ಪ್ರಧಿತಿಧಿಯೊಧಿಬ್ಬಧಿರಿಗೂ ಪಧಿರಿಧಿಸರ ಜಾಧಿಗೃತಿ ಅಧಿವಧಿಶ್ಯ
ವಿಕ ಸುದ್ದಿಲೋಕ ಧಾರವಾಡ
ಮಾಲಿನ್ಯ ತಡೆಗಟ್ಟುವಲ್ಲಿಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದು ಪರಿಸರ ತಜ್ಞ, ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ಜೆಎಸ್ ಎಸ್ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ವಿಜ್ಞಾನ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತಾಶ್ರಯದಲ್ಲಿನಡೆದ ಪರಿಸರ ಜಾಗೃತಿ ಕಾರ ್ಯಕ್ರಮದಲ್ಲಿ ಅಧಿವರು ಮಾತನಾಡಿದರು.
ಪರಿಸರ ರಕ್ಷಣೆ ವಿಚಾರವಾಗಿ ಮುಂಬರುವ ದಿನಗಳಲ್ಲಿವಿದ್ಯಾರ್ಥಿಗಳ ಪಾತ್ರವೇನು, ಭವಿಷ್ಯದ ಸ್ವತಂತ್ರ ಭಾರತದ ನಾಗರಿಕರಾಗಿ ಪರಿಸರದ ಸುಸ್ಥಿರತೆ ಕಾಪಾಡುವತ್ತ ಯೋಜನೆಗಳು ಏನಾಗಿರಬೇಕು, ಪ್ಲಾಸ್ಟಿಕ್ ಹಾಗೂ ಹಾನಿಕಾರಕ ವಸ್ತುಗಳ ಬಳಕೆಯ ನಿಗ್ರಹ ಕುರಿತು ಸವಿಸ್ತಾರವಾಗಿ ಹೇಳಿದರು.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಜಗದೀಶ ಆಯ್ .ಎಚ್ . ಮಾತನಾಡಿ, ವಿದ್ಯಾರ್ಥಿಗಳಿಗೆ ನಿರ್ಮಲ ಪರಿಸರ ಉಳಿಸುವಂತೆ ಪ್ರತಿಜ್ಞಾವಿಧಿ ಬೋಧಿಸಿ, ಪರಿಸರಕ್ಕೆ ಹಾನಿಕಾರಕವಾಗುವ ಪದಾರ್ಥಗಳ ನಿಷೇಧ ಮಾಡಲು ಪ್ರೇರೆಪಿಸಿದರು.
ಜೆಎಸ್ ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೆಂಕಟೇಶ ಮುತಾಲಿಕ ಮಾತನಾಡಿ ದರು.
ಎನ್ ಎಸ್ ಎಸ್ ಘಟಕದ ಅಧಿಕಾರಿ ಡಾ.ಮಂಜುನಾಥ ಪರಾರಿ ಹಾಗೂ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಪ್ರಾಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರತಿನಿಧಿಗಳಾದ ವಂದನಾ ಬಿರಾದರ ಹಾಗೂ ನಿಶಾ ಪಿ.ಎಸ್ . ಕಾರ ್ಯಕ್ರಮ ನಿರೂಪಿಸಿದರು. ಲಲಿತಕಲಾ ಸಂಘದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿಜ್ಞಾನ ಸಂಘದ ಅಧ್ಯಕ್ಷ ಡಾ. ರತ್ನಾ ಐರಸಂಗ ಸ್ವಾಗತಿಸಿದರು. ಬಿ.ಎಂ. ಬಿಂದುಶ್ರೀ ಪರಿಚಯಿಸಿದರು. ಎನ್ ಎಸ್ ಎಸ್ ಘಟಕದ ಅಧಿಕಾರಿ ಡಾ.ವ್ಹಿ. ಜಿ. ಪೂಜಾರ ವಂದಿಸಿದರು.
ಫೋಟೊ: 31ಮಹೇಶ6
ಧಾರವಾಡ ಜೆಎಸ್ ಎಸ್ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿನಧಿಡೆಧಿದ ಪರಿಸರ ಜಾಗೃತಿ ಕಾರ ್ಯಕ್ರಮಕ್ಕೆ ಡಾ. ಸಂಜೀವ ಕುಲಕರ್ಣಿ ಚಾಲನೆ ನೀಡಿದರು.

