ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಎಚ್ಚರಿಕೆ
ಎರಡನೇ ಬೆಳೆಗೆ ನೀರು ಬಿಡದಿದ್ದರೆ ಹೋರಾಟ
ವಿಕ ಸುದ್ದಿಲೋಕ ಬಳ್ಳಾರಿ
‘‘ತುಂಗಭದ್ರಾ ಜಲಾಶಯ ವ್ಯಾಪ್ತಿಯ ರೈತರಿಗೆ ಎರಡನೇ ಬೆಳೆ ಬೆಳೆಯಲು ನೀರು ಬಿಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು,’’ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿಸುದ್ದಿಗೋಷ್ಠಿಯಲ್ಲಿಶುಕ್ರವಾರ ಮಾತನಾಡಿದ ಅವರು, ‘ತುಂಗಭದ್ರಾ ಜಲಾನಯ ವ್ಯಾಪ್ತಿಯಲ್ಲಿ16 ಲಕ್ಷಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿಬೆಳೆ ಬೆಳೆಯಲಾಗಿದ್ದು, ಮೊಂಥಾ ಮಾರುತ ಹಾಗೂ ಅಕಾಲಿಕ ಮಳೆಯಿಂದ ಈಗಾಗಲೇ ಭತ್ತ ನೆಲಕಚ್ಚಿದೆ. ಮೆಕ್ಕೆಜೋಳ, ನವಣೆ, ಮೆಣಸಿನಕಾಯಿ, ಹತ್ತಿ ಬೆಳೆಗಳು ಹಾಳಾಗಿದ್ದು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ,’’ ಎಂದು ಕಳಕಳ ವ್ಯಕ್ತಪಡಿಸಿದರು.
ಸಚಿವರು, ಶಾಸಕರಿಗೆ ಮನವರಿಕೆ:
‘‘ಮೊದಲು ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿತೀರ್ಮಾನಿಸಿದಂತೆ ಆಗಸ್ಟ್ ನಲ್ಲಿನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕಿತ್ತು. ಆದರೆ, ಆಗಸ್ಟ್ ಕಳೆದು ಎರಡು ತಿಂಗಳು ಕಳೆದರೂ ಸಭೆ ಕರೆದಿಲ್ಲ. ತುರ್ತಾಗಿ ಸಭೆ ಕರೆದು ಎರಡನೇ ಬೆಳೆಗೆ ನೀರು ಬಿಡುವ ಕುರಿತು ಹಾಗೂ ಜಲಾಶಯದ ಗೇಟ್ ದುರಸ್ತಿ ಚರ್ಚೆ ನಡೆಸಬೇಕು ಎಂದು ಸಂಬಂಧಿಸಿದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಚಿವ ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ನಾನಾ ಕ್ಷೇತ್ರಗಳ ಶಾಸಕರನ್ನು ಭೇಟಿ ಮಾಡಿ, ಸದ್ಯದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಲಾಗಿದೆ,’’ ಎಂದರು.
ಗೇಟ್ ದುರಸ್ತಿಗೆ 3 ತಿಂಗಳು ಸಾಕು:
‘‘ತುಂಗಾಭದ್ರಾ ಜಲಾಶಯದ ಗೇಟ್ ದುರಸ್ತಿಗೆ ಮೂರು ತಿಂಗಳು ಸಾಕು ಎಂದು ಎಂಜಿನಿಯರ್ ಕನ್ನಯ್ಯ ನಾಯ್ಡು ಹೇಳಿದ್ದಾರೆ. ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿಟಿಎಂಸಿ ಅಡಿ ನೀರಿನ ಸಂಗ್ರಹ, ಉತ್ತಮವಾದ ಒಳಹರಿವಿದೆ. ಆದರೆ ಜಲಾಶಯದಲ್ಲಿಹೊಸದಾಗಿ ಕ್ರಸ್ಟ್ ಗೇಟ್ ಗಳನ್ನು ಅಳವಡಿಸುವ ನೆಪದಲ್ಲಿರೈತರಿಗೆ ಎರಡನೆ ಬೆಳೆಗೆ ನೀರು ಬಿಡಲು ಸಾಧ್ಯವಿಲ್ಲಎನ್ನುವ ಸರಕಾರದ ಹೇಳಿಕೆ ಸರಿಯಲ್ಲ. ರಾಜ್ಯ ಸರಕಾರ ಜಲಾಶಯದ ನಿರ್ವಹಣೆ ತಜ್ಞರನ್ನು ನೇಮಕ ಮಾಡಿ ಕ್ರಸ್ಟ್ ಗೇಟ್ ಅಳವಡಿಕೆ ಹಾಗೂ ಜಲಾಶಯದ ಸುರಕ್ಷತೆ ಕುರಿತು ವರದಿ ಪಡೆದು ರೈತರ ಎರಡನೇ ಬೆಳೆಗೆ ನೀರು ಹರಿಸಬೇಕು,’’ ಎಂದು ಒತ್ತಾಯಿಸಿದರು.
ಸಂಘದ ಮುಖಂಡರಾದ ವೀರಭದ್ರ ನಾಯಕ್ , ಮೋಕಾ ಭೀಮಾಣ್ಣ, ಖಾಜಾಸಾಬ…, ಗೋವಿಂದಪ್ಪ ಇತರರಿದ್ದರು.
ಬಾಕ್ಸ್
ಜಿಲ್ಲಾಉಸ್ತುವಾರಿ ಸಚಿವರು, ಡಿಸಿಎಂಗೆ ಮನವಿ:
‘‘ಇತ್ತೀಚಿಗೆ ರಾಯಚೂರಿನಲ್ಲಿನಡೆದ ರೈತ ಮುಖಂಡರ ಸಭೆಯಲ್ಲಿಕೆಲ ತೀರ್ಮಾನ ಕೈಗೊಳ್ಳಲಾಗಿತ್ತು. ಆದರಂತೆ ಆ.31 ರಂದು ಪತ್ರಿಕಾಗೋಷ್ಠಿ ನಡೆಸಿ ಸದ್ಯದ ಪರಿಸ್ಥಿತಿಯನ್ನು ಸರಕಾರಕ್ಕೆ ತಿಳಿಸುವುದು. ನ.1ಕ್ಕೆ ಜಿಲ್ಲಾಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸುವುದು. ನ.3ಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಎರಡನೇ ಬೆಳೆಗೆ ನೀರು ಬಿಡುವಂತೆ ಹಾಗೂ ಜಲಾಶಯದ ಗೇಟ್ ದುರಸ್ತಿಗೊಳಿಸುವಂತೆ ಮನವಿ ಸಲ್ಲಿಸಲಾಗುವುದು. ಬಳಿಕ ಯಾವುದೇ ಮನವಿಗೆ ಸ್ಪಂದಿಸದಿದ್ದರೆ ನ.5ಕ್ಕೆ ಹೆದ್ದಾರಿ ಸಂಚಾರ ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
31 ಬಿಎಲ್ ವೈ ಪೀರಾಸಾಬ್ 01: ದರೂರು ಪುರುಷೋತ್ತಮ ಗೌಡ

