆ ನೀಡಿರುವ ಎಚ್ಚರಿಕೆಯ ವಿಭಿನ್ನ ನಾಮಫಲಕ.

