ಬದಿಯಡ್ಕ : ಬದಿಯಡ್ಕ ಪೊಲೀಸ್ ಠಾಣೆ ನೇತೃತ್ವದಲ್ಲಿ, ಎಸ್ ಪಿಸಿ, ಜನಮೈತ್ರಿ ಪೊಲೀಸ್ , ರೆಡ್ ಕ್ರಾಸ್ , ಸ್ಕೌಟ್ ಗೈಡ್ಸ್ , ವ್ಯಾಪಾರಿಗಳು ಮತ್ತು ಕೇರಳ ವ್ಯಾಪಾರ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ಘಟಕ ಮತ್ತು ನಾನಾ ಕ್ಲಬ್ ಗಳು ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ‘ರನ್ ಎಗೈನ್ಸ್ಟ್ ಡ್ರಗ್ಸ್ ಸೇ ನೋ ಟು ಡ್ರಗ್ಸ್ ’ ಎಂಬ ಘೋಷಣೆಯಡಿ ಗುಂಪು ಓಟ ಆಯೋಜಿಸಲಾಯಿತು.
ಬದಿಯಡ್ಕ ಗ್ರಾಪಂ ಉಪಾಧ್ಯಕ್ಷ ಅಬ್ಬಾಸ್ ಧ್ವಜಾರೋಹಣ ನೆರವೇರಿಸಿದ ರಾರ ಯಲಿಯಲ್ಲಿಬದಿಯಡ್ಕದಿಂದ ಪ್ರಾರಂಭವಾಗಿ ಬೋಳುಕಟ್ಟೆ ಮೈದಾನದ ಮೂಲಕ ಪೊಲೀಸ್ ಠಾಣೆಯಲ್ಲಿಕೊನೆಗೊಂಡಿತು. ಕೇರಳ ವ್ಯಾಪಾರ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ಘಟಕದ ಅಧ್ಯಕ್ಷ ನರೇಂದ್ರ ಬಿ.ಎನ್ ., ಎನ್ ಎಚ್ ಎಸ್ ಎಸ್ ಬದಿಯಡ್ಕ, ಎಸ್ ಡಿಪಿಎ, ಎಚ್ ಎಸ್ ಎಸ್ ಧರ್ಮತಡ್ಕ ಶಾಲೆಗಳ ವಿದ್ಯಾರ್ಥಿಗಳು, ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಬದಿಯಡ್ಕ ಎಸ್ ಐ ಸವ್ಯಸಾಚಿ, ಎಎಸ್ ಐ ಸುಕುಮಾರನ್ ರಾರ ಯಲಿಯನ್ನು ಸ್ವಾಗತಿಸಿದರು.
(31 ಬಿಎ ಬದಿಯಡ್ಕ)

