ವಿಕ ಫೋಕಸ್ ( ಲೋಕಲ್ ಲೀಡ್ )
‘ಇಎಸ್ ಐ’ಗೆ ವೇತನ ಮಿತಿ ಬೇಡ
ಕನಿಷ್ಠ ವೇತನದ ನಿಯಮಕ್ಕೆ ಅಸಮಾಧಾನ | ಅಸಂಘಟಿತ ಕಾರ್ಮಿಕರಿಗೂ ಸೌಲಭ್ಯ ಒದಗಿಸಲು ಆಗ್ರಹ
ಆದರ್ಶ ಕೋಡಿ ಬೆಂಗಳೂರು ಗ್ರಾಮಾಂತರ
ada್ಟshkಟdಜಿ15ಃಜಞaಜ್ಝಿ.್ಚಟಞ
ಕಾರ್ಮಿಕರ ಆರೋಗ್ಯ ಸೇವೆಗೆ ಅನುಕೂಲವಾಗಲೆಂದು ಕಾರ್ಮಿಕರ ರಾಜ್ಯ ವಿಮಾ ನಿಗಮದ ವತಿಯಿಂದ ಒದಗಿಸುವ ಇಎಸ್ ಐ ಸೌಲಭ್ಯಕ್ಕೆ ವೇತನ ಮಿತಿ ಬೇಡವೆಂಬ ಕೂಗು ಹೆಚ್ಚಾಗಿದೆ.
ರಾಜ್ಯದಲ್ಲಿಸುಮಾರು 1 ಕೋಟಿಗೂ ಹೆಚ್ಚು ಮಂದಿ ಇಎಸ್ ಐ ಸೌಲಭ್ಯವನ್ನು ಪಡೆಯುವ ಕಾರ್ಮಿಕರಿದ್ದಾರೆ. ಇಎಸ್ ಐನಡಿ ನಾನಾ ವಿಮಾ ಆಸ್ಪತ್ರೆಗಳಲ್ಲಿಕಾರ್ಮಿಕರಿಗೆ ಅಗತ್ಯವಾದ ಆರೋಗ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ಸರಕಾರ 21 ಸಾವಿರ ರೂಪಾಯಿಗೂ ಹೆಚ್ಚು ವೇತನ ಪಡೆಯುತ್ತಿರುವ ಕಾರ್ಮಿಕರಿಗೆ ಇಎಸ್ ಐ ಸೌಲಭ್ಯ ನೀಡುತ್ತಿಲ್ಲ. ಜತೆಗೆ ಅಸಂಘಟಿತ ವಲಯಕ್ಕೂ ಯಾವುದೇ ಆರೋಗ್ಯ ಸೌಲಭ್ಯಗಳಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಕಾರ್ಮಿಕ ಸಂಘಟನೆಗಳು ಸರಕಾರಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ನಾನಾ ಸಂಘಟನೆಗಳಿಂದ ಒತ್ತಡ:
ಕಾರ್ಮಿಕರು ಹಾಗೂ ಮಾಲೀಕರ ಹಣದ ಪಾಲಿನಲ್ಲಿಈ ಸೌಲಭ್ಯವನ್ನು ಒದಗಿಸಲಾಗುತ್ತದೆ. ಎಲ್ಲಾಕಾರ್ಮಿಕರಿಗೂ ಯಾವುದೇ ವೇತನ ಮಿತಿಯಿಲ್ಲದೇ ಈ ಸೌಲಭ್ಯ ನೀಡಬೇಕೆಂದು ಇದೀಗ ನಾನಾ ಕಾರ್ಮಿಕ ಒಕ್ಕೂಟಗಳು ಸರಕಾರಕ್ಕೆ ಆಗ್ರಹಿಸುತ್ತಿವೆ.
ಕಾರ್ಮಿಕರ ವೇತನ 21000 ದಾಟಿದರೆ, ಅವರಿಗೆ ಇಎಸ್ ಐ ಸೌಲಭ್ಯವನ್ನು ನೀಡುವುದಿಲ್ಲ. ಇತ್ತೀಚಿನ ಬೆಲೆ ಏರಿಕೆ ದಿನಗಳಲ್ಲಿಆರೋಗ್ಯ ಕ್ಷೇತ್ರ ಸಾಕಷ್ಟು ದುಬಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿದೊಡ್ಡ ಮಟ್ಟದ ಚಿಕಿತ್ಸೆಗಳ ಅಗತ್ಯತೆ ಬಂದರೆ, ಚಿಕಿತ್ಸೆಗೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಇದರಿಂದ ಯಾವುದೇ ವೇತನ ಮಿತಿ ಇಲ್ಲದಂತೆ ಇಎಸ್ ಐ ಸೌಲಭ್ಯವನ್ನು ಎಲ್ಲಾಕಾರ್ಮಿಕರಿಗೆ ಒದಗಿಸಬೇಕೆಂದು ಸಿಐಟಿಯು ಕೂಡ ತನ್ನ ಸಮ್ಮೇಳನಗಳಲ್ಲಿನಿರ್ಣಾಯ ಕೈಗೊಂಡು, ಅನುಷ್ಠಾನಕ್ಕೆ ಸರಕಾರವನ್ನು ಆಗ್ರಹಿಸಿದೆ.
ಇತರೆ ರಾಜ್ಯ ಮದರಿಯಾಗಲಿ:
ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿಬೀದಿ ಬದಿ ವ್ಯಾಪರಸ್ಥರು, ಆಟೊ ಚಾಲಕರು, ಅಂಗನವಾಡಿ ನೌಕರರು, ಕಟ್ಟಡ ಕಾರ್ಮಿಕರು, ನೇಕಾರರು, ವ್ಯಾಪಾರಸ್ಥರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿಗಳನ್ನು ಸ್ಥಾಪಿಸಿ, ಅವರಿಗೆ ನಾನಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಅದರಲ್ಲೂಪ್ರಮುಖವಾಗಿ ಇಎಸ್ ಐ ಮಾದರಿಯಲ್ಲಿಆರೋಗ್ಯ ಸೌಲಭ್ಯ ನೀಡಲಾಗುತ್ತಿದೆ. ಅದರಂತೆ ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಇಎಸ್ ಐ ಸೌಲಭ್ಯ ಒದಗಿಸಬೇಕಿದೆ. ಇದರಿಂದ ಅವರು ಆರೋಗ್ಯಕ್ಕಾಗಿ ಮಾಡುವ ವೆಚ್ಚ ಉಳಿಯುವ ಜತೆಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ಸಿಗಲಿದೆ ಎಂಬುದು ಸಿಐಟಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯದರ್ಶಿ ಪಿ.ಎ ವೆಂಕಟೇಶ್ ಅಭಿಪ್ರಾಯ.
ಏನೇನು ಬೇಡಿಕೆ?
* ಇಎಸ್ ಐ ಸೌಲಭ್ಯಕ್ಕಿರುವ ವೇತನ ಮಿತಿ ತೆಗೆಯಬೇಕು
* ಅಸಂಘಟಿತ ಕಾರ್ಮಿಕರಿಗೂ ಆರೋಗ್ಯ ಸೌಲಭ್ಯ ಒದಗಿಸಬೇಕು
* ಎಲ್ಲಾಕೈಗಾರಿಕಾ ಪ್ರದೇಶದಲ್ಲೂಮಲ್ಟಿ ಸ್ಪೆಷಲಿಸ್ಟ್ ಇಎಸ್ ಐ ಆಸ್ಪತ್ರೆ ಬೇಕು
* ಇಎಸ್ ಐ ಆಸ್ಪತ್ರೆಗಳಲ್ಲಿಸಮರ್ಪಕ ಚಿಕಿತ್ಸಾ ವ್ಯವಸ್ಥೆ ಮಾಡಬೇಕು
ಬಾಕ್ಸ್ ...
ಇಎಸ್ ಐ ಅತ್ಯಗತ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೈಗಾರಿಕೆಗಳಲ್ಲಿಅನ್ಯ ಜಿಲ್ಲೆ, ರಾಜ್ಯಗಳ ಸಾವಿರಾರು ಕಾರ್ಮಿಕರು ಕೆಲಸದಲ್ಲಿತೊಡಗಿದ್ದಾರೆ. ಕಡಿಮೆ ವೇತನದಲ್ಲಿಇವರು ಜೀವನ ನಿಭಾಯಿಸುತ್ತಿದ್ದಾರೆ. ಆರೋಗ್ಯ ವಿಮೆಗಳ ಸೌಲಭ್ಯ ಪಡೆಯಲು ಹೆಚ್ಚು ಹಣ ಅಗತ್ಯ. ಜತೆಗೆ ಖಾಸಗಿ ಆಸ್ಪತ್ರೆಯಲ್ಲೂಚಿಕಿತ್ಸೆ ದುಬಾರಿ. ಇಂತಹ ಪರಿಸ್ಥಿತಿಯಲ್ಲಿಕಾರ್ಮಿಕರ ಅನುಕೂಲಕ್ಕಾಗಿ ಇಎಸ್ ಐ ಸೌಲಭ್ಯ ಒದಗಿಸಿದರೆ ಅನುಕೂಲ.
ಜಿಲ್ಲೆಯ ಕೈಗಾರಿಕಾ ವಿವರ
* ಬೃಹತ್ ಕೈಗಾರಿಕೆಗಳು: 800
* ಸಣ್ಣ ಪ್ರಮಾಣದ ಕೈಗಾರಿಕೆಗಳು: ಸುಮಾರು 37000
* ಕಾರ್ಮಿಕರು: 1.5ಲಕ್ಷಕ್ಕೂ ಹೆಚ್ಚು
* ಕೈಗಾರಿಕಾ ಪ್ರದೇಶ: 22
ಕೋಟ್ ,
ರಾಜ್ಯದ ಎಲ್ಲಾಕಾರ್ಮಿಕರಿಗೂ 21000 ರೂ. ವೇತನದ ಮಿತಿ ಇಲ್ಲದೇ ಇಎಸ್ ಐ ಸೌÇಭ್ಯ ಕಡ್ಡಾಯವಾಗಿ ನೀಡಬೇಕು. ಅಸಂಘಟಿತ ವಲಯಕ್ಕೂ ಆರೋಗ್ಯ ಸೌಲಭ್ಯ ಒದಗಿಸುವ ವ್ಯವಸ್ಥೆ ಆಗಬೇಕು.
ಡಾ.ಕೆ. ಪ್ರಕಾಶ್ | ರಾಜ್ಯ ಉಪಾಧ್ಯಕ್ಷ, ಸಿಐಟಿಯು
ಕೋಟ್ ,
ಎಲ್ಲವೂ ದುಬಾರಿಯಾಗಿರುವ ಈ ಸಮಯದಲ್ಲಿ25000ರಿಂದ 30000 ರೂ. ವೇತನ ಯಾವುದಕ್ಕೂ ಸಾಲುವುದಿಲ್ಲ. ಇಂತಹ ಸ್ಥಿತಿಯಲ್ಲಿಇಎಸ್ ಐ ಸೌಲಭ್ಯ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ.
- ಚಂದ್ರಶೇಖರ್ | ಕಾರ್ಮಿಕ, ವಿನಾಯಕನಗರ
ಫೋಟೋ:31ವಿಕೆ1: ಸಾಂದರ್ಭಿಕ ಚಿತ್ರ.
31ವಿಕೆ2: ದೊಡ್ಡಬಳ್ಳಾಪುರದಲ್ಲಿನಿರ್ಮಾಣವಾಗಿರುವ ಇಎಸ್ ಐ ಆಸ್ಪತ್ರೆ.

