ಅಂಗನವಾಡಿಗೆ ನಳ ಸಂಪರ್ಕ, ಪಪಂ ಸಭೆಯಲ್ಲಿಚರ್ಚೆ
ನೀರು ಉಚಿತ ಪೂರೈಕೆಗೆ ಆಕ್ಷೇಪ
ವಿಕ ಸುದ್ದಿಲೋಕ ಸಿದ್ದಾಪುರ
ಪಟ್ಟಣ ಪಂಚಾಯಿತಿ ಹಾಲಿ ಸದಸ್ಯರ ಅವಧಿ ನ.8ಕ್ಕೆ ಮುಕ್ತಾಯವಾಗುತ್ತಿದ್ದು ಈ ಅವಧಿಯ ಕೊನೆಯ ಸಾಮಾನ್ಯ ಸಭೆ ಶುಕ್ರವಾರ ಪಟ್ಟಣದ ಪಪಂ ಸಭಾಭವನದಲ್ಲಿಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿನಡೆಯಿತು.
ಪಪಂ ಅಧ್ಯಕ್ಷರ,ಸದಸ್ಯರ ಗಮನಕ್ಕೆ ತರದೆ ಅಂಗನವಾಡಿಗಳಿಗೆ ನಳದ ಸಂಪರ್ಕ ಕಲ್ಪಿಸುತ್ತಿರುವುದರ ಉದ್ದೇಶ ಏನು? ಸಿಬ್ಬಂದಿ ಮುಂದಿನ ಚುನಾವಣೆಗೆ ನಿಲ್ಲಲು ಹೊರಟಿದ್ದಾರೆಯೇ?ಅಂಗನವಾಡಿಗಳಿಗಾಗಲಿ ಅಥವಾ ಯಾರಿಗೆ ಆಗಲಿ ಉಚಿತವಾಗಿ ನೀರಿನ ಸಂಪರ್ಕ ಕಲ್ಪಿಸಲು ಪಪಂ ನಿಯಮದಲ್ಲಿಅವಕಾಶವಿದೆಯೇ? ಅಂಗನವಾಡಿಗೆ ಅವಶ್ಯಕತೆ ಇರುವ ಮೂಲಸೌಲಭ್ಯವನ್ನು ಪಪಂನಿಂದ ಮಾಡಿಸುತ್ತಾರೆ. ಹಾಗಾದರೆ ಆ ಇಲಾಖೆ ಇರುವುದು ಯಾಕೆ? ಎಂದು ಪಪಂ ಹಿರಿಯ ಸದಸ್ಯ ಕೆ.ಜಿ.ನಾಯ್ಕ ಪ್ರಶ್ನಿಸಿದರು. ‘‘ಸದಸ್ಯರ ಅವಧಿ ಮುಗಿಯುತ್ತಿದೆ. ಇನ್ನು ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಉಪೇಕ್ಷ ಭಾವನೆಯನ್ನು ನೌಕರರು ಹೊಂದಿದ್ದರೆ ನಿಮ್ಮ ತಲೆಯಿಂದ ಅದನ್ನು ತೆಗೆದು ಹಾಕಿ. ಯಾವ ರೀತಿಯಿಂದ ಕೆಲಸ ಮಾಡಿಸಬೇಕು. ಪಪಂ ಆಸ್ತಿಯನ್ನು ಹೇಗೆ ರಕ್ಷಿಸಬೇಕು ಎನ್ನುವುದು ನಮಗೆ ತಿಳಿದಿದೆ ಎಂದು ಕೆ.ಜಿ.ನಾಯ್ಕ Óಎಚ್ಚರಿಕೆ ನೀಡಿದರು.
‘‘ಬಹುತೇಕ ಅಂಗನವಾಡಿಯ ಸಮೀಪ ಸಾರ್ವಜನಿಕ ಬಾವಿಗಳಿರುತ್ತವೆ. ಬೆಳಗ್ಗೆ ಆರು ಗಂಟೆಗೆ ನಳದಲ್ಲಿನೀರು ಬಿಡುತ್ತಾರೆ. ಅಂಗನವಾಡಿಯವರು ಹತ್ತು ಗಂಟೆಯ ನಂತರ ಬರುತ್ತಾರೆ. ಅಲ್ಲಿಯವರೆಗೂ ನೀರು ಹರಿದು ಹೋಗುತ್ತಿರುತ್ತದೆ. ಹೀಗಿರುವಾಗ ಅಂಗನವಾಡಿಗಳಿಗೆ ಯಾಕೆ ಉಚಿತ ನೀರು ನೀಡಬೇಕು’’ ಎಂದು ಮಾರುತಿ ನಾಯ್ಕ ಹೊಸೂರು ಪ್ರಶ್ನಿಸಿದರು.
ನಂದನ ಬೋರ್ಕರ್ ಮಾತನಾಡಿ, ‘‘ಪೌರಕಾರ್ಮಿಕರಿಗೆ ಸರಿಯಾದ ಸಮಯದಲ್ಲಿಸಂಬಳವನ್ನು ನೀಡುತ್ತಿಲ್ಲ. ಇದರಿಂದ ಕಾರ್ಮಿಕರು ಜೀವನ ನಡೆಸುವುದು ದುಸ್ತರವಾಗಿದೆ’’ ಎಂದರು.
ಸಭೆಯಲ್ಲಿಉಪಾಧ್ಯಕ್ಷ ವಿನಯ ಹೊನ್ನೆಗುಂಡಿ,ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡ,ಸದಸ್ಯರಾದ ಗುರುರಾಜ ಶಾನಭಾಗ,ವೆಂಕೋಬಾ,ಸುಧೀರ್ ನಾಯ್ಕ, ರಾಧಿಕಾ ಕಾನಗೋಡು,ಮುನಾ ಬಿ,ಕವಿತಾ ಹೆಗಡೆ,ಯಶೊಧಾ ಮಡಿವಾಳ,ಮಂಜುಳಾ ನಾಯ್ಕ ನಾಮನಿರ್ದೇಶಿತ ಸದಸ್ಯ ಕೆ.ಟಿ.ಹೊನ್ನೆಗುಂಡಿ ನೂತ ಪಪಂ ಮುಖ್ಯಾಧಿಕಾರಿ ಮಹಮ್ಮದ ಯಾಕೂಬ್ ಶೇಕ್ ಉಪಸ್ಥಿತರಿದ್ದರು.
ಬಾಕ್ಸ್
ಜಾಹೀರಾತು ಫಲಕ ತೆರವುಗೊಳಿಸಿ
ನೆಹರೂ ಮೈದಾನದಲ್ಲಿ ಖಾಸಗಿ ಬಸ್ ಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಅಲ್ಲಿಕಸ ಹೆಚ್ಚುತ್ತಿದೆ. ಹಾಗೂ ಪುಟ್ಟಪ್ಪನಕೆರೆಯಲ್ಲಿಬಸ್ ತೊಳೆಯುತ್ತಿದ್ದಾರೆ. ಇದರಿಂದ ಕೆರೆಯ ನೀರು ಕಲುಷಿತವಾಗುತ್ತಿದೆ.
ಅನುಮತಿ ಇಲ್ಲದೆ ಜಾಹೀರಾತು ಫಲಕ ಅಳವಡಿಸಿದರೆ ಕ್ರಮತೆಗೆದುಕೊಳ್ಳಿ ಮತ್ತು ಕಾರ್ಯಕ್ರಮ ಮುಗಿದ ತಕ್ಷಣ ಅದನ್ನು ತೆರುವುಗೊಳಸಿ ಎಂದು ಸದಸ್ಯರು ಆಗ್ರಹಿಸಿದರು.
ಧಿಧಿ-
31ಎಸ್ ಡಿಪಿಆರ್ 1
ಸಿದ್ದಾಪುರ ಪಪಂ ಸಭಾಭವನದಲ್ಲಿಚಂದ್ರಕಲಾ ನಾಯ್ಕ ಅಧ್ಯಕ್ಷತೆಯಲ್ಲಿಸಾಮಾನ್ಯ ಸಭೆ ನಡೆಯಿತು.

