ವೆಂಕಟರಮಣಸ್ವಾಮಿ ಕಾಲೇಜಿನಲ್ಲಿಏಕತಾ ದಿನಾಚರಣೆ

Contributed bymambadynews@gmail.com|Vijaya Karnataka
Subscribe

ಬಂಟ್ವಾಳದ ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಆಚರಿಸಲಾಯಿತು. ಸರ್ದಾರ್‌ ವಲ್ಲಭಾಯ್‌ ಪಟೇಲರ ದೇಶ ಸೇವೆಯನ್ನು ಸ್ಮರಿಸಲಾಯಿತು. ಯುವಜನತೆ ಅವರನ್ನು ಆದರ್ಶವಾಗಿರಿಸಿಕೊಳ್ಳಬೇಕು ಎಂದು ಪ್ರಿನ್ಸಿಪಾಲ್‌ ಎಂ.ಡಿ. ಮಂಚಿ ಹೇಳಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಐ.ಕ್ಯೂ.ಎ.ಸಿ. ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಏಕತಾ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

national unity day celebration at venkataramanaswamy college

ವಿಕ ಸುದ್ದಿಲೋಕ ಬಂಟ್ವಾಳ

ಸ್ವತಂತ್ರ ಭಾರತವನ್ನು ಒಗ್ಗೂಡಿಸುವಲ್ಲಿಸರ್ದಾರ್ ವಲ್ಲಭಾಯ್ ಪಟೇಲರ ಯೋಗದಾನ ಮಹತ್ತರವಾದುದು. ಉಕ್ಕಿನ ಮನುಷ್ಯನೆಂದೇ ಪ್ರಸಿದ್ಧರಾದ ಅವರು ಸ್ವತಂತ್ರ ಭಾರತದ ಮೊಟ್ಟಮೊದಲ ಗೃಹಮಂತ್ರಿಯಾಗಿ ದೇಶಕ್ಕೆ ನೀಡಿದ ಸೇವೆ ಅನುಪಮವಾದುದು. ಅವರನ್ನು ಇಂದಿನ ಯುವಜನತೆ ಆದರ್ಶವಾಗಿರಿಸಿಕೊಂಡು ಮುನ್ನಡೆಯಬೇಕು ಎಂದು ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ ಪ್ರಿನ್ಸಿಪಾಲ್ ಎಂ.ಡಿ. ಮಂಚಿ ಹೇಳಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಐ.ಕ್ಯೂ.ಎ.ಸಿ. ಆಶ್ರಯದಲ್ಲಿನಡೆದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತ್ರಿ ಎಚ್ .ವಿ. ಏಕತಾ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶಿವಣ್ಣ ಪ್ರಭು ಹಾಗೂ ಬಿ.ಆರ್ .ಎಂ.ಪಿ.ಸಿ. ಶಾಲೆಯ ಕನ್ನಡ ಶಿಕ್ಷಕ ಮನೋಹರ ಎಸ್ . ದೊಡಮನಿ ಉಪಸ್ಥಿತರಿದ್ದರು.

ಚಿತ್ರ: 31ಬಿಎಚ್ ಏಕತಾ

ಬಂಟ್ವಾಳ ಎಸ್ .ವಿ.ಎಸ್ . ಕಾಲೇಜಿನಲ್ಲಿರಾಷ್ಟ್ರೀಯ ಏಕತಾ ದಿನಾಚರಣೆ ನಡೆಯಿತು.

ಸಂಬಂಧಿತ ಸುದ್ದಿ

Kannada News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ