ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ
ಜಗಳೂರು: ಮೆಕ್ಕೆಜೋಳ ಬೆಳೆಗೆ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಖರೀದಿ ಕೇಂದ್ರ ತೆರೆಯಬೇಕು ಎಂದು ರೈತ ಸಂಘದ ತಾಲೂಕಾಧ್ಯಕ್ಷ ಸಿ.ಎಂ. ಹೊಳೆ ಚಿರಂಜೀವಿ ಒತ್ತಾಯಿಸಿದರು.
ಪಟ್ಟಣದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಕೂಲಿ ಬೆಲೆ ದುಬಾರಿಯಾಗಿದೆ. ಆದರೆ ಬೆಳೆಗಳ ಬೆಲೆ ಕುಸಿದಿದೆ. ಇದರಿಂದ ರೈತರಿಗೆ ಸಾಲದ ಹೊರೆ ಹೆಚ್ಚಾಗುತ್ತಿದೆ. ತಕ್ಷಣವೇ ಸರಕಾರ ರೈತರಿಗೆ ಅನುಕೂಲವಾದ ಯೋಜನೆ ಜಾರಿಗೊಳಿಸಬೇಕು. ಉತ್ತಮ ಬೆಲೆ ನೀಡಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು ಮಾತನಾಡಿ, ಸರಕಾರ ಮತ್ತು ತಾಲೂಕು ಆಡಳಿತದಿಂದ ರೈತರಿಗೆ ಯಾವುದೇ ರೀತಿಯ ಸಹಕಾರ ಸಿಗುತ್ತಿಲ್ಲ. ರೈತರು ಬೆಳೆ ನಷ್ಟದಲ್ಲಿದ್ದಾರೆ. ಈಗಾಗಲೇ ವಿಮಾ ಕಂಪನಿಯವರು ಮಾಡುತ್ತಿರುವ ಸರ್ವೆ ಕಾರ್ಯ ಲೋಪವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತವಾಗಲಿ ಒಮ್ಮೆ ಪರಿಶೀಲನೆ ಮಾಡಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲದೆ ಬೇಜವಾಬ್ದಾರಿ ತೋರಿದ್ದಾರೆ ಎಂದು ಆರೋಪಿಸಿದರು.
----

