ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯಿತಿಯ 2 ಮತ್ತು 3ನೇ ವಾರ್ಡ್ ನ ಕೃಷಿಕರಿಗಾಗಿ ಕದಿರ್ ಆಪ್ ನೋಂದಾವಣೆ ನ.1ರಂದು ನಡೆಸಲಾಗುವುದು.
ಎಲ್ಲಕೃಷಿಕರಿಗೂ ಕದಿರ್ ಐಡಿ ಕಾರ್ಡ್ ಲಭ್ಯವಾಗಲು ಈ ನೋಂದಾವಣೆ ಮಾಡಲಾಗುತ್ತಿದ್ದು, ನ. 1ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ 2ನೇ ವಾರ್ಡ್ ನ ಕೃಷಿಕರಿಗೂ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಗೆವರೆಗೆ 3ನೇ ವಾರ್ಡ್ ನ ಕೃಷಿಕರಿಗೂ ಕೃಷಿ ಭವನದಲ್ಲೇ ನೋಂದಾವಣೆ ಮಾಡಲಾಗುವುದು. ಕೃಷಿಕರು ಪ್ರಯೋಜನ ಪಡೆದುಕೊಳ್ಳಬೇಕೆಂದು ಕೃಷಿಭವನದ ಪ್ರಕಟಣೆಯಲ್ಲಿತಿಳಿಸಲಾಗಿದೆ. ನೋಂದಾವಣೆಗಾಗಿ ಆಧಾರ್ ಕಾರ್ಡ್ , ಆಧಾರ್ ಲಿಂಕ್ ಆಗಿರುವ ಫೋನ್ , ಬ್ಯಾಂಕ್ ಪಾಸ್ ಬುಕ್ , ಈ ವರ್ಷದ ತೀರುವೆ ರಶೀದಿ, ಪಾಸ್ ಪೋರ್ಟ್ ಸೈಜ್ ಫೋಟೋ, ರೇಷನ್ ಕಾರ್ಡ್ , ಕೃಷಿ ಕನೆಕ್ಷನ್ ನ ಕರೆಂಟ್ ಬಿಲ್ ್ಲಗಳನ್ನು ತರಬೇಕು.

