Gold Bundle Google Ai Pro Free For Jio Users For 18 Months
ಜಿಯೊ ಬಳಕೆದಾರರಿಗೆ ಗೂಗಲ್ ಎಐ ಪ್ರೊ ಉಚಿತ
Contributed by: Venkat K|Vijaya Karnataka•
Subscribe
ಜಿಯೊ ಗ್ರಾಹಕರಿಗೆ ಗೂಗಲ್ ಎ.ಐ ಪೊ› 18 ತಿಂಗಳು ಉಚಿತವಾಗಿ ಲಭ್ಯವಾಗಲಿದೆ. ರಿಲಯನ್ಸ್ ಇಂಟೆಲಿಜೆನ್ಸ್ ಮತ್ತು ಗೂಗಲ್ ಪಾಲುದಾರಿಕೆಯಲ್ಲಿ ಈ ಕೊಡುಗೆ ನೀಡಲಾಗಿದೆ. ಜಿಯೊ 5ಜಿ ಅನ್‌ಲಿಮಿಟೆಡ್ ಯೋಜನೆ ಹೊಂದಿರುವವರಿಗೆ ಇದು ಸಿಗಲಿದೆ. ಆರಂಭದಲ್ಲಿ 18-25 ವರ್ಷದವರಿಗೆ, ನಂತರ ಎಲ್ಲರಿಗೂ ಈ ಸೌಲಭ್ಯ ವಿಸ್ತರಿಸಲಾಗುವುದು. ಇದು ಚಿತ್ರ, ವಿಡಿಯೋ ಸೃಷ್ಟಿಗೆ ಹೆಚ್ಚಿನ ಅವಕಾಶ ನೀಡುತ್ತದೆ.
ಬೆಂಗಳೂರು: ಜಿಯೊ 5ಜಿ ಅನ್‌ಲಿಮಿಟೆಡ್ ಯೋಜನೆ ಹೊಂದಿರುವ ಅರ್ಹ ಗ್ರಾಹಕರಿಗೆ ಗೂಗಲ್‌ನ ಎ.ಐ (Artificial Intelligence) ಪರಿಕರ ‘ಗೂಗಲ್ ಎ.ಐ ಪೊ›’ 18 ತಿಂಗಳುಗಳ ಕಾಲ ಉಚಿತವಾಗಿ ಸಿಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಘೋಷಿಸಿದೆ. ರಿಲಯನ್ಸ್ ಇಂಟೆಲಿಜೆನ್ಸ್ ಮತ್ತು ಗೂಗಲ್ ಪಾಲುದಾರಿಕೆಯ ಮೂಲಕ ಈ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಈ ಆಫರ್‌ನ ಹಣಕಾಸಿನ ಮೌಲ್ಯ 35,100 ರೂ. ಆಗಿದೆ.
ಮೊದಲು, 18 ರಿಂದ 25 ವರ್ಷ ವಯಸ್ಸಿನ ಯುವ ಗ್ರಾಹಕರಿಗೆ ಈ ಸೌಲಭ್ಯ ಲಭ್ಯವಾಗಲಿದೆ. ಬಳಿಕ, ಎಲ್ಲ ಜಿಯೊ ಗ್ರಾಹಕರಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಈ ಉಚಿತ ಪ್ಲ್ಯಾನ್‌ನೊಂದಿಗೆ, ಗೂಗಲ್ ಜೆಮಿನಿ 2.5 ಪೊ›, ಇತ್ತೀಚಿನ ನ್ಯಾನೋ ಬನಾನಾ ಮತ್ತು ವಿಯೋ 3.1 ಮಾದರಿಗಳನ್ನು ಬಳಸಿಕೊಂಡು ಚಿತ್ರಗಳು ಮತ್ತು ವಿಡಿಯೋಗಳನ್ನು ಸುಲಭವಾಗಿ ರಚಿಸಲು ಗ್ರಾಹಕರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ. ಎ.ಐ. ಎಂದರೆ ಕೃತಕ ಬುದ್ಧಿಮತ್ತೆ. ಇದು ಕಂಪ್ಯೂಟರ್‌ಗಳಿಗೆ ಮನುಷ್ಯರಂತೆ ಯೋಚಿಸುವ ಮತ್ತು ಕಲಿಯುವ ಸಾಮರ್ಥ್ಯವನ್ನು ನೀಡುತ್ತದೆ. ಈ ಮೂಲಕ, ನಾವು ಹೆಚ್ಚು ಸುಲಭವಾಗಿ ಮತ್ತು ವೇಗವಾಗಿ ಕೆಲಸಗಳನ್ನು ಮಾಡಬಹುದು.
Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿಲೇಟೆಸ್ಟ್ ನ್ಯೂಸ್ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್ ಲೈಕ್ ಮಾಡಿರಿ