ವಿಕ ಸುದ್ದಿಲೋಕ ಗೌರಿಬಿದನೂರು
ವೀರ ಮದಕರಿ ಯುವ ಬ್ರಿಗೇಡ್ ಮತ್ತು ತಾಲೂಕು ನಾಯಕ ಸಂಘದ ವತಿಯಿಂದ ನ.2ರಂದು ನಗರದಲ್ಲಿಮೊಟ್ಟಮೊದಲ ಬಾರಿಗೆ ನಾಡ ದೊರೆ ಶ್ರೀ ರಾಜ ವೀರ ಮದಕರಿ ನಾಯಕರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನಾಯಕ ಸಮುದಾಯದ ಮುಖಂಡ ಆರ್ . ಅಶೋಕ್ ಕುಮಾರ್ ತಿಳಿಸಿದರು.
ನಗರದಲ್ಲಿಯುವ ಬ್ರಿಗೇಡ್ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ನ.2ರಂದು ಬೆಳಗ್ಗೆ 9 ಗಂಟೆಗೆ ನಗರದ ವಾಲ್ಮೀಕಿ ವೃತ್ತದಿಂದ ನಗರದ ರಾಜಬೀದಿಗಳಲ್ಲಿಕಲಾತಂಡಗಳೊಂದಿಗೆ ಶ್ರೀ ರಾಜ ವೀರಮದಕರಿ ನಾಯಕರ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆ ಕಾರ್ಯಕ್ರಮವನ್ನು ನಗರದ ಡಾ. ಎಚ್ .ಎನ್ . ಕಲಾಭವನದಲ್ಲಿಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿಮಾಜಿ ಸಚಿವ ರಾಜುಗೌಡ ನರಸಿಂಹನಾಯಕ, ವಿಶೇಷ ಆಹ್ವಾನಿತರಾಗಿ ರವಿ ಡಿ ಚನ್ನಣ್ಣವರ್ , ಆಂಧ್ರ ಸಂಸದ ಅಂಬಿಕಾ ಲಕ್ಷಿತ್ರ್ಮೕನಾರಾಯಣ್ , ಸಮುದಾಯದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಸಮುದಾಯದ ಮುಖಂಡ ಬಿ.ಎಲ್ . ರಂಗನಾಥ್ ಮಾತನಾಡಿ, ಯುವಕರನ್ನು ಮುಖ್ಯವಾಹಿನಿಗೆ ತರುವ ಹಾಗೂ ಸಂಘಟನಾ ಶಕ್ತಿ ತುಂಬುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯ ಸಮುದಾಯದವರು ಕಾರ್ಯಕ್ರಮದಲ್ಲಿಪಾಲ್ಗೊಳ್ಳಲಿದ್ದಾರೆ ಎಂದರು.
ಯುವ ಮುಖಂಡ ಎಸ್ .ವಿ.ಟಿ. ಲೋಕೇಶ್ ಮಾತನಾಡಿ, ವಾಲ್ಮೀಕಿ ಸಮುದಾಯದ ಯುವಕರು ಒಗ್ಗೂಡಿ ಈ ಬೃಹತ್ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿನೂರಾರು ಸಂಖ್ಯೆಯಲ್ಲಿಯುವಕರು ಬೈಕ್ ರಾರ ಯಲಿ ನಡೆಸಲಿದ್ದಾರೆ ಎಂದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್ .ಆರ್ . ಮಂಜುನಾಥ್ , ಪ್ರಶಾಂತ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿಸಮುದಾಯದ ಹಿರಿಯ ಮುಖಂಡರಾದ ಕರೇತಿಮ್ಮಯ್ಯ, ನಿರಂಜನ್ , ನಾರಾಯಣಸ್ವಾಮಿ, ನಾಗರಾಜಪ್ಪ, ನವೀನ್ , ಮೂರ್ತಿ, ಗಂಗಾಧರಪ್ಪ, ನಾಗರಾಜ್ , ಟಿ.ವಿ. ಮಂಜುನಾಥ್ ಭಾಗವಹಿಸಿದ್ದರು.
ಚಿತ್ರ31ಜಿಬಿಡಿ-1
ಯುವ ಬ್ರಿಗೇಡ್ ಮತ್ತು ತಾಲೂಕು ನಾಯಕ ಸಂಘದಿಂದ ನ.2ರಂದು ನಗರದಲ್ಲಿಮೊಟ್ಟಮೊದಲ ಬಾರಿಗೆ ನಾಡ ದೊರೆ ಶ್ರೀ ರಾಜ ವೀರ ಮದಕರಿ ನಾಯಕರ ಜಯಂತ್ಯುತ್ಸವ ಕುರಿತು ಸುದ್ದಿಗೋಷ್ಠಿ ನಡೆಯಿತು.

