ಬೆಳಗಾವಿ : ನಗರದ ಮರಾಠಾ ಲಘು ಪದಾತಿ ದಳ ಕೇಂದ್ರದ ಶಿವಾಜಿ ಸ್ಟೇಡಿಯಂನಲ್ಲಿಅಡಿಷನಲ್ ಸೌಥ್ ಇಂಡಿಯಾ ಸೆಕ್ಟರ್ ನೇತೃತ್ವದಲ್ಲಿಡಿ.7 ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮಾಜಿ ಸೈನಿಕರ ರಾರ ಯಲಿ ನಡೆಯಲಿದೆ. ಸೇವೆ, ಪಿಂಚಣಿ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಪರಿಹಾರೋಪಾಯ ಮತ್ತು ಮಾರ್ಗದರ್ಶನ ನೀಡಲಾಗುವುದು. ಮಾಜಿ ಸೈನಿಕರ ಅನುಕೂಲಕ್ಕಾಗಿ ವೈದ್ಯಕೀಯ ತಪಾಸಣೆ ಶಿಬಿರ ಹಾಗೂ ಹಣಕಾಸಿನ ವ್ಯವಹಾರದ ಸೌಲಭ್ಯ ಕಲ್ಪಿಸಲು ವಿವಿಧ ಬ್ಯಾಂಕ್ ಕೌಂಟರ್ ತೆರೆಯಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08312402821, 831350584 ಸಂಪರ್ಕಿಸಲು ಕೋರಲಾಗಿದೆ.

