ಖಾಸಗಿ ಶಾಲೆ ಸಮಸ್ಯೆಗೆ ಸರಕಾರ ಸ್ಪಂದಿಸಲಿ
ವಿಕ ಸುದ್ದಿಲೋಕ, ಸಿರುಗುಪ್ಪ
‘‘ಸಮಾಜದ ಅಭಿವೃದ್ಧಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬುನಾದಿಯಾಗಿದ್ದು ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು,’’ ಎಂದು ತಾಲೂಕು ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಡಾ.ಎಚ್ .ಗೋಪಾಲ್ ತಿಳಿಸಿದರು.
ನಗರದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿಮಾತನಾಡಿದರು. ‘‘ಖಾಸಗಿ ಶಾಲೆ ಶಿಕ್ಷಕರ ಬಗ್ಗೆ ಹಾಗೂ ಆಡಳಿತ ಮಂಡಳಿಯ ಸಮಸ್ಯೆಗಳ ಬಗ್ಗೆ ಸರಕಾರ ಗಮನಹರಿಸಬೇಕಾಗಿದೆ. ಮಕ್ಕಳನ್ನು ತಿದ್ದುವ ಉತ್ತಮ ಶಿಕ್ಷಕರು ದೇಶ ಕಟ್ಟುವಲ್ಲಿಪ್ರಮುಖ ಪಾತ್ರ ವಹಿಸುವರು. ಇಂದಿನ ವಿದ್ಯಾರ್ಥಿಗಳಿಗೆ ನಾಳಿನ ಉಜ್ವಲ ಭವಿಷ್ಯದ ದಾರಿದೀಪವಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು,’’ ಎಂದರು.
ಉಪನ್ಯಾಸಕ ಬಾಲಚಂದ್ರ ಎಂ. ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ, ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಗುರಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ, ಮುಖಂಡರಾದ ಎನ್ .ಕರಿಬಸಪ್ಪ, ಆರ್ .ಸಿ.ಪಂಪನಗೌಡ ಸೇರಿ ತಾಲೂಕಿನ ನಾನಾ ಖಾಸಗಿ ಶಾಲೆಗಳ ಅಧ್ಯಕ್ಷರು, ಮುಖ್ಯಗುರುಗಳು ಇದ್ದರು.
ಚಿತ್ರ:
ಬಿಎಲ್ ವೈ31ಎಸ್ ಜಿಪಿ1: ಸಿರುಗುಪ್ಪದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿತಾಲೂಕಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ತಾಲೂಕಾಧ್ಯಕ್ಷ ಡಾ.ಎಚ್ .ಗೋಪಾಲ್ ಮಾತನಾಡಿದರು.
ಧಿಧಿಧಿ-0

