ಶಿರಸಿ ಶಹರಕ್ಕೆ ಹೊಂದಿಕೊಂಡ ಗ್ರಾಪಂ ವ್ಯಾಪ್ತಿಯ ಪ್ರದೇಶಗಳು
ನಗರ ವ್ಯಾಪ್ತಿ ವಿಸ್ತರಣೆ ಮತ್ತೆ ಮುನ್ನೆಲೆ
ಹೊರವಲಯ ಪ್ರದೇಶ ಒಳಗೆ ತರಲು ಹೆಜ್ಜೆ
ಕೃಷ್ಣಮೂರ್ತಿ ಟಿ.ಕೆರೆಗದ್ದೆ ಶಿರಸಿ
ನಗರ ಭಾಗವನ್ನು ವಿಸ್ತರಿಸುವ ಉದ್ದೇಶದಿಂದ ಗ್ರಾಪಂಗೆ ಸೇರಿರುವ ನಗರದ ಹೊರವಲಯದಲ್ಲಿರುವ ಪ್ರದೇಶಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನ ಮತ್ತೆ ಮುನ್ನೆಲೆಗೆ ಬಂದಿದೆ.
ಕಳೆದ 2016ರಲ್ಲಿನಗರಕ್ಕೆ ಹೊಂದಿಕೊಂಡಿರುವ ಗ್ರಾಪಂ ಪ್ರದೇಶಗಳನ್ನು ನಗರಸಭೆ ವ್ಯಾಪ್ತಿಗೆ ತರಲು ಪ್ರಸ್ತಾವನೆ ಸಲ್ಲಿಕೆಗೆ ಪೂರಕ ಹೆಜ್ಜೆ ಇಡಲಾಗಿತ್ತು. ಗ್ರಾಪಂಗಳು ಈ ಬಗ್ಗೆ ಒಪ್ಪಿ ಠರಾವು ಸಹ ಅಂಗೀಕರಿಸಿಕೊಟ್ಟಿದ್ದರು. ಆದರೆ ಅದು ಪ್ರಭಾವಿಯಾಗಿ ಮುಂದುವರಿಯದೇ ನನೆಗುದಿಗೆ ಬಿದ್ದಿತ್ತು. ಈಗ ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆಯಲ್ಲಿಕಳೆದ ತಿಂಗಳು ಈ ಬಗ್ಗೆ ಸಭೆ ನಡೆಸಿ ಮತ್ತೆ ಸರಕಾರದ ಮಟ್ಟದಲ್ಲಿಈ ಕೂಗು ಮುಟ್ಟಿಸುವುದಕ್ಕೆ
ನಿರ್ಧರಿಸಲಾಗಿತ್ತು. ಅದರ ಒಂದೊಂದೇ ಪ್ರಕ್ರಿಯೆಗಳು ಈಗ ಆರಂಭಗೊಂಡಿವೆ. ಗ್ರಾಪಂಗಳು ಪುನಃ ಠರಾಯಿಸಿಕೊಟ್ಟಿವೆ.
ಜಿಲ್ಲೆಯ ಪ್ರಮುಖ ನಗರವಾದ ಶಿರಸಿಯು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೀಗಾಗಿ ನಗರ ಹೊರವಲಯ ಪ್ರದೇಶಗಳಲ್ಲಿಮನೆಗಳು ನಿರ್ಮಾಣವಾಗುತ್ತಿವೆ. ಇಂತಹ ಪ್ರದೇಶಗಳು ನಾಲ್ಕೈದು ಗ್ರಾಪಂಗೆ ಸೇರಿವೆ. ಈ ಪ್ರದೇಶಗಳು ಬೆಳೆಯುತ್ತಿರುವುದರಿಂದ ಗ್ರಾಪಂಗಳಿಗೆ ಆದಾಯ ಹೆಚ್ಚಾಗುತ್ತಿದೆ. ಆದರೆ ಮೂಲಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಗರ ವ್ಯಾಪ್ತಿಗೆ ಸೇರಿಸಬೇಕು ಎಂದು ಒಂದಿಷ್ಟು ಕೂಗು ಎದ್ದಿತ್ತು. ಆದರೆ ಈ ಕೆಲಸ ಪರಿಣಾಮಕಾರಿಯಾಗಿ ಆಗಲೇ ಇಲ್ಲ. ಈಗ ಈ ಬೇಡಿಕೆ ಮತ್ತೊಮ್ಮೆ ಸರಕಾರದ ಮುಂದಿಡಲು ಶಾಸಕರು, ನಗರಸಭೆ ಮುಂದಾಗಿದೆ.
ಬಾಕ್ಸ್
ಗ್ರೇಡ್ -1 ನಗರಸಭೆ ಗುರಿ
ನಗರದ ಜನಸಂಖ್ಯೆಯ ಆಧಾರದಲ್ಲಿಅದರ ಗ್ರೇಡ್ ನಿರ್ಧಾರವಾಗುತ್ತದೆ. ಶಿರಸಿ ನಗರಸಭೆ 62 ಸಾವಿರ ಜನಸಂಖ್ಯೆ ಹೊಂದಿದ್ದು ಗ್ರೇಡ್ -2ಮಾನ್ಯತೆ ಹೊಂದಿದೆ. ಆದರೆ ನಗರದ ಹೊರವಲಯದ ಪ್ರದೇಶಗಳು ಪಟ್ಟಣಕ್ಕೆ ಸೇರ್ಪಡೆಯಾದರೆ ಒಟ್ಟು ಜನಸಂಖ್ಯೆ ಲಕ್ಷ ದಾಟುತ್ತದೆ. ಆಗ ಗ್ರೇಡ್ 1ಮಾನ್ಯತೆ ಲಭ್ಯವಾಗುತ್ತದೆ. ಇದರಿಂದ ಸರಕಾರ ಅನುದಾನ, ನಗರಸಭೆ ಸದಸ್ಯರ ಸಂಖ್ಯೆಯೂ ಹೆಚ್ಚಳವಾಗುತ್ತದೆ.
ಬಾಕ್ಸ್
ಯಾವ ಗ್ರಾಪಂಗಳ ಒಪ್ಪಿಗೆ
ತಮ್ಮ ವ್ಯಾಪ್ತಿಯ ಪ್ರದೇಶಗಳನ್ನು ಶಿರಸಿ ನಗರಕ್ಕೆ ಸೇರಿಸಲು ಒಪ್ಪಿಗೆ ಸೂಚಿಸಿ ಈಗಾಗಲೇ ದೊಡ್ನಳ್ಳಿ, ಇಸಳೂರು, ಯಡಳ್ಳಿ, ಕುಳವೆ ಗ್ರಾಪಂಗಳು ಪುನಃ ಠರಾವು ಸ್ವೀಕರಿಸಿ ವರದಿಯನ್ನು ನಗರಸಭೆಗೆ ಸಲ್ಲಿಸಿವೆ. ಈಗ ನಗರಸಭೆಯಲ್ಲಿಠರಾಯಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಮುಂದಾಗಲಾಗಿದೆ.
ಬಾಕ್ಸ್
ಯಾವ ಯಾವ ಪ್ರದೇಶಗಳು..
ಇಸಳೂರು ಗ್ರಾಪಂ ವ್ಯಾಪ್ತಿಯ ಚಿಪಗಿ, ದಮನಬೈಲ್ , ನಾರಾಯಣಗುರುನಗರ, ಲಂಡಕನಳ್ಳಿ, ಗೌಡಳ್ಳಿ, ದೊಡ್ನಳ್ಳಿ ಪಂಚಾಯಿತಿ ಒಳಗೊಂಡ ನಗರಕ್ಕೆ ತಾಗಿರುವ 140 ಎಕರೆ, ಲಂಡಕನಳ್ಳಿ, ಬಚಗಾಂವ, ಯಡಳ್ಳಿ ಗ್ರಾಪಂ ವ್ಯಾಪ್ತಿಯ ಕಲ್ಕುಣಿ, ಗಿಡಮಾವಿನಕಟ್ಟೆ, ಸಂಪಿನಕೆರೆ, ಕುಳವೆ ಗ್ರಾಮ ಪಂಚಾಯಿತಿ ತೆರಕನಹಳ್ಳಿಯ 43 ಎಕರೆ ಜಾಗ ಒಳಗೊಂಡಿದೆ.
ಕೋಟ್
ಶಿರಸಿ ನಗರಕ್ಕೆ ಸೇರಿಸಲು ಈಗಾಗಲೇ ಪುನಃ ಒಪ್ಪಿ ಠರಾಯಿಸಿ ಕಳುಹಿಸಿದ ಗ್ರಾಪಂಗಳ ಭಾಗಶಃ ಪ್ರದೇಶಗಳನ್ನು ನಗರಸಭೆ ವ್ಯಾಪ್ತಿಗೆ ತರಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುತ್ತೇವೆ.
-ಶರ್ಮಿಳಾ ಮಾದನಗೇರಿ, ಅಧ್ಯಕ್ಷೆ, ನಗರಸಭೆ ಶಿರಸಿ

