ಕಿರಂಗೂರು ಕಾಲೇಜಿನಲ್ಲಿಜಾಗೃತಿ ಕಾರ ್ಯಕ್ರಮ
ವಿಕ ಸುದ್ದಿಲೋಕ ಶ್ರೀರಂಗಪಟ್ಟಣ
ಮಾದಕ ದ್ರವ್ಯ ಸೇವನೆಯಿಂದ ಎದುರಾಗುವ ಸಮಸ್ಯೆಗಳು ಮತ್ತು ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿ ಹಂತದಲ್ಲೇ ಜಾಗೃತಿ ಮೂಡಿಸಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮೋಹನ್ ಗೌಡ ಹೇಳಿದರು.
ತಾಲೂಕಿನ ಕಿರಂಗೂರು ಗ್ರಾಮದ ಕೇಂಬ್ರಿಡ್ಜ್ ಪಿ.ಯು ಕಾಲೇಜಿನಲ್ಲಿತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ’’ಮಾದಕ ವ್ಯಸನಗಳ ಬಗ್ಗೆ ಜಾಗೃತಿ,ಅರಿವು’’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘‘ಹದಿ ಹರೆಯದಲ್ಲಿಶೋಕಿ ಅಥವಾ ಖುಷಿಗಾಗಿ ಶುರುವಾಗುವ ಮಾದಕ ವ್ಯಸನ ದುಶ್ಚಟವಾಗಿ ಪರಿವರ್ತನೆಯಾಗಿ ಇಡೀ ಜೀವನದ ದಿಕ್ಕು ದಿಸೆಯನ್ನು ದುರಂತಮಯವಾಗಿಸುತ್ತದೆ. ಜತೆಗೆ ಮೆದುಳಿನ ದಕ್ಷತೆ ಕಡಿಮೆಯಾಗಿ ದೈನಂದಿನ ಕಾರ್ಯ ನಿರ್ವಹಣೆಗೆ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಬೇಕು. ದುಶ್ಚಟಗಳಿಂದ ದೂರ ಇರಬೇಕು,’’ ಎಂದು ಸಲಹೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯ ದಂತವೈದ್ಯೆ ಡಾ.ಸ್ಮಿತಾ ಜೆ.ಡಿ. ಮಾತನಾಡಿ,‘‘ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಮಾದಕ ವ್ಯಸನಿಗಳಾಗುತ್ತಿರುವುದು ವಿಷಾದನೀಯ. ಇದರ ದುಷ್ಪರಿಣಾಮಗಳ ಬಗ್ಗೆ ಅರ್ಥ ಮಾಡಿಕೊಂಡು ಎಚ್ಚರಿಕೆಯಿಂದ ಬದುಕುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳಲ್ಲಿಅತಿ ಹೆಚ್ಚಿನ ಚೈತನ್ಯ, ಉತ್ಸಾಹ, ಹುಮ್ಮಸ್ಸು ಇರುತ್ತದೆ. ಹದಿ ವಯಸ್ಸಿನಲ್ಲಿಮನಸ್ಸು ವಿವಿಧ ರೀತಿಯ ಆಕರ್ಷಣೆಗೆ ಒಳಗಾಗುವುದು ಸಹಜವಾದರೂ ಒಳಿತು ಕೆಟ್ಟದ್ದು ಆಲೋಚನೆ ಮಾಡಿ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಂಡು ಒಳ್ಳೆಯ ಜೀವನ ನಡೆಸಬೇಕು,’’ ಎಂದು ಹೇಳಿದರು.
ಅಪರ ಸಿವಿಲ್ ನ್ಯಾಯಾಧೀಶ ಹನುಮಂತರಾಯಪ್ಪ ಬಿ.ಆರ್ ,ಆಡಳಿತ ವೈದ್ಯಾಧಿಕಾರಿ ಡಾ.ಉಷಾ ಎಂ.ಎಸ್ , ವಕೀಲರ ಸಂಘದ ಅಧ್ಯಕ್ಷ ಎನ್ ಮರಿಗೌಡ , ಕಾರ್ಯದರ್ಶಿ ದಿನೇಶ್ , ಪ್ರಾಂಶುಪಾಲರಾದ ಅನಿತಾ, ಉಪನ್ಯಾಸಕರಾದ ವೇದ, ರಾಧಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ .ಡಿ.ಬೆನ್ನೂರ್ , ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಸಮುದಾಯ ಆರೋಗ್ಯ ಅಧಿಕಾರಿ ಬಸವರಾಜ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ .ಪಿ.ಫಣೀಂದ್ರ, ಎಂ.ಎನ್ .ಕೃಷ್ಣೇಗೌಡ ಮತ್ತಿತರರು ಇದ್ದರು.
ಎಂಡಿವೈ31ಎಸ್ ಆರ್ ಪಿ2.
ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಕೇಂಬ್ರಿಡ್ಜ್ ಪಿ.ಯು ಕಾಲೇಜಿನಲ್ಲಿತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ’’ಮಾದಕ ವ್ಯಸನಗಳ ಬಗ್ಗೆ ಜಾಗೃತಿ,ಅರಿವು’’ ಕಾರ್ಯಕ್ರಮವನ್ನು ನ್ಯಾಯಾಧೀಶ ಮೋಹನ್ ಗೌಡ ಉದ್ಘಾಟಿಸಿದರು.

