ಬೃಹತ್ ಉಡ ಪತ್ತೆ

Contributed bymaheshmadahalli.vk@gmail.com|Vijaya Karnataka
Subscribe

ಗುಂಡ್ಲುಪೇಟೆ ಬಳಿ ಹಿಮವದ್‌ ಗೋಪಾಲಸ್ವಾಮಿ ದೇವಾಲಯ ರಸ್ತೆಯಲ್ಲಿ ದೊಡ್ಡ ಗಾತ್ರದ ಉಡ ಪ್ರತ್ಯಕ್ಷವಾಗಿದೆ. ಬಸ್ ಪ್ರಯಾಣಿಕರು ಇದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಸಾಮಾನ್ಯವಾಗಿ ಕಾಣದ ಈ ಉಡ ರಸ್ತೆಯಲ್ಲಿ ಸುಮಾರು 10 ಮೀಟರ್ ದೂರ ಸಾಗಿ ಬಳಿಕ ಕಾಡಿಗೆ ಸೇರಿಕೊಂಡಿದೆ. ಈ ಅಪರೂಪದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಪ್ರವಾಸಿಗರಿಗೆ ವಿಶೇಷ ಅನುಭವ ನೀಡಿದೆ.

giant sloth spotted in gundlupet sparks awe and curiosity

ವಿಕ ಸುದ್ದಿಲೋಕ ಗುಂಡ್ಲುಪೇಟೆ ಪ್ರಸಿದ್ಧ ಪ್ರವಾಸಿ ತಾಣ ಮತ್ತು ಧಾರ್ಮಿಕ ಕೇಂದ್ರ ಹಿಮವದ್ ಗೋಪಾಲಸ್ವಾಮಿ ದೇವಾಲಯ ಸಂಪರ್ಕ ರಸ್ತೆಯಲ್ಲಿಶುಕ್ರವಾರ ಬೃಹತ್ ಗಾತ್ರದ ಉಡ ಕಾಣಿಸಿಕೊಂಡಿದೆ. ಸಾರಿಗೆ ಬಸ್ ನಲ್ಲಿದೇವಾಲಯಕ್ಕೆ ತೆರಳುತ್ತಿರುವ ಭಕ್ತರೊಬ್ಬರು ಗಮನಕ್ಕೆ ತಂದೆ ಹಿನ್ನೆಲೆಯಲ್ಲಿಚಾಲಕ ಬಸ್ ಅನ್ನು ನಿಧಾನಗತಿಯಲ್ಲಿಚಾಲನೆ ಮಾಡಿಕೊಂಡು ಹೋಗಿದ್ದಾರೆ. ರಸ್ತೆ ಎಡಭಾಗದಲ್ಲಿನಾಲಿಗೆ ಈಚೆ ಚಾಚುತ್ತಾ 10 ಮೀ ದೂರದವರೆಗೆ ಉಡ ಹೆಜ್ಜೆ ಇಡುತ್ತಾ ಸಾಗುತ್ತದೆ. ಬಸ್ ಹತ್ತಿರ ಹೋದಂತೆ ಉಡ ರಸ್ತೆ ಬದಿಗೆ ಸರಿದು ಕಾಡಿನೊಳಗೆ ಸೇರಿಕೊಂಡಿದೆ. ಹಿಮವದ್ ಗೋಪಾಲಸ್ವಾಮಿ ದೇವಾಲಯ ಮಾರ್ಗದಲ್ಲಿಕಾಡಾನೆಗಳು, ಚುಕ್ಕಿಜಿಂಕೆ, ನವಿಲು ಸಾಮಾನ್ಯವಾಗಿ ಕಂಡು ಬಂದರೆ. ಆಗಾಗ ಚಿರತೆ, ಹುಲಿ ಇತರೆ ವನ್ಯಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಆದರೆ ಶುಕ್ರವಾರ ಬೃಹತ್ ಗಾತ್ರದ ಉಡ ನೋಡಿ ಪ್ರಯಾಣಿಕರು ಅಚ್ಚರಿಗೊಂಡಿದ್ದಾರೆ. ಹಿಡಿತಕ್ಕೆ ಇನ್ನೊಂದೇ ಹೆಸರು ಎಂದು ಕರೆಯಲ್ಪಡುವ ಉಡ ಅಷ್ಟಾಗಿ ಕಾಣಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿಅಪರೂಪಕ್ಕೆ ಸಿಕ್ಕ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿಹರಿದಾಡುತ್ತಿದೆ.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ