ವಿಕ ಸುದ್ದಿಲೋಕ ಕೃಷ್ಣರಾಜನಗರ ಸಮಾಜದ ಸಹಕಾರದೊಂದಿಗೆ ಎಲ್ಲರ ಮನಮುಟ್ಟುವಂತೆ ಅರ್ಥಪೂರ್ಣವಾಗಿ ಈ ಬಾರಿ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿನ.8ರಂದು ಕನಕ ಜಯಂತಿ ಆಚರಣೆ ಮಾಡಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿನಡೆದ ಕನಕ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿಮುಖಂಡರು ನೀಡಿದ ಸಲಹೆಗಳನ್ನು ಆಲಿಸಿ ನಂತರ ಮಾತನಾಡಿದರು. ‘‘ನೂತನ ತಾಲೂಕಾಗಿ ರಚನೆಯಾಗಿರುವ ಸಾಲಿಗ್ರಾಮದಲ್ಲಿಈಗಾಗಲೇ ಬಸವ, ವಾಲ್ಮೀಕಿ, ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗಿದೆ. ಅಂತೆಯೇ ಕನಕ ಜಯಂತಿಯನ್ನು ಸಹ ನೂತನ ತಾಲೂಕಿನಲ್ಲಿಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ ಕನಕದಾಸರ ತತ್ತ್ವ, ಆದರ್ಶ, ಸಂದೇಶಗಳನ್ನು ಸಾರುವ ಕೆಲಸ ಮಾಡಲಾಗುವುದು,’’ ಎಂದರು. ‘‘ಎಲ್ಲರ ಆಶಯದಂತೆ ಅದ್ಧೂರಿಯಾಗಲ್ಲದೆ, ಸರಳವಾಗಿಯೂ ಅಲ್ಲದೆ ಎಲ್ಲರ ಮನಮುಟ್ಟುವಂತೆ ಕನಕರ ಸಂದೇಶ ಸಾರುವ ಮೂಲಕ ಜಾತ್ಯತೀತಿ, ಧರ್ಮಾತೀತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿಜಯಂತಿ ಆಚರಣೆ ಮಾಡಲು ಎಲ್ಲರೂ ಸಹಕರಿಸಿ,’’ ಎಂದು ಮನವಿ ಮಾಡಿದರು. ಸಭೆಯಲ್ಲಿರಾಜ್ಯ ಕುಕ್ಕುಟ ಮಹಾಮಂಡಳ ನಿರ್ದೇಶಕ ಎಸ್ .ಸಿದ್ದೇಗೌಡ, ಜಿ.ಪಂ. ಮಾಜಿ ಸದಸ್ಯ ಕೆಸ್ತೂರು ಕೊಪ್ಪಲು ಜಯರಾಮೇಗೌಡ, ಮಾರ್ಚಳ್ಳಿ ಶಿವರಾಂ, ಜಿ.ಆರ್ . ರಾಮೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರ್ನಹಳ್ಳಿ ಶಿವಣ್ಣ, ಪುರಸಭಾ ಸದಸ್ಯ ಕೋಳಿ ಪ್ರಕಾಶ್ , ನಟ, ಸಮಾಜದ ಮುಖಂಡರಾದ ರಾಂಕಿ, ಕುಪ್ಪೆ ಪ್ರಕಾಶ್ , ಗಂಧನಹಳ್ಳಿ ಹೇಮಂತ್ , ಗಂಧನಹಳ್ಳಿ ದೊಡ್ಡಯಜಮಾನ ಜಿ.ಎನ್ .ರಘು, ಮೂಡಲಕೊಪ್ಪಲು ಕೃಷ್ಣೇಗೌಡ, ಮಲ್ಲಿಕಾರ್ಜುನ ಮತ್ತಿತರರು ಸಲಹೆ ನೀಡಿದರು. ಗಂಧನಹಳ್ಳಿ ಡೇರಿ ಅಧ್ಯಕ್ಷ ಗಾಂಧಿ ಶಿವಣ್ಣ, ಡೇರಿ ನೌಕರರ ಸಂಘದ ಅಧ್ಯಕ್ಷ ಜಿ.ಆರ್ . ಮಹದೇವ್ , ಗಂಧನಹಳ್ಳಿ ಯೋಗೇಶ್ , ಪಿಗ್ಮಿ ರಾಜೇಗೌಡ, ಸಾಕರಾಜ್ , ಅಪ್ಪಾಜಿಗೌಡ, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್ ಹಾಜರಿದ್ದರು. ಕೃಷ್ಣರಾಜನಗರ ತಾಲೂಕು ದಂಡಾಧಿಕಾರಿ ಜಿ.ಸುರೇಂದ್ರ ಮೂರ್ತಿ, ಸಾಲಿಗ್ರಾಮ ತಾಲೂಕು ದಂಡಾಧಿಕಾರಿ ರುಕಿಯಾಬೇಗಂ ಮಾತನಾಡಿದರು. ತಾ.ಪಂ. ಇಒ ವಿ.ಪಿ. ಕುಲದೀಪ್ , ಸಾಲಿಗ್ರಾಮ ತಾ.ಪಂ. ಇಒ ರವಿ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿಪಾಲ್ಗೊಂಡಿದ್ದರು.

