ಭಾರತದ ಉಳಿವು ಒಗ್ಗಟ್ಟಿನಲ್ಲಿದೆ
* ಬೈಲುಕುಪ್ಪೆ ವೃತ್ತ ನಿರೀಕ್ಷಕ ದೀಪಕ್ ಅಭಿಮತ
ವಿಕ ಸುದ್ದಿಲೋಕ ಬೈಲುಕುಪ್ಪೆ
ಭಾರತದ ಉಳಿವು ಒಗ್ಗಟ್ಟಿನಲ್ಲಿದೆ ಎಂದು ಬೈಲುಕುಪ್ಪೆ ವೃತ್ತ ನಿರೀಕ್ಷಕ ದೀಪಕ್ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ವೃತ್ತ ಮತ್ತು ಬೆಟ್ಟದಪುರ ಪೊಲೀಸ್ ಠಾಣೆ ವತಿಯಿಂದ ಕೊಪ್ಪ ಕಾವೇರಿ ಮಾತೆ ಆವರಣದಲ್ಲಿರಾಷ್ಟ್ರೀಯ ಏಕತೆ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮ್ಯಾರಥಾನ್ ಗೆ ಚಾಲನೆ ನೀಡಿ ಮಾತನಾಡಿದರು.
‘‘ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿಹರಿದು ಹಂಚಿಹೋಗಿದ್ದ ಭಾರತವನ್ನು ಒಂದುಗೂಡಿಸಿದ ಭಾರತದ ಉಕ್ಕಿನ ಮನುಷ್ಯ, ದೇಶದ ಮೊದಲ ಗೃಹ ಸಚಿವ ಸರ್ಧಾರ್ ವಲ್ಲಭಬಾಯಿ ಪಟೇಲ… ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಪಟೇಲ್ ಅವರ ಗೌರವಾರ್ಥ ದಿನವನ್ನು ಎಲ್ಲರೂ ಸ್ಮರಿಸಬೇಕು,’’ ಎಂದರು.
ಕಾವೇರಿ ಮಾತೆ ಆವರಣದಿಂದ ಬಿ.ಎಂ.ರಸ್ತೆ ಮಾರ್ಗ ಬೈಲುಕುಪ್ಪೆ ಪೊಲೀಸ್ ಠಾಣೆ ತನಕ ಪೆರೇಡ್ ಮೂಲಕ ಬಂದು ತಲುಪಿದರು. ಇದೇ ಸಂದರ್ಭ ಬೈಲುಕುಪ್ಪೆ ಪಿಎಸ್ ಐ ರವಿಕುಮಾರ್ , ಬೆಟ್ಟದಪುರ ಪಿಎಸ್ ಐ ಅಜಯ್ ಕುಮಾರ್ , ಪೊಲೀಸ್ ಸಿಬ್ಬಂದಿ ಇದ್ದರು.
ಫೋಟೋ 01
ಕೊಪ್ಪದ ಕಾವೇರಿ ಮಾತೆ ಪ್ರತಿಮೆ ಆವರಣದಲ್ಲಿಏಕತಾ ದಿನದ ಅಂಗವಾಗಿ ಮ್ಯಾರಥಾನ್ ನಡೆಯಿತು.

